HomeFilm technology & CraftMilestones in the History of Cinema ಚಲನಚಿತ್ರ ಇತಿಹಾಸದ ಪ್ರಮುಖ ಮೈಲಿಗಲ್ಲುಗಳು

Milestones in the History of Cinema ಚಲನಚಿತ್ರ ಇತಿಹಾಸದ ಪ್ರಮುಖ ಮೈಲಿಗಲ್ಲುಗಳು

- Advertisement -spot_img

History of cinema | ಸ್ಥಿರ ಚಿತ್ರಣದಿಂದ ಚಲಿಸುವ ಚಿತ್ರದವರೆಗೆ, ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೆ, ಕಪ್ಪು-ಬಿಳುಪುವಿನಿಂದ ಬಣ್ಣದವರೆಗೆ ಅನಲಾಗ್ (ಸೆಲ್ಯುಲಾಯಿಡ್) ನಿಂದ ಡಿಜಿಟಲ್ ವರೆಗೆ ಹೀಗೆ ನೂರಾರು ವರ್ಷಗಳಿಂದ ಕಲಾವಿದರನ್ನು, ಸಿನಿರಸಿಕರನ್ನು, ತನ್ನೆಡೆಗೆ ಆಕರ್ಶಿಸಿಕೊಂಡ ಮನೋರಂಜನೆಯ ಮಾಧ್ಯಮ ಚಲನಚಿತ್ರ.

ವಿಶ್ವಮಾನ್ಯದಲ್ಲಿ ಚಲನಚಿತ್ರವು ಕಾಲಕ್ಕೆ ತಕ್ಕಂತೆ ನಿರಂತರವಾಗಿ ತಾಂತ್ರಿಕ ನೈಪುಣ್ಯತೆಯಿಂದ ಸುಧಾರಿಸುತ್ತ ಇಂದು ನಾವೆಲ್ಲಾ ನೋಡುವ ಡಿಜಿಟಲ್ OTT ಪ್ರಾಯೋಗಿಕ ಸಿನಿಮಾವರೆಗೂ ಚಲನಚಿತ್ರವು ಬೆಳೆದು ನಿಂತಿದೆ ಆದರೆ ಅದರ ಇತಿಹಾಸವನ್ನು ನಾವು ಅಲ್ಲಗೆಳೆಯುವಂತಿಲ್ಲ ಈ ಕುರಿತ ಲೇಖನವು ಚಲನಚಿತ್ರ ಇತಿಹಾಸದ ಪ್ರಮುಖ ಘಟನೆಗಳನ್ನು ಮೆಲುಕು ಹಾಕುವ ಪಕ್ಷಿ ನೋಟವನ್ನು ಒಳಗೊಂಡಿದೆ.

ಚಲನಚಿತ್ರದ ಪೂರ್ವ ಇತಿಹಾಸ

ಮಾನವ ಶಿಲಾಯುಗದ ಗುಹಾಂತರ ವಾಸಿಯಾಗಿದ್ದ ಕಾಲದಲ್ಲಿ ಅನೇಕ ಪ್ರಾಯೋಗಿಕ ಕಲ್ಪನೆಗಳನ್ನು ಆರಂಭದಿಂದಲೂ ಅನ್ವೇಶಿಸುತ್ತಲೇ ಬಂದಿದ್ದಾನೆ ಅಂದಿನ ಕೆತ್ತನೆಗಳು, ರೇಖಾ ಚಿತ್ರಗಳು ನಂತರದಲ್ಲಿ ನೆರಳು ಬೆಳಕಿನ ಚಿತ್ರಗಳ ಮೂಲಕ ತನ್ನಹೊಸದೊಂದು ಕಲ್ಪನಾಶಕ್ತಿಗೆ ಜೀವ ನೀಡುವ ಮೂಲಕ ಹೊಸ ಹೊಸ ಅಧ್ಯಾಯಗಳನ್ನು ನಡೆಸಿ ಇಂದಿನ ವಿಕಸನಕ್ಕೆ ಕಾರಣವಾಗಿದ್ದಾನೆ.

ಕ್ಯಾಮೆರಾ ಅಬ್ಸ್ಕೂರ

ಕ್ರಿ. ಪೂ ಐದನೇಯ ಶತಮಾನದಲ್ಲಿ ಮೊದಲಬಾರಿಗೆ ಕ್ಯಾಮೆರಾ ಅಬ್ಸ್ಕೂರಾವನ್ನು ಕಂಡುಕೊಳ್ಳಲಾಯಿತು ಈ ಒಂದು ವಿಶೇಷ ಸಾಧನದ ಮೂಲಕ ಸ್ಥಿರ ಚಿತ್ರಣಗಳನ್ನು ಒಂದು ಸಣ್ಣ ರಂದ್ರದಮೂಲಕ ಬೆಳಕಿನೊಂದಿಗೆ ಹಾಯಿಸಿ ಬಿಂಬವನ್ನು ಪ್ರತಿಫಲಿಸುವಂತೆ ವಿನ್ಯಾಸ ಮಾಡಲಾಗಿತ್ತು. ಕ್ಯಾಮೆರಾ ಅಬ್ಸ್ಕೂರಾದ ಪರಿಕಲ್ಪನೆಯ ನಂತರ ಅದನ್ನು ಚಲಿಸುವ ಚಿತ್ರವಾಗಿ ಅಭಿವೃದ್ದಿಪಡಿಸಲು ಹಲವು ವರ್ಷಗಳೇ ಉರುಳಿದವು.

camera obscura history of cinema

ಕ್ಯಾಮೆರಾ ಅಬ್ಸ್ಕೂರಾದ ತಾಂತ್ರಿಕ ಆಧ್ಯಾಯನ ನಡೆಸಿದ ನಂತರ ಪ್ರಾನ್ಸ್ ನ ಜೋಸೆಫ್ ನೈಸೆಪೋರ್ ನಿಪ್ಸೆ ಎನ್ನುವ ವ್ಯಕ್ತಿ 1816ರಲ್ಲಿ ಕ್ಯಾಮೆರಾವನ್ನು ಕಂಡುಹಿಡಿದರೂ 1826ರಲ್ಲಿ ಸ್ಥಿರ ಚಿತ್ರಣವನ್ನು ಮೊಟ್ಟ ಮೊದಲನೇ ಬಾರಿಗೆ ಸೆರೆಹಿಡಿಯಲಾಯಿತು.  ಈ ಮೂಲಕ 1878ರಲ್ಲಿ ಚಿತ್ರಗಳನ್ನು ಚಲಿಸುವ ರೂಪಕ್ಕೆ ತರಲಾಗಿತ್ತು ಇದು ಯಾವ ರೀತಿಯಲ್ಲಿತ್ತು ಎಂದರೆ ಓರ್ವ ವ್ಯಕ್ತಿ, ಅಥವಾ ಪ್ರಾಣಿಯ ಚಲನೆಯ ವಿವಿಧ ಭಂಗಿಗಳನ್ನು ಸೆರೆಹಿಡಿದು ಅವುಗಳನ್ನು ಬೆಳಕಿನೊಂದಿಗೆ ಹಾಹಿಸಿ ಚಲನೆಗೆ ಬರುವಂತೆ ಮಾಡುವುದಾಗಿತ್ತು.

ದಿ ಹಾರ್ಸ್ ಇನ್ ಮೋಷನ್

ಎಡ್ವರ್ಡ್ ಮ್ಯೂಬ್ರಿಡ್ಜ್ ಎನ್ನುವ ವ್ಯಕ್ತಿ ಚಲಿಸುವ ಚಿತ್ರಗಳ ಆರಂಭಿಕ ಹಂತವನ್ನು ಯಶಸ್ವಿಯಾಗಿ ಪರಿಚಯಿಸಿದ ವ್ಯಕ್ತಿಯಾಗಿ ಇತಿಹಾಸದಲ್ಲಿ ಉಳಿದವನು, ಈ ವ್ಯಕ್ತಿಯು ಕುದುರೆ ಸವಾರಿಯ ವಿವಿಧ ಭಂಗಿಗಳನ್ನು ಸೆರೆಹಿಡಿದು ಅವುಗಳನ್ನು ಚಲಿಸುವಂತೆ ಪ್ರದರ್ಶಿಸಿ “ದಿ ಹಾರ್ಸ್ ಇನ್ ಮೋಷನ್” ಎಂದು ಕರೆದನು. ಇದಿಷ್ಟೇ ಅಲ್ಲದೇ ಆ ಚಿತ್ರಗಳನ್ನು ಪ್ರಸ್ತುತಪಡಿಸಲು ಬೇಕಿದ್ದ ಸುಸಜ್ಜಿತ ಬೆಳಕಿನ ಯಂತ್ರವನ್ನು ತಯಾರಿಸಿಕೊಂಡನು ಈ ಸಾಧನಕ್ಕೆ ಯಾಪ್ರಾಕ್ಸಿಸ್ಕೋಪ್ ಎಂದು ಹೆಸರಿಸಿದನು. ಈ ಒಂದು ಆವಿಷ್ಕಾರವು ಥಾಮಸ್ ಎಡಿಸನ್ ಅವರಿಗೆ ಚಲನಚಿತ್ರದ ಸಿದ್ದಾಂತವನ್ನು ಅಧ್ಯಾಯನ ಮಾಡಲು ಪ್ರೇರೇಪಿಸಿತು.

ದಿ ಅರೈವಲ್ ಆಫ್ ಎ ಟ್ರೈನ್

ಅನೇಕ ಪ್ರಾಯೋಗಿಕ ಹಂತಗಳ ನಂತರ 1895ರಲ್ಲಿ ಲೂಮಿಯರ್ ಸಹೋದರರು ಕಾರ್ಖಾನೆಯಿಂದ ಹೊರಬರುವ ಕಾರ್ಮಿಕರನ್ನು ಸೆರೆಹಿಡಿದು ಯಶಸ್ವಿಯಾಗಿ ಪ್ರದರ್ಶಿಸಿದರು, ಈ ಕಿರುಚಿತ್ರವು ಜಗತ್ತನ್ನೇ ದಿಗ್ಬ್ರಮೆಗೊಳಿಸಿತ್ತು, ರೈಲು ನಿಲ್ದಾಣಕ್ಕೆ ಆಗಮಿಸುವುದು, ಗಾರ್ಡನ್ ನಲ್ಲಿ ನೀರು ಹಾಯಿಸುವ ವ್ಯಕ್ತಿಯೊಂದಿಗೆ ಪೋರನ ಛೇಷ್ಟೆ ಇಂತಹ ಕೆಲವು ಚಿತ್ರಗಳನ್ನು ಪ್ರರ್ಶಿಸುವ ಮೂಲಕ ಹಣಗಳಿಲು ಆರಂಭಿಸಿದರು ಇದನ್ನೇ ಹಲವರು ಜಗತ್ತಿನ ಮೊದಲ ವಾಣಿಜ್ಯ ಚಿತ್ರಗಳನ್ನಾಗಿ ಪರಿಗಣಿಸಿದರು.

ಎ ಟ್ರಿಪ್ ಟು ದಿ  ಮೂನ್

ಲೂಮಿಯರ್ ಸಹೋದರರ ಕಿರುಚಿತ್ರಗಳು ಚಲನಚಿತ್ರದ ಹೊಸ ಅಧ್ಯಾಯವನ್ನು ಆರಂಭಮಾಡಿತು ತಾಂತ್ರಕ ತಜ್ಞರನ್ನು ಆಕರ್ಶಿಸಿತು. ಪ್ರಾನ್ಸ್ ನ ನಟ ಮತ್ತು ಮಾಂತ್ರಿಕ ಜಾರ್ಜ್ ಮೆಲಿಯೇಸ್ ಎನ್ನುವ ವ್ಯಕ್ತಿ 1895ರಲ್ಲಿ ಲೂಮಿಯರ್ ಸಹೋದರರ ಚಲನಚಿತ್ರ ತಂತ್ರವನ್ನು ಕಲಿಯಲು ಆಸಕ್ತಿ ವಹಿಸಿದನು ಆದರೆ ಅದು ಕೈಗೂಡಲಿಲ್ಲ ನಂತರದಲ್ಲಿ ಆಂಗ್ಲ ತಜ್ಞ ರಾಬರ್ಟ್ W. ಪೌಲ್ ನ ಸಹಾಯದಿಂದ ವರ್ಷಗಳ ಕಾಲ ಅಭ್ಯಸಿಸಿ ಎಲ್ಲಾ ತಾಂತ್ರಕ ಅಂಶಗಳನ್ನು ಕಲಿತು 1900ರಲ್ಲಿ ‘ದಿ ಒನ್ ಮ್ಯಾನ್ ಬ್ಯಾಂಡ್’ ಮತ್ತು 1902 ರಲ್ಲಿ ‘ಎ ಟ್ರಿಪ್ ಟು ದಿ  ಮೂನ್’ ಎನ್ನುವ ಕಿರುಚಿತ್ರಗಳನ್ನು ಮಾಡುವ ಮೂಲಕ ಯಶಸ್ವಿಯಾದನು. ನಂತರ ಅದೇ ವ್ಯಕ್ತಿ ಸುಮಾರು ಐದುನೂರು ಚಲನಚಿತ್ರಗಳನ್ನು ನಿರ್ಮಿಸಿ ಸಾರ್ವಕಾಲಿಕ ಶ್ರೇಷ್ಠ ನಿರ್ಮಾಪಕ ಎನಿಸಿಕೊಂಡನು.

28ನೇ ಡಿಸೆಂಬರ್ 1895ರಂದು ಪ್ಯಾರಿಸ್ ನಲ್ಲಿ ಲೂಮಿಯರ್ ಸಹೋದರರು ಪ್ರಪ್ರಥಮ ಬಾರಿಗೆ ಸಿನಿಮಾಟೋಗ್ರಾಪ್ ಪ್ರದರ್ಶನದ ನಂತರ ವಿಶ್ವದೆಲ್ಲೆಡೆ ಸಿನಿಮಾದ ಹುಟ್ಟು ಎಂದು ನಿರ್ಧರಿಸಿದರು ಆ ಸಮಯದಲ್ಲಿ ಭಾರತವು ತೀರಾ ಹಿಂದುಳಿದ ರಾಷ್ಟ್ರವಾಗಿತ್ತು ಬ್ರಿಟೀಷ್ ಆಳ್ವಿಕೆಯಲ್ಲಿತ್ತು.

ಎಡಿಸನ್ ವಿಟಾಸ್ಕೋಪ್ ಅಮೆರಿಕಾದ ಪ್ರೇಕ್ಷಕರಿಗಾಗಿ ನ್ಯೂಯಾರ್ಕ್ ಸಿಟಿಯಲ್ಲಿ 23ನೇ ಏಪ್ರಿಲ್ 1896ರಲ್ಲಿ ಪ್ರದರ್ಶನ ಕಂಡಿತು ವಿದೇಶದಲ್ಲಿ ಪ್ರೇಕ್ಷಕರ ಹರ್ಷೋದ್ಘಾರಗಳಿಗೆ ಕಾರಣವಾದ ಈ ಆವಿಶ್ಕಾರ ಭಾರತಕ್ಕೆ ಬರಲು ಮೂರು ತಿಂಗಳುಗಳೇ ಬೇಕಾದವು, ಮುಂಬೈ ಮ್ಯೂಸಿಯಂ ಪ್ರದೇಶದಲ್ಲಿರುವ ಪ್ರತಿಷ್ಟಿತ ವ್ಯಾಟ್ಸನ್ ಹೋಟೆಲ್ ನಲ್ಲಿ ಲೂಮಿಯರ್ ಸಹೋದರರ ಪರವಾಗಿ ಪ್ರಾನ್ಸ್ ನಿಂದ ಆಗಮಿಸಿದ್ದ ಅವರ ಸಹವರ್ತಿಗಳು ಭಾರತದಲ್ಲಿ ಪ್ರಪ್ರಥಮ ಪ್ರರ್ಶನ ಕಂಡಿತು ಇದು ಭಾರತೀಯ ಸಿನಿಮಾ ಮೊಳಕೆಯೊಡೆಯಲು ಆರಂಭಿಸಿತು.

ವಾಟ್ಸನ್ ಹೋಟೆಲ್ ನಲ್ಲಿ ಪ್ರಾನ್ಸ್ ನಿಂದ ಬಂದ ಲೂಮಿಯರ್ ಸಹೋದರರು ಕಳುಹಿಸಿದ ಸಹವರ್ತಿಗಳು ಮಾಡಿದ ಪ್ರದರ್ಶನ ಅತೀ ದೊಡ್ಡ ಸಂಚಲನವನ್ನೇ ಸೃಸ್ಟಿಸಿತು ಆ ಜನಸಮೂಹವನ್ನು ತಡೆಗಟ್ಟಲು ನಾವೆಲ್ಟಿ ರಂಗ ಮಂದಿರದಲ್ಲಿಯೂ ಪ್ರದರ್ಶನ ಏರ್ಪಡಿಸಲಾಯಿತು. ವಿಚಿತ್ರವೆಂದರೆ ರೈಲು ನಿಲ್ದಾಣಕ್ಕೆ ಆಗಮಿಸುವ ಚಿತ್ರವನ್ನು ಕಂಡಕೂಡಲೇ ಜನ ಎದ್ದು ಚದುರಲು ಆರಂಭಿಸುತ್ತಿದ್ದರು ಕೆಲವರು ಅದಕ್ಕಾಗಿ ದಾರಿಮಾಡಿಕೊಡುತ್ತಿದ್ದರು.

ಭಾರತೀಯ ಸಿನಿಮಾ

ಲೂಮಿಯೇರ್ ಸಹೋದರರು ತಮ್ಮ ಆವಿಷ್ಕಾರವನ್ನು ಪ್ರದರ್ಶನ ಮಾಡಿ ಯಾವ ಸಾಧನೆ ಮಾಡಬೇಕೆಂಬ ಪರಮೋದ್ದೇಶದಿಂದ ಭಾರತಕ್ಕೆ ಆಗಮಿಸಿ ವ್ಯಾಟ್ಸನ್ ಹೋಟೆಲ್ ನಲ್ಲಿ ಪ್ರದರ್ಶನ ಏರ್ಪಡಿಸಿರಲಿಲ್ಲ ಬದಲಾಗಿ ಅವರ ಕ್ಯಾಮೆರಾ ಹಾಗೂ ಇತರೆ ಪೂರಕ ಸಕರಣೆಗಳನ್ನು ಮಾರಾಟಮಾಡುವುದೇ ಅವರ ಮುಖ್ಯ ಉದ್ದೇಶವಾಗಿತ್ತು.

ಬರೀಯ ನಾಟಕ, ನೃತ್ಯಗಳನ್ನೇ ನೋಡುತ್ತಿದ್ದ ಜನರಿಗೆ ಅತೀ ದೊಡ್ಡ ಪರದೆಯ ಮೇಲೇ ವ್ಯಕ್ತಿಗಳನ್ನು ನೋಡಿ ಸ್ಥಭೀಭೂತರನ್ನಾಗಿ ಮಾಡಿ ನಿಬ್ಬೆರಗಾಗಿಸಿತ್ತು ಈ ನಿಬ್ಬೆರಗು ಚಲನಚಿತ್ರ ತಯಾರಿಕೆಯ ಕೇಂದ್ರಕ್ಕೆ ಬುನಾದಿ ಹಾಕಿತು.

ಕ್ಲಿಪ್ಟನ್, ಮೆಟ್ಜರ್ ಕಂಪನಿಗಳು ಕ್ಯಾಮೆರಾ ಮತ್ತು ಪ್ರೊಜೆಕ್ಟರ್ ಗಳನ್ನು ಭಾರತಕ್ಕೆ ತಂದವು ವಿದೇಶಿ ಕ್ಯಾಮೆರಾಮೆನ್ ಗಳು ಭಾರಕ್ಕೆ ಬಂದು ದೆಹಲಿ, ಲಕ್ನೋಗಳಲ್ಲಿನ ದೃಶ್ಯಾವಳಿಗಳನ್ನು ಸೆರೆಹಿಡಿದು ಪ್ರದರ್ಶೀಸಲಾರಂಭಿಸಿದರು.

1899ರಲ್ಲಿ ಚಲನಚಿತ್ರಗಳಿಂದ ಆಕರ್ಶಿತರಾಗಿದ್ದ ಸಾವೆದಾದ (ಎಚ್, ಎಸ್, ಬಟವಾಡೆಕರ್) ಇಬ್ಬರು ಕುಸ್ತಿಪಟುಗಳು ಅಖಾಡದಲ್ಲಿ ಕುಸ್ತಿ ಆಡುವುದನ್ನು ಸೆರೆಹಿಡಿದು ಪ್ರದರ್ಶಿಸಿದರು ಈ ಮೂಲಕ  ಕಿರುಚಿತ್ರವನ್ನು ತಯಾರಿಸಿದ ಭಾರತೀಯರಲ್ಲಿ ಮೊದಲಿಗರಾಗಿ ತನ್ನ ಹೆಗ್ಗುರುತನ್ನು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಅಚ್ಚಾಗಿ ಉಳಿಸಿಕೊಂಡರು.

ಇದಾದನಂತರ ಭಾರತದಲ್ಲಿ ಅನೇಕ ಚಲನಚಿತ್ರಗಳು ಪ್ರಾಯೋಗಿಕವಾಗಿ ಸೆರೆಹಿಡಿದು ಪ್ರದರ್ಶಿಸಲು ಆರಂಭಿಸಿದರು.

history of cinema delhi durbar
  • ಬ್ರಿಟೀಷ್ ಅಧಿಕಾರಿಶಾಹಿ 1903ರಲ್ಲಿ ‘ದೆಹಲಿ ದರ್ಬಾರ್’ ಸಾಕ್ಷಾಚಿತ್ರವನ್ನು ತಯಾರಿಸಿ ಪ್ರದರ್ಶಿಸಿದರು ಇದು ಎಡ್ವರ್ಡ್ VII ರ ಪಟ್ಟಾಭಿಷೇಕ, ಬ್ರಿಟೀಷ್ ವೈಭವಪೂರಿತ ಆಡಳಿತವನ್ನು ತೋರಿಸುವುದಾಗಿತ್ತು.
  • ಇದರಿಂದ ಪ್ರೇರಿತರಾದ ಎಫ್. ಬಿ ಥಾನೆವಾಲ ಹಾಗೂ ಕೋಲ್ಕತ್ತದಿಂದ ಹೀರಾಲಾಲ್ ಸೇನ್ ಸಿನಿಮಾ ತಯಾರಿಕೆಗೆ ಮುಂದಾದರು.
  • 1901ರಿಂದ 1907ರ ವರೆಗೂ ವಿವಿಧ ದೇಶಗಗಳಲ್ಲಿ ಕಥೆ ಆಧಾರಿತ ಚಲನಚಿತ್ರಗಳು ಬರಲು ಆರಂಭಿಸಿದವು ಇವುಗಳಲ್ಲಿ ‘ಲೈಫ್ ಆಫ್ ಕ್ರೈಸ್ಟ್’, ‘ಟ್ರಪ್ ಟು ದಿ ಮೂನ್’, ಎಡ್ವಿನ್ ಪೋರ್ಟರ್ಸ್ ರವರ ‘ದಿ ಗ್ರೇಟ್ ಟ್ರೈನ್ ರಾಬರಿ’ ಮತ್ತು ‘ಅಂಕಲ್ ಟಾಮ್ಸ್ ರಾಬಿನ್’ ಮೊದಲಾದ ಚಿತ್ರಗಳು.
  • ‘ಲೈಫ್ ಆಫ್ ಕ್ರೈಸ್ಟ್’ ನಿಂದ ಸ್ಪೂರ್ತಿ ಪಡೆದಿದ್ದ ದಾದಾ ಸಾಹೇಬ್ ಫಾಲ್ಕೆ ಅವರು ‘ರಾಜಾ ಹರಿಶ್ಚಂದ್ರ’ ಚಿತ್ರವನ್ನು 3ನೇ ಮೇ 1913 ರಂದು ಬಿಡುಗಡೆಗೊಳಿಸುವ ಮೂಲಕ ಕಥಾಚಿತ್ರಗಳ ತಯಾರಿಕೆ ಭಾರತದಲ್ಲಿ ಹೊಸ ಶಕೆ ಯನ್ನು ಆರಂಭಮಾಡಿತು.
  • 1930ರಲ್ಲಿ ಟ್ಯಾಗೂರರ ಕಥೆಗಳಾದ ಗಿರಿಬಾಲ ಮತ್ತು ದಾಲಿಯಾಗಳನ್ನು ಚಲನಚಿತ್ರಗಳನ್ನಾಗಿಸಿದರು ಕಲ್ಕತ್ತದ ಅಂದಿನ ದಿನಗಳ ಪ್ರಸಿದ್ದ ಚಲನಚಿತ್ರ ತಯಾರಿಕಾ ಸಂಸ್ಥೆಯಾದ ಮದನ್ ಥಿಯೇಟರ್ಸ್ ನವರು ಮಧುಬೋಸ್ ಈ ಎರಡೂ ಚಿತ್ರಗಳನ್ನು ನಿರ್ದೇಶಿಸಿದರು.
  • ಅದೇ ವೇಳೆಗೆ ಅಮೇರಿಕಾದಲ್ಲಿ ‘ಜಾಜ್ ಸಿಂಗರ್’ ಎನ್ನುವ ಚಿತ್ರವು ಸಂಗೀತ ಮತ್ತು ಧ್ವನಿಯೊಂದಿಗೆ ಪ್ರವೇಶಿಸಿ ದೊಡ್ಡ ಅಲೆಯನ್ನೇ ಸೃಷ್ಟಿಸಿತು.
  •  ವಿದೇಶದಲ್ಲಿ ಧ್ವನಿಯ ಅಳವಡಿಕೆಯನ್ನು ಭಾರತದಲ್ಲಿ ಮದನ್ ರವರು ತಮ್ಮ ಕೊಲ್ಕತ್ತದ ಸ್ಟೂಡಿಯೋ ಒಂದರಲ್ಲಿ ಪ್ರಾಯೋಗಿಕ ಹಂತವಾಗಿ ಮೊದಲಿಗೆ ಕೈ ಹಾಕಿದರು.
  •  14ನೇ ಮಾರ್ಚ್ 1931ರಲ್ಲಿ ಮೊಟ್ಟ ಮೊದಲ ಧ್ವನಿಚಿತ್ರ ‘ಆಲಂ ಆರ’ ತೆರೆಕಂಡಿತು. ಈ ಚಿತ್ರವನ್ನು ಅರ್ದೇಶಿರ್ ಇರಾನಿಯವರು ನಿರ್ದೇಶಿಸಿ ನಿರ್ಮಿಸಿದ್ದರು.

ಕಿನಿಮಾಕಲರ್-ಕಲರ್ ಸಿನಿಮಾ

1908ರಲ್ಲಿ ಕಿನಿಮಾ ಕಲರ್ ಪರಿಚಯಿಸಲಾಗಿತ್ತು ಅದು ಕೆಲವೇ ಬಣ್ಣಗಳನ್ನು ಮಾತ್ರವೇ ಶೋಧಿಸಿ ಸೆರೆಹಿಡಿದುಕೊಳ್ಳುವ ತಂತ್ರವನ್ನು ಅನುಸರಿಸುತ್ತಿತ್ತು ಇದರಲ್ಲಿ ಕೆಂಪು ಮತ್ತು ಹಸಿರು ಬಣ್ಣಗಳನ್ನು ಗಾಢವಾಗಿ ಬಿಂಬಿಸುತ್ತಿತ್ತು ಈ ಮೂಲಕ ಬಣ್ಣದ ಸಿನಿಮಾ ಪ್ರಂಚಕ್ಕೆ ದಾರಿಮಾಡಿಕೊಡಲಾಯಿತು, ಈ ಒಂದು ದಿಟ್ಟ ಪ್ರಯತ್ನವನ್ನು ‘ಎ ವಿಸಿಟ್ ಟು ದಿ ಸೀ ಸೈಡ್’ ಎನ್ನುವ ಕಿರು ಚಿತ್ರದ ಪ್ರಾಯೋಗಿಕ ಹಂತವು ಹೊಸದೊಂದು ಕ್ರಾಂತಿಯನ್ನೇ ಸೃಷ್ಟಿಸಿತು.

ಅದೇ ರೀತಿಯಾಗಿ ‘ದಿ ವರ್ಲ್ಡ್’, ‘ದಿ ಪ್ಲೆಷ್ ಅಂಡ್ ಡೆವಿಲ್’ ಚಲನಚಿತ್ರಗಳು ತೆರೆಕಂಡವು ನಂತರದಲ್ಲಿ ಚಲನಚಿತ್ರವು ಬಣ್ಣದಲ್ಲಿ ತೆರೆಯಮೇಲೆ ಕಾಣಲು ಸಾಕಷ್ಟು ಪ್ರಯತ್ನಗಳೇ ನಡೆದುವು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾದುದು ‘ದಿ ವಿಝಾರ್ಡ್ ಆಫ್ ದಿ ಓಝ್’ ಎನ್ನುವ ಚಿತ್ರದ ಮೂಲಕ ಈ ಚಿತ್ರವು ತಾಂತ್ರಿಕ ಗುಣಮಟ್ಟದಲ್ಲಿ ಸಾಕಷ್ಟು ಮುಂದುವರೆದಿತ್ತು.

ಭಾರತದಲ್ಲಿ 1937ರಲ್ಲಿ ಕಿಸಾನ್ ಕನ್ಯಾ ಚಿತ್ರವನ್ನು ಸಿನಿಕಲರ್ ತಂತ್ರಗಾರಿಕೆ ಮೂಲಕ ಬಣ್ಣದ ಪರಿಚಯವಾಯಿತು. ಈ ಚಿತ್ರವನ್ನು ಅರ್ದೇಶಿರ್ ಇರಾನಿ ನಿರ್ದೇಶಿಸಿ ಮೋತಿ ಗಿದ್ವಾನಿಯವರು ನಿರ್ಮಾಣ ಮಾಡಿದ್ದರು, ಕಿಸಾನ್ ಕನ್ಯಾ ಚಿತ್ರವು ಭಾರತದ ಮೊಟ್ಟ ಮೊದಲ ಬಣ್ಣದ ಚಲನಚಿತ್ರವಾಗಿ ತನ್ನ ಹೆಗ್ಗಳಿಕೆಯನ್ನು ಸ್ಥಾಪಿಸಿಕೊಂಡಿತು.

ಟೂರಿಂಗ್ ಟಾಕೀಸ್

ಚಲನಚಿತ್ರಗಳನ್ನು ವೀಕ್ಷಿಸಲು ಆರಂಭದಲ್ಲಿ ಅತ್ಯಧಿಕ ಮೊತ್ತವನ್ನು ಪಾವತಿಸಬೇಕಿತ್ತು, ಎರಡನೇ ದರ್ಜೆ ಟಿಕೆಟ್ ಒಂದು ರೂಪಾಯಿ, ಕೊನೆಯ ಸೀಟುಗಳಿಗೆ ಎಂಟಾಣೆ (50ಪೈಸೆ) ಆಗ ಮುಂದಿನ ಸಾಲುಗಳಲ್ಲಿ ಕುಳಿತು ನೋಡುವುದು ಪ್ರತಿಷ್ಟೆಯ ವಿಷಯವಾಗಿತ್ತು.

ನಂತರದಲ್ಲಿ ಎಂಟಾಣೆ ಕೊಟ್ಟವರು ಪರದೆಯ ಮುಂದೆ (ಗಾಂಧಿಕ್ಲಾಸ್) ರೂಪಾಯಿ ಕೊಟ್ಟವರು ವಿರಾಜಮಾನವಾಗಿ ಹಿಂಬದಿಯಲ್ಲಿ (2ನೇ ದರ್ಜೆ) ಕುಳಿತು ಸಿನಿಮಾ ವೀಕ್ಷಣೆ ಮಾಡಲು ಮುಂದಾದರು

ಕೇವಲ ಪ್ರತಿಷ್ಟಿತರಿಗೆ ಅಧಿಕಾರಿಗಳಿಗೆ ಮೀಸಲು ಎನ್ನುವ ಕಲ್ಪನೆ ಕಾಲಕ್ರಮೇಣ ಬದಲಾಯಿತು ಸಮೂಹ ಮಾಧ್ಯಮವಾಗಿ ಬದಲಾಯಿತು, ಸಿನಿಮಾ ಹಂತ ಹಂತವಾಗಿ ಬೆಳೆಯಲಾರಂಭಿಸಿತು.

ಮಳೆಗಾಲದ ಆರಂಭದಲ್ಲಿ ರೈತರು ಬಿತ್ತನೆಗೆ, ರೈತಾಪಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಜನರಿದ್ದಕಡೆಗೇ ಚಿತ್ರ ತೋರಿಸುವ ಟೂರಿಂಗ್ ಟಾಕೀಸ್ ಕಲ್ಪನೆಗಳು ಜೀವತಳೆದವು.

ಜನರಿದ್ದ ಕಡೆಗೆ ಚಲನಚಿತ್ರ ಪ್ರದರ್ಶಿಸುವ ವ್ಯವಸ್ಥೆಯಾಯಿತು ಜನ ಚಿತ್ರಮಂದಿರದೆದುರು ಕಾಯುವುದು ಜನರಿಗಾಗಿ ಸಿನಿಮಾಮಂದಿ ಎಲ್ಲಾ ಕಡೆ ಹೋಗುವುದು ಆರಂಭವಾಯಿತು.

ಕಥೆಯ ಕಲ್ಪನೆಗಳನ್ನು ಬೆಳೆಸುವುದು ಹೇಗೆ? ಈ ಕುರಿತಾದ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾತ್ಪರ್ಯ

ಚಲನಚಿತ್ರವು ಆರಂಭಿಕ ಹಂತದಿಂದ ಹಿಡಿದು ಅಂತಿಮವಾಗಿ ಇಂದಿಗೂ ವಿಕಸಿಸುತ್ತಲೇ ಇದೆ. ಕ್ರಿಯಾತ್ಮಕವಾಗಿ ತನ್ನ ಸ್ವರೂಪವನ್ನು ತಾಂತ್ರಿಕ ಗುಣಮಟ್ಟದಿಂದ ನಾವೀನ್ಯತೆಯೊಂದಿಗೆ ನಿರಂತರವಾಗಿ ಹೊಂ  ಷದಿಕೊಳ್ಳುತ್ತ ಪ್ರೇಕ್ಷಕರನ್ನು ಆಕರ್ಶಿಸುತ್ತಲೇ ಇದೆ ಸಿನಿರಸಿಕರನ್ನು ಮನರಂಜಿಸುತ್ತಲೇ ಇದೆ.

ಸಿನಿಮಾ ಕಲಾತ್ಮಕ ಅಭಿವ್ಯಕ್ತಿ ಮತ್ತು ಸಾಂಸ್ಕೃತಿಕ ಪ್ರತಿಬಿಂಬದ ಪ್ರಭಲ ರೂಪವಾಗಿ ಇಂದು ನಿರ್ಮಾಣ ಕಲೆ ಮತ್ತು ಕರಕುಶಲತೆಯೊಂದಿಗೆ ಹೊಸ ಪ್ರಪಂಚವನ್ನೇ ಸೃಷ್ಟಿಸಿ ಮೂಕವಿಸ್ಮಿತರನ್ನಾಗಿ ಮಾಡುತ್ತಿದೆ. ಈ ಮೂಲಕ ಮನೋರಂಜನೆಯ ಬೇರೆಲ್ಲಾ ಮಾಧ್ಯಮಗಳಿಗಿಂತ ಚಲನಚಿತ್ರವು ಮುಂಚೂಣಿಯಲ್ಲಿದೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಚಲನಚಿತ್ರ ನಿರ್ಮಾಣವನ್ನು ನಿರ್ಮಾಣದಿಂದ ವಿತರಣೆ ಮತ್ತು ಪ್ರದರ್ಶನದ ವರೆಗೆ ಉದ್ಯಮವನ್ನು ಪ್ರಜಾಪ್ರಭುತ್ವಗೊಳಿಸುವ ಮೂಲಕ ಕ್ರಾಂತಿಯನ್ನುಂಟುಮಾಡಿದೆ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

2 COMMENTS

LEAVE A REPLY

Please enter your comment!
Please enter your name here

You cannot copy content of this page