HomeScript to screenI’ve a story idea! What next? ನಿಮ್ಮ ಆಲೋಚನೆಯನ್ನು ಕಥೆಯಾಗಿಸುವುದು ಹೇಗೆ?

I’ve a story idea! What next? ನಿಮ್ಮ ಆಲೋಚನೆಯನ್ನು ಕಥೆಯಾಗಿಸುವುದು ಹೇಗೆ?

- Advertisement -spot_img

I’ve an story idea! What next? ಆರಂಭದ ಬರಹಗಾರರಲ್ಲಿ ತಮ್ಮಲ್ಲಿರುವ ಆಲೋಚನೆಯೊಂದನ್ನು ಕಥೆಯನ್ನಾಗಿ ಪರಿವರ್ತಿಸುವ ಸಾಕಷ್ಟು ಪ್ರಯತ್ನದೊಂದಿಗೆ ವಿಫಲರಾಗಿಬಿಡುತ್ತಾರೆ. ತಮ್ಮ ಒಂದು ಅಧ್ಬುತ ಕಲ್ಪನೆಯನ್ನು ಚಿತ್ರಕಥೆಯಾಗಿ ರೂಪುಗೊಳಿಸಲು ಏನೆಲ್ಲಾ ಅಂಶಗಳನ್ನು ಅನುಸರಿಸಬೇಕಾಗುತ್ತದೆ? ಹಾಗೂ ಅದನ್ನು ಅಭೂತಪೂರ್ವ ಕಥೆಯಾಗಿ ಮಾರ್ಪಾಡಿಸಲು ಬೇಕಾಗುವ ಸಲಹೆ ಟಿಪ್ಪಣಿಗಳನ್ನು ಈ ಲೇಖನದ ಮೂಲಕ ಅಭ್ಯಸಿಸಿಕೊಳ್ಳಿ.      

ಪ್ರತಿಯೊಬ್ಬ ಬರಹಗಾರನಲ್ಲಿ ತನ್ನದೇ ಆದ ಕ್ರಿಯಾಶೀಲ ಬರವಣಿಗೆಯನ್ನು ಹೊಂದಿರುತ್ತಾನೆ, ಆ ಕ್ರಿಯಾಶೀಲತೆಯನ್ನು ಮೊದಲಿಗೆ ಕಂಡುಕೊಳ್ಳುವುದು ಆರಂಭದ ಕಲಿಕೆ. ಉದಾ: ಮೊದಲನೆಯದಾಗಿ ಕಥೆಯ ಕೇಂದ್ರ ಬಿಂದು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಕಥಾವಸ್ತುವನ್ನು ರಚಿಸುವುದು. ಎರಡನೆಯದಾಗಿ ಕೆಲವು ಕಲ್ಪಿತ ಘಟನೆಗಳನ್ನು ಆಧರಿಸಿ ಅವುಗಳನ್ನು ಒಟ್ಟಾರೆ ರೂಪುಗೊಳಿಸಿ ಕಥೆಯನ್ನಾಗಿಸುವುದು. ಈ ಎರಡೂ ಪ್ರಕಾರಗಳು ಕಥೆಯನ್ನು ವಿಸ್ತೃತವಾಗಿಸಲು ಉಪಯುಕ್ತ ಆದರೆ ಕಥೆಯ ಮೂಲ ಕಲ್ಪನೆಗೂ ಅದರ ಅಂತ್ಯವೂ ಪರಿಪೂರ್ಣತೆಯನ್ನು ಹೊಂದುವುದು ಬಹಳ ಕಷ್ಟ.

ಈ ಲೇಖನವು ನಿಮ್ಮ ಸಣ್ಣ ಕಲ್ಪನೆ ಅಥವಾ ಆಲೋಚನೆಯೊಂದನ್ನು ಆಸಕ್ತಿದಾಯಕ ಕಥೆಯನ್ನಾಗಿ ರೂಪುಗೊಳಿಸಲು ಸುಲಭ ಸೂತ್ರಗಳೊಂದಿಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಿಮ್ಮ ಕಥೆಯ ಕಲ್ಪನೆಯನ್ನು ವಿಸ್ತೃತವಾಗಿ ಬಲಪಡಿಸಲು ಮತ್ತು ನಿಮ್ಮ ಕಥೆಗಾರ ಕೌಶಲ್ಯವನ್ನು ಹೆಚ್ಚಿಸುತ್ತದೆ.

ಕಥೆಯ ಕಲ್ಪನೆಗಳನ್ನು ಬೆಳೆಸುವುದು ಹೇಗೆ? ಈ ಕುರಿತಾದ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ story idea! ಒಂದು ವಾಕ್ಯದಲ್ಲಿ ಬರೆದುಕೊಳ್ಳಿ

ಒಂದು ಕಲ್ಪನೆಯು ಅನಿರ್ದಿಷ್ಟತೆಯಿಂದ ಕೂಡಿರುತ್ತದೆ, ಯಾವುದೋ ಘಟನೆ ನಿಮ್ಮನ್ನು ಕಾಡಲು ಆರಂಭಿಸಿದರೆ ಆ ಘಟನೆ ಸಮಗ್ರ ತನಿಖೆಯಾಗಬೇಕಾಗುತ್ತದೆ. ಯಾಕೆ? ಏನು? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಆಧರಿಸಿ ಸಂಕ್ಷಿಪ್ತವಾಗಿ ಒಂದೇ ವಾಕ್ಯಕ್ಕೆ ಅಥವಾ ಒಂದೇ ಸಾಲಿನಲ್ಲಿ ಬರುವಂತೆ ಬರೆದುಕೊಳ್ಳಬೇಕು (ಉದಾ: ಮೂಕ ಪಾಕಿಸ್ತಾನಿ ಹುಡುಗಿ ಮುನ್ನಿಯನ್ನು ಮರಳಿ ತನ್ನ ತಾಯ್ನಾಡಿನ ಕುಟುಂಬದೊಂದಿಗೆ ಸೇರಿಸುವ ನಿಷ್ಟಾವಂತ ಸಹೃದಯ ವ್ಯಕ್ತಿ ಪವನ್. -ಭಜರಂಗಿ ಭಾಯಿಜಾನ್). ಒಂದುವೇಳೆ ಸಂಕ್ಷಿಪ್ತವಾಗಿ ಬರೆಯಲು ಬಾರದೇ ಹೋದಲ್ಲಿ ಅಂತಹ ಕಥೆಯನ್ನು ಪುಷ್ಟೀಕರಿಸುವುದರಿಂದ ಯಾವುದೇ ಪ್ರಯೋಜನವಿರುವುದಿಲ್ಲ, ನಿರ್ಧಿಷ್ಟ ಕಲ್ಪನೆ ಆಲೋಚನೆಯೊಂದಿಗೆ ಮಾತ್ರವೇ ಮುಂದುವರೆಯುವುದು ಸೂಕ್ತ.

ಕಲ್ಪನೆಯ ಮೂಲ ಸಮಸ್ಯೆಯನ್ನು ಅರಿತುಕೊಳ್ಳಿ

ಕಥೆಯು ಮುಖ್ಯ ಸಂಘರ್ಷವನ್ನು ಅವಲಂಭಿಸಿರುತ್ತದೆ (Core conflict) ಅದುವೇ ಕಥೆಯ ಕೇಂದ್ರಬಿಂದು ಆಗಿರುವುದರಿಂದ ನಿಮ್ಮ ಆಲೋಚನೆಯಲ್ಲಿ ಅಂತಹ ಮುಖ್ಯ ಸಂಘರ್ಷ ಯಾವುದು ಎಂದು ಗುರುತಿಸಿಕೊಳ್ಳಿ ಏಕೆಂದರೆ ಕಥೆಯು ಪೂರ್ಣ ಪ್ರಮಾಣದಲ್ಲಿ ವೃದ್ದಿಯಾಗಬೇಕಾದರೆ ಆ ಕಥಾ ಪಾತ್ರಗಳಿಗೆ ನಿರ್ಧಿಷ್ಟ ಅಡೆತಡೆಗಳು ಸೃಷ್ಟಿಸಲು, ಪ್ರೇಕ್ಷಕರಲ್ಲಿ ಆತಂಕ ಹೆಚ್ಚಿಸಲು ಸಂಘರ್ಷವು ಮುಖ್ಯ ಪಾತ್ರವಹಿಸುತ್ತದೆ.

ಗುರಿ, ವೈಫಲ್ಯ ಮತ್ತು ಪರಿಣಾಮಗಳನ್ನು ಕಂಡುಕೊಳ್ಳಿ

ಅನೇಕ ಕಥೆಗಳು ಆಸಕ್ತಿ, ಕೌತುಕವನ್ನುಂಟು ಮಾಡದೇ ಬೇಸರ ತರಿಸುವುದು ಅಥವಾ ನೀರಸವಾಗಿರಿಸುವುದು ಕಥೆಗೆ ನಿರ್ದಿಷ್ಟ ಗುರಿ/ಲಕ್ಷ್ಯ ಸ್ಪಷ್ಟವಾಗಿ ಇಲ್ಲದೇ ಇರುವುದು, ಅಂತಹ ಕಥೆಗಳಾವೂ ಆಕರ್ಶಿಸುವುದಿಲ್ಲ ಉದಾಹರಣೆಗೆ; ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಪವನ್(ಸಲ್ಮಾನ್ ಖಾನ್) ಬಾಲಕಿ ಮುನ್ನಿಯನ್ನು ಪುನಃ ತನ್ನ ತಾಯ್ನಾಡಿಗೆ ಸೇರಿಸುವುದೇ ಮುಖ್ಯ ಧ್ಯೇಯ, ಗುರಿ. ಈ ಕಥೆಯಲ್ಲಿ ನಾಯಕ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತ ಗುರಿತಲುಪುತ್ತಾನೆ ಪರಿಣಾಮವಾಗಿ ಯಶಸ್ಸು ಮತ್ತು ಭಾವೋದ್ವೇಗಗಳಿಂದ ಕಥೆಯು ಪರಿಪೂರ್ಣವಾಗಿ ಅಂತ್ಯ ಕಾಣುತ್ತದೆ.

ಹೀಗೆ ಒಂದು ಕಥೆಗೆ ಗುರಿ ಎನ್ನುವುದು ಎಷ್ಟು ಮುಖ್ಯವೋ ಅದಕ್ಕೆ ಎದುರಾಗುವ ಸಮಸ್ಯಗಳೂ ಅಷ್ಟೇ ಮುಖ್ಯ ಅವುಗಳೆಲ್ಲವನ್ನೂ ಮೀರಿ ನಾಯಕ ವಿಜಯೀಶಾಲಿ ಯಾಗುವುದು ಕಥೆಯ ಒಂದು ಪರಿಧಿಯನ್ನು ಸೃಷ್ಟಿಸುತ್ತದೆ ಆ ಚೌಕಟ್ಟಿನೊಳಗೇ ಕಥೆಯನ್ನು ಹಿಡಿದಿಡಲಾಗುತ್ತದೆ ಕಥೆಗೆ ನೈಜತೆಯನ್ನೂ ಮೌಲ್ಯವನ್ನೂ ಕೊಟ್ಟಾಗ ಪ್ರೇಕ್ಷಕರಲ್ಲಿ ಸಂತೃಪ್ತಿ ಮನೋಭಾವನೆಯನ್ನು ನೀಡುತ್ತದೆ,

ಇಂತಹ ಕೆಲವು ಪ್ರಶ್ನೆಗಳು ನಿಮ್ಮ ಕಥೆಯಲ್ಲಿವೇ ಒಂದುಬಾರಿ ಗಮನಿಸಿ.
  • ವೈಫಲ್ಯ ಮತ್ತು ಎದುರಾಗುವ ಸಮಸ್ಯೆಯಿಂದ ಯಾರಿಗೆ ಹೆಚ್ಚು ಘಾಸಿಯನ್ನುಂಟು ಮಾಡುತ್ತದೆ?
  • ಯಾರಿಗೆ ಅನುಕೂಲವಾಗತ್ತದೆ?
  • ಎದುರಾಗುವ ಸಮಸ್ಯೆಗಳಿಂದ ವಿಮುಖನಾ‍ಗಿ ವೈಫಲ್ಯವನ್ನು ಸ್ವೀಕರಿಸುವುದರಿಂದ ಆಗುವ ನಷ್ಟವೇನು?
  • ಅಂತಿಮವಾಗಿ ಕಥೆಯು ನಾಯಕ ವಿಜಯಶಾಲಿಯಾಗುವುದರಿಂದ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆಯೇ?
Story idea a silhouette of imagining a story abstract

ಕಥಾ ನಾಯಕನ ಆಯ್ಕೆ

ಕಥೆಗಳು ಆಸಕ್ತಿದಾಯಕವಾಗಿರಲು ಅಷ್ಟೇ ಆಸಕ್ತಿ ಇರುವ ಸವಾಲುಗಳಿರಬೇಕು ಅದನ್ನು ಧೈರ್ಯಶಾಲಿಯಾಗಿ ಚಾಣಾಕ್ಷ ರೀತಿಯಲ್ಲಿ ಬಗೆಹರಿಸುವಂತಹ ನಾಯಕನಿರಬೇಕು. ಹೆಚ್ಚೆಚ್ಚು ಅಪಾಯಗಳು ಎದುರಾದಂತೆಲ್ಲಾ ನಾಯಕನು ತನ್ನ ಬಲವನ್ನು ವೃದ್ಧಿಸಿಕೊಳ್ಳುತ್ತಾನೆ ಮತ್ತು ಬುದ್ದಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಗುರಿಯನ್ನು ತಲುಪುತ್ತಾನೆ ಇಂತಹ ನಾಯಕನ ಅವಶ್ಯಕತೆ ಪ್ರತಿಕಥೆಯಲ್ಲೂ ಇರುತ್ತದೆ.

ಕೆಲವು ಕಥೆಗಳಲ್ಲಿ ಸಮಸ್ಯೆಗಳು ಎದುರಾದಾಗ ನಾಯಕನನ್ನು ಪರಿಚಯಿಸುತ್ತಾರೆ, ಇನ್ನು ಕೆಲವು ಕಥೆಗಳಲ್ಲಿ ನಾಯಕನ ಪರಿಚಯದ ನಂತರ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ, ಈ ಮೂಲಕ ಆ ಅಪಾಯದ ವಿರುದ್ದವಾಗಿ ಹೋರಾಡುವ ನಾಯಕನನ್ನು ಪ್ರತೀ ಕಥೆಯೂ ಸ್ವಾದಿಷ್ಟವಾಗಿ ಬಿಂಬಿಸಲಾಗುತ್ತದೆ.

ಒಂದು ಸಣ್ಣ ಟಿಪ್ಪಣಿ ಬರೆದುಕೊಳ್ಳಿ ನಿಮ್ಮ ನಾಯಕನ ಸಾಮರ್ಥ್ಯ ಸವಾಲುಗಳನ್ನು ಬರೆದುಕೊಳ್ಳಿ
  • ಎದುರಾದ ಸಮಸ್ಯೆಯೊಂದಿಗೆ ಹೋರಾಡುವ ಮೂಲಕ ಯಾರು ಯಾವುದನ್ನು ಕಳೆದುಕೊಳ್ಳುತ್ತಾರೆ? ( ಇದು ನಿಮ್ಮ ಕೇಂದ್ರ ಗುರಿಯನ್ನು ತಲುಪಲು ಸಹಾಯವಾಗುತ್ತದೆ)
  • ಈ ಸಮಸ್ಯೆ್ಎ ನೇರಾ-ನೇರಾ ಹೋರಾಡುವ ಶಕ್ತಿಶಾಲಿ ವ್ಯಕ್ತಿ ಯಾರು? ಮತ್ತು ಏಕೆ? ( ಕಾರ್ಯ ಸಾಧಕನಾಗದೇ ಹೋದಲ್ಲಿ ಉತ್ತಮ ನಾಯಕ ಎನಿಸಿಕೊಳ್ಳಲಾರ)
  • ಮುಖ್ಯ ಸಂಘರ್ಷ ( ಈ ಸಂಘರ್ಷ/ ಸವಾಲು ನಾಯಕನನ್ನು ಕೇಂದ್ರೀಕರಿಸುವಂತಿರಬೇಕು)
  • ಸವಾಲಿಗೆ ಹೆದರಿದ ಹಿಂತಿರುಗಲು ಮುಂದಾಗುವ ನಾಯಕನನ್ನು ಪ್ರೇರೇಪಿಸುವುದು ಯಾರು? ಮತ್ತು ಏಕೆ? ( ಒಳ್ಳೆಯ ನಾಯಕನಿಗೆ ಒಳ್ಳೆಯ ಸದುದ್ದೇಶ ಮುಖ್ಯ)

ಪ್ರಭಾವ ಶಾಲಿ ಎದುರಾಳಿಯ ಆಯ್ಕೆ

ಎಲ್ಲಾ ಕಥೆಗಳಲ್ಲಿ ಎದುರಾಳಿಯ ಅವಶ್ಯಕತೆ ಇರುವುದಿಲ್ಲ ಕೆಲವೊಮ್ಮೆ ನಾಯಕನ ಎದುರಾಳಿಯಾಗಿ ನಿರ್ಧಿಷ್ಟ ವ್ಯವಸ್ಥೆ, ವಿಕೋಪ, ಆಂತರಿಕ ಕಲಹಗಳೂ ಆಗಬಹುದು, ಕಥೆಯ ಆಯ್ಕೆಯು ಎದುರಾಳಿಯನ್ನು ನಿರ್ಧರಿಸುತ್ತದೆ. ನಾಯಕನಿಗೆ ಸವಾಲುಗಳನ್ನು ಒಡ್ಡುವ ಯಾವುದೇ ಸ್ಥಿತಿ/ವ್ಯಕ್ತಿ ಆತನಿಗೆ ಗುರಿ ತಲುಪಲು ಅಡೆ-ತಡೆಗಳನ್ನು ಸೃಷ್ಟಿಸಲಾಗತ್ತದೆ.

ಈ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
  • ನಾಯಕನಿಗೆ ಸವಾಲು ಹಾಕುವ ಸಾಮರ್ಥ್ಯ ಯಾರಿಗೆ ಅಥವಾ ಯಾವುದಕ್ಕೆ ಇದೆ?
  • ನಾಯಕನಿಗೆ ಸವಾಲು ಎದುರಿಸುವಂತೆ ಮಾಡುವುದಕ್ಕೆ ಕಾರಣವೇನು?
  • ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುವ ಸಾಮರ್ಥ್ಯ ಯಾರಿಗಿದೆ?
  • ಹೀಗೆಲ್ಲಾ ಮಾಡಲು ನಿರ್ದಿಷ್ಟ ಕಾರಣವೇನು?

ಕಥಾ ನಾಯಕನ ಗುರಿ

ಮೊದಲೇ ಹೇಳಿದಂತೆ ಕಥಾ ನಾಯಕನಿಗೆ ನಿರ್ಧಿಷ್ಟ ಗುರಿ ಇರಬೇಕು ಅದುವೇ ಇಡೀ ಕಥೆಯನ್ನು ಆಧರಿಸಿರುತ್ತದೆ. ಆತ ತನ್ನ ಎದುರಾಳಿಯನ್ನು ಅಥವಾ ಸಮಸ್ಯೆಯನ್ನು ಶೀಘ್ರವೇ ಕಂಡುಕೊಳ್ಳುವಂತಿರಬೇಕು ಹಾಗೂ ಅದಕ್ಕೆತಕ್ಕ ತೀರ್ಮಾನ ಸಿದ್ದತೆಗಳನ್ನು ನಡೆಸಿಕೊಳ್ಳುವವನಾಗಿರಬೇಕು.

ಕಥೆಯ ಮುಖ್ಯ ಸಂಘರ್ಷವೇ ನಾಯಕನ ಆಯ್ಕೆ ಮತ್ತು ಗುರಿ ಎರಡೂ ಒಂದು ಕೇಂದ್ರ ಬಿಂದುವಿನಲ್ಲಿ ಪಯಣಿಸುವಂತಿರಬೇಕು ಇಲ್ಲದೇ ಹೋದಲ್ಲಿ ಕಥೆಯು ಹಾದಿತಪ್ಪಿ ಹಿಡಿತಕ್ಕೆ ಸಿಗದಂತೆ ಗೊಂದಲ ಸೃಷ್ಟಿಯಾಗುತ್ತದೆ.

story idea image features silhouette of super heroine

ಕಥೆಯ ಪ್ರೇರಣೆ.

ನಾಯಕ, ವಿರೋಧಿ, ಪಣ/ಧ್ಯೇಯ ಇವುಗಳನ್ನೊಮ್ಮೆ ಗಮನಿಸಿ ಮತ್ತು ಯೋಚಿಸಿ ನಾವು ಇವುಗಳಿಗೆ ಏಕೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂಬುದನ್ನು ಆಲೋಚಿಸಿ ಬರೆದುಕೊಳ್ಳಿ, ಹಂತ ಹಂತ ವಾಗಿ ವಿಂಗಡಿಸಿ ಪ್ರತಿ ಹಂತಗಳಿಗೂ ಕಾರಣಗಳನ್ನು ಬರೆದುಕೊಳ್ಳಿ. ಕಾರಣ ಯಾವುದೇ ಆಗಿರಲಿ ಕಥೆಯು ನಿರ್ಧಿಷ್ಟ ರೂಪ ಪಡೆಯುತ್ತಿದೆಯೇ? ಅಥವಾ ಕಾರಣಗಳಿಲ್ಲದೇ ಕಥೆ ಮುಂದುವರೆಯುತ್ತಿದ್ದರೆ ಈಗಲೇ ಅವುಗಳನ್ನು ಸರಿಪಡಿಸಿಕೊಳ್ಳಿ ನಂತರ ನಾಯಕನ ಹೋರಾಟದ ವಿಧಿಯನ್ನು ಮೂರೂ ಹಂತಗಳಿಗೆ ವಿಭಜಿಸಿ ಕಾರಣ ಬರೆಯಿರಿ ನಾಯಕನಿಗೆ ಒಂದನೇ ಹಂತದಲ್ಲಿ ಎದುರಾಗುವ ಸವಾಲು ಏನು? ಏತಕ್ಕಾಗಿ ನಾಯಕನು ಸವಾಲನ್ನು ಸ್ವೀಕರಿಸಿದ್ದಾನೆ ಸವಾಲು ಸ್ವೀಕರಿಸುವ ಪ್ರಮೇಯವಾದರೂ ಏನು? ಎಂಬುದನ್ನು ವಿಶ್ಲೇಷಿಸಿ ಹೀಗೆ ಮೂರೂ ಹಂತಗಳಿಗೂ ಬರೆಯಿರಿ.

ಈಗ ವಿರೋಧಿ/ಖಳನಾಯಕ ಕಾರಣವನ್ನು ಬರೆಯಿರಿ ನಾಯಕನೊಂದಿಗೆ ಎದುರಾಳಿಯಾಗಿ ನಿಲ್ಲುವ ಕಾರಣವನ್ನು ಮೊದಲನೇ ಹಂತದಲ್ಲಿ ಬರೆದು ಉಳಿದ ಮೂರೂ ಹಂತಗಳಿಗೆ ಸವಾಲುಗಳನ್ನು ಹಾಕುವ ಕಾರಣ ಬರೆದುಕೊಳ್ಳಿ. ಈ ಮೂಲಕ ಕಥೆಯ ಫಲಿತಾಂಶ ನಿಮಗೆ ದೊರೆಯುತ್ತದೆ.

ಕೆಲವು ಪ್ರಶ್ನೆಗಳನ್ನು ಅಭ್ಯಸಿಸಿ

  • ನಾಯಕ/ ವಿರೋಧಿಗೆ ಇದು ಏಕೆ ಮುಖ್ಯ?
  • ಅವರೀರ್ವರು ಸಮಸ್ಯೆ ಬಗೆಹರಿಯದಿದ್ದರೆ ವೈಯಕ್ತಿಕವಾಗಿ ಏನನ್ನು ಕಳೆದುಕೊಳ್ಳುತ್ತಾರೆ?
  • ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಲು ಬಿಡದೇ ಹೂಡುವ ತಂತ್ರಗಾರಿಕೆ ವಿಧಿಸುವ ಪರಿಧಿಯನ್ನು ಅಂತಿಮ ಘಟ್ಟವೆಂದು ಪರಿಗಣಿಸಿ.
  • ಇದಕ್ಕೆ ಬೆಂಬಲ ಸೂಚಿಸುವ ವ್ಯಕ್ತಿಗಳಾರು?
  • ಇಬ್ಬರಲ್ಲಿಯೂ ದೌರ್ಬಲ್ಯಗಳನ್ನು ಗುರುತಿಸಿ.
ಹಂತಗಳನ್ನು ಗುರುತಿಸಿ

ಈ ಹಂತದಲ್ಲಿ ಸಾಮಾನ್ಯ ಆಲೋಚನೆಯನ್ನು ಹೊಂದಿರಬೇಕಾಗುತ್ತದೆ. ಕನಿಷ್ಟಪಕ್ಷ ಈ ಹಂತವು (three acts) ಏಕೆ ಮುಖ್ಯಪಾತ್ರವಹಿಸುತ್ತದೆ ಎಂದು ಅರಿತುಕೊಂಡಿರಬೇಕಾಗುತ್ತದೆ. ಇದರಲ್ಲಿ ಬರುವ ತಿರುವುಗಳುಳ್ಳ ಘಟನೆಗಳನ್ನು ಗಮನಿಸಿ, ಕಥೆಯ ಆಧಾರ ಸ್ಥಂಭಗಳೆಂದು ಬರೆದುಕೊಳ್ಳಿ.

ಕೆಲವು ಸಾಮಾನ್ಯ ಪ್ರಮುಖ ಅಂಶಗಳು
  • ನಿಮ್ಮ ನಾಯಕನಿಗೆ ಎದುರಾಗುವ ಸಮಸ್ಯೆಯನ್ನು ಯಾವ ಹಂತದಲ್ಲಿ ಅರಿವಾಗುತ್ತದೆ ( ಇದು ಮುಖ್ಯ ಸಂಘರ್ಷಕ್ಕೆ ಕಾರಣವಾಗುವಂತೆ)
  • ನಾಯಕನಿಗೆ ತನ್ನ ದಾರಿಯಲ್ಲಿ ಯಾರು ಅಥವಾ ಏನು ಎನ್ನುವುದನ್ನು ಕಂಡುಕೊಳ್ಳುವ ಹಂತ ಯಾವುದು?
  • ಯಾವ ಹಂತದಲ್ಲಿ ನಾಯಕನು ತನ್ನ ಗುರಿಯನ್ನು ನಿರ್ಲಕ್ಷಿಸಿ ಗೆಲುವು ಬಿಟ್ಟುಕೊಡಲು ಮುಂದಾಗುತ್ತಾನೆ?
  • ಯಾವ ಹಂತದಲ್ಲಿ ಅವರು (ನಾಯಕ/ವಿರೋಧಿ) ಸಮಸ್ಯೆಯ ಅಂತಿಮ ಪರಾಕಾಷ್ಟೆಯನ್ನು ತಲುಪುತ್ತಾರೆ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯತೆ ಇರುವುದಿಲ್ಲ ಕಥೆಗೆ ಯಾವ ಪ್ರಶ್ನೆ ಸೂಕ್ತವೆಂದು ಆಯ್ದುಕೊಂಡು ಉತ್ತರಿಸಿ ಅಥವಾ ಒಂದೊಮ್ಮೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ.

ಸಲಹೆ

ನಿಮ್ಮಲ್ಲಿ ಯಾವುದೇ ಆಲೋಚನೆಗಳು (ಕಥೆ ಕಟ್ಟಬಹುದಾದ) ಗಿರಕಿ ಹೊಡೆಯಲಾರಂಭಿಸಿದಲ್ಲಿ ಅವು್ಳನ್ನು ಮೇಲ್ಕಂಡ ಎಲ್ಲಾ ಸಲಹೆ ಟಿಪ್ಪಣಿಗಳೊಂದಿಗೆ ಪರಾಮರ್ಶಿಸಿಕೊಂಡು ಸೂಕ್ತವಾದ ಕಥೆಯನ್ನು ರಚಿಸಲು ಆರಂಭಿಸಿ ದೊಡ್ಡಕಥೆ ಸಣ್ಣ ಕಥೆ ಎನ್ನುವ ಯಾವುದೇ ತಾತ್ಸಾರವನ್ನು ಮಾಡಬೇಡಿ ಆರಂಭದಲ್ಲಿ ಕಷ್ಟ ಎನಿಸಿದರೂ ಪುನರಾವರ್ತಿತ ಅಭ್ಯಾಸದಿಂದ ಎಂತಹುದೇ ಕಥೆಯನ್ನು ರಚಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಹಜ ತಪ್ಪುಗಳಿಂದ ಪ್ರೇರಿತರಾಗಲು ಅನುವು ಮಾಡಿಕೊಡಿ.

ಈಗ ನಿಮ್ಮ ಕಥೆಯು ಚೆನ್ನಾಗಿದೆಯೇ ಅಥವಾ ಚೆನ್ನಾಗಿಲ್ಲವೇ ಎನ್ನುವುದು ಮುಖ್ಯವಲ್ಲ ಕಥೆ ಕಟ್ಟುವುದನ್ನು ಮೊದಲು ಕಲಿಯಲು ಗುರಿಯಾಗಿಸಿಕೊಳ್ಳಲು ಪ್ರಯತ್ನಿಸಿ. ಸ್ನೇಹಿತರೊಂದಿಗೆ ಚರ್ಚಿಸಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. “ಮರಳಿ ಯತ್ನವ ಮಾಡು” ಎನ್ನುವ ಹಾಗೆ ಪುನಃ ಒಂದು ಆಲೋಚನೆಯೊಂದಿಗೆ ಆರಂಭಿಸಿ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

2 COMMENTS

LEAVE A REPLY

Please enter your comment!
Please enter your name here

You cannot copy content of this page