ಚಲನಚಿತ್ರವು 130 ವರ್ಷಗಳ ಇತಿಹಾಸವನ್ನು ಹೊಂದಿದ್ದು ಅಲ್ಲಿಂದ ಇಲ್ಲಿಯವರೆಗೆ ಸಿನಿರಸಿಕರನ್ನು ಕಲಾ ಮಾಧ್ಯಮದೊಂದಿಗೆ ರಂಜಿಸುತ್ತಲೇ ಇದೆ. ಆದರೆ ಕಳೆದ ಹದಿನೈದು ವರ್ಷಗಳಿಂದ ಸಿನಿಮಾ ಚಿತ್ರಮಂದಿರಕ್ಕೇ ತೆರಳಿ ನೋಡುವ ಅನಿವಾರ್ಯತೆಯನ್ನು ತಪ್ಪಿಸಿ ಡಿಜಿಟಲ್ ಮಾದರಿ ಸಿನಿಮಾ ವೀಕ್ಷಣೆಯನ್ನು ಅನುಸರಿಸುತ್ತ ಸಾಕಷ್ಟು ದೊಡ್ಡ ಪ್ರಮಾಣವನ್ನು ಸೃಷ್ಟಿಸಿದೆ ಈ ಕುರಿತ ಮಹತ್ತರ ಬದಲಾವಣೆಯ ಕುರಿತ ಹಾಗು-ಹೋಗುಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ.Why Is Cinema No Longer Theater Based?| ಬದಲಾಗುತ್ತಿರುವ ಸಿನಿಮಾ ವೀಕ್ಷಣಾ ಸಂಸ್ಕೃತಿ|
Table of Contents
ಭವಿಷ್ಯದ ನುಡಿ
ಡಿಸೆಂಬರ್ 28, 1895ರಂದು ಪ್ಯಾರಿಸ್ ನ ಬೌಲ್ ವಾರ್ಡ್ ಡೆಸ್ ಕ್ಯಾಪ್ರಸಿನ್ಸ್ ನ ಗ್ರಾಂಡ್ ಕೆಫೆಯಲ್ಲಿ ಲುಮಿಯರ್ ಸಹೋದರರು ಮೊಟ್ಟ ಮೊದಲ ಬಾರಿಗೆ ಸಿನಿಮಾಟೋಗ್ರಾಫಿಕ್ ಪ್ರದರ್ಶಿಸಿದರು, ಆ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಜನರು ಅಚ್ಚರಿ, ಅದ್ಭುತವನ್ನು ಹೌಹಾರಿ ಹೊಗಳಿದರು. “ಇದು ಮುಂದಿನ ದಿನಗಳಲ್ಲಿ ಸಾಮೂಹಿಕ ಮನರಂಜನಾ ಮಾಧ್ಯಮವಾಗಲಿದೆ” ಎಂದು ಲೂಮಿಯರ್ ಸಹೋದರರು ಭವಿಷ್ಯದ ನುಡಿಹೇಳಿದರು. ಅದು ಸತ್ಯವಾಗಿದ್ದು ನಿಜ.
ಚಲನಚಿತ್ರ ಇತಿಹಾಸದ ಪ್ರಮುಖ ಮೈಲಿಗಲ್ಲುಗಳು ಈ ಕುರಿತ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ
ತಂತ್ರಜ್ಞಾನದ ಉತ್ಕೃಷ್ಟ ಸೌಲಭ್ಯ
ಕಾಲಾನಂತರದ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ ಹೊಂದಿತು ದೂರ ದರ್ಶನಗಳ ಮೂಲಕ ಚಲನಚಿತ್ರಗಳು ಮಾತ್ರವಲ್ಲದೇ ವಿವಿಧ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿತು ಈ ಮೂಲಕ ಅತ್ಯಂತ ವೇಗವಾಗಿ ತಾಂತ್ರಿಕ ವೀಕ್ಷಣಾ ಸೌಲಭ್ಯಗಳನ್ನು ಹೆಚ್ಚಿಸುತ್ತ ವಿ. ಸಿ. ಆರ್, ವಿ. ಹೆಚ್. ಎಸ್, ಸಿ. ಡಿ, ಡಿವಿಡಿ ಡಿಜಿಟಲ್ ಸ್ವರೂಪ ಪಡೆದುಕೊಂಡು ಇಂಟರ್ನೆಟ್ ತಂತ್ರಜ್ಞಾನ ಇನ್ನಷ್ಟು ಉತ್ಕೃಷ್ಟ ಸೌಲಭ್ಯದೊಂದಿಗೆ ವ್ಯಾಪಕವಾಗಿ ಚಲನಚಿತ್ರವು ವಿತರಣೆ ಮತ್ತು ವೀಕ್ಷಣಾ ಅಭ್ಯಾಸಗಳಿಗೆ ಹೊಸ ಆಯಾಮ ನೀಡಿದೆ.
ಡಿಜಿಟಲ್ ಪೀಳಿಗೆ
ಚಲನಚಿತ್ರಗಳನ್ನು ಚಿತ್ರಮಂದಿರಗಳಿಗೇ ತೆರಳಿ ನೋಡುವುದು ಹಳೆಯ ಶೈಲಿ ವಿಧಾನವೆಂದು ಮತ್ತು ಆ ವೀಕ್ಷಣಾ ವಿಧಾನವನ್ನು ಓಟಿಟಿ ವೇದಿಕೆಗಳು ಬದಲಿಸಿಬಿಟ್ಟಿದೆ. ವಿತರಣೆ ಮತ್ತು ನಿರ್ಮಾಣದ ಆಯ್ಕೆ ಆರಂಭದಿಂದಲೇ ಅವುಗಳನ್ನು ಪ್ರತ್ಯೇಕಿಸಲಾಗುತ್ತದೆ. ಇಂದಿನ ಡಿಜಿಟಲ್ ಪೀಳಿಗೆಗೆ ಆಪ್ತವಾಗಿಸಿ ಚಲನಚಿತ್ರ ವೀಕ್ಷಣೆಯ ಮಾರ್ಗಗಳನ್ನು ಬದಲಿಸಿದೆ.
ತಂತ್ರಜ್ಞಾನ ಮತ್ತು ಸವಾಲುಗಳು
ತಂತ್ರಜ್ಞಾನ ಎಷ್ಟು ಮುಂದುವರೆಯುತ್ತದೆಯೋ ಸವಾಲುಗಳು ಅಷ್ಟೇ ದೊಡ್ಡಮಟ್ಟದ ನಷ್ಟವನ್ನುಂಟು ಮಾಡುತ್ತದೆ. ಪೈರಸಿ ಎನ್ನುವ ಪೆಡಂಭೂತವು ಯಾವುದೇ ಚಿತ್ರರಂಗದ ನಿರ್ಮಾಪಕರನ್ನು ನಿದ್ದೆಗೆಡಿಸದೆಯೇ ಬಿಟ್ಟಿಲ್ಲ ಪ್ರೇಕ್ಷಕರ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡು ಬಿಡುಗಡೆಯಾದ ಮರುದಿನವೇ ಚಿತ್ರದ ಪೈರಸಿಯನ್ನು ಹರಿಯಬಿಟ್ಟು ಹಣಗಳಿಸುವ ಜಾಲಗಳು ಶೇ 20-25 ರಷ್ಟು ಆದಾಯವನ್ನು ಕುಸಿಯುವಂತೆ ಮಾಡುತ್ತಿವೆ.
ಮುಖ್ಯವಾಗಿ ಈಗಿನ ಸೌಕರ್ಯ ಮತ್ತು ಸೌಲಭ್ಯಗಳಿಗೆ ಹೋಲಿಸಿದರೆ ಎಷ್ಟೋ ಮಂದಿ ಚಿತ್ರಮಂದಿರಗಳಿಗೆ ಬಾರದೆಯೇ ಅವುಗಳನ್ನು ಮನೆಯಲ್ಲಿಯೇ ಕುಳಿತು ಹಣ ಮತ್ತು ಸಮಯ ಉಳಿಸುವ ಆಲೋಚನೆ ಮಾಡುತ್ತಾರೆ.
ಓಟಿಟಿ ವೇದಿಕೆಗಳು
5ಜಿ ಇಂಟರ್ನೆಟ್ ಸಂಪರ್ಕದೊಂದಿಗೆ ಹೈ ಕ್ವಾಲಿಟಿ ರೆಸಲ್ಯೂಷನ್ (ಹೈ ಡೆಫನಿಷನ್) ಗುಣಮಟ್ಟದ ಚಿತ್ರಗಳನ್ನು ಯಾವುದೇ ಸ್ಟ್ರೀಮಿಂಗ್ ಬಫರಿಂಗ್ ಇಲ್ಲದೇ ನೋಡಲು ಇಂದಿನ ಓಟಿಟಿ ವೇದಿಕೆಗಳು ಅನುವು ಮಾಡಿಕೊಟ್ಟಿದೆ ಅದಾಗ್ಯೂ ಚಲನಚಿತ್ರ ಮಾತ್ರವಲ್ಲದೇ, ವೆಬ್ ಸರಣಿ, ರಿಯಾಲಿಟಿ ಶೋ, ಹಾಗೂ ಅನೇಕ ಆಯ್ಕೆಗಳು ಬೆರಳ ತುದಿಯಲ್ಲೇ ವೀಕ್ಷಿಸಬಹುದಾಗಿದೆ ಯಾವುದೇ ಚಿತ್ರ ತಮ್ಮ ಅಭಿರುಚಿಗೆ ತಕ್ಕಂತೆ ಇಲ್ಲವಾದಲ್ಲಿ ತತ್ ಕ್ಷಣಕ್ಕೆ ಬದಲಿಸಿ ಬೇರೊಂದು ಚಿತ್ರವನ್ನು ನೋಡಬಹುದಾಗಿದೆ. ಅದಾಗ್ಯೂ ವಾರಾಂತ್ಯದ ಒಂದು ಅಥವಾ ಎರಡು ದಿನಗಳನ್ನು ಕೇವಲ ಒಂದು ಸಿನಿಮಾ ವೀಕ್ಷಣೆಗಾಗಿ ಚಿತ್ರಮಂದಿರಗಳಿಗೆ ತೆರಳಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡಲು ಗ್ರಾಹಕರಿಗೆ, ಪ್ರೇಕ್ಷಕರಿಗೆ ಸವಾಲಿನ ಸಂಗತಿಯಾಗಿ ನಿರ್ಮಾಣವಾಗುತ್ತಿದೆ.
ವೆಬ್ ಸರಣಿಯ ಅಭಿರುಚಿ
ಓಟಿಟಿ ವೇದಿಕೆಯು ತಮ್ಮ ಗ್ರಾಹಕರನ್ನು ಚಲನಚಿತ್ರಗಳಿಗಿಂತ ಹೆಚ್ಚಿನದಾಗಿ ವೆಬ್ ಸರಣಿಯ ಮೂಲಕ ಆಕರ್ಶಿಸುತ್ತಿದೆ ಮಾನಸಿಕವಾಗಿ ತಲ್ಲೀನಗೊಳಿಸುವಂತೆ ರಸವತ್ತಾಗಿ ಕಥಾವಸ್ತುವನ್ನು ಕಂತುಗಳಾಗಿ ಪ್ರಸಾರವಾಗುವುದರಿಂದ ಉನ್ಮಾದತೆಯನ್ನು ಹೆಚ್ಚಿಸುತ್ತಿವೆ.
ಯಾವುದೇ ಭಾಷೆಯ ಸರಣಿಗಳನ್ನು ತಿಂಗಳ/ವಾರ್ಷಿಕ ವಂತಿಕೆಯಲ್ಲಿ ಒದಗಿಸುತ್ತಿದ್ದು ಅಲ್ಪಮೊತ್ತಕ್ಕೆ ಹೆಚ್ಚಿನ ಮನರಂಜನೆಯನ್ನು ಪಡೆಯಬಹುದಾಗಿದೆ.
ಈಗ ಚಲನಚಿತ್ರಗಳಿಗೆ ಸವಾಲು ಎದುರಾಗಿರುವುದು ಓಟಿಟಿ ವೇದಿಕೆಗಳಿಂದ ಎಂದರೆ ತಪ್ಪಾಗಲಾರದು, ಏಕೆಂದರೆ ನೆಟ್ ಪ್ಲಿಕ್ಸ್, ಪ್ರೈಮ್ ನಂತಹ ಅತೀ ದೊಡ್ಡ ವೇದಿಕೆಗಳು ವಿಶ್ವಮಟ್ಟ ದರ್ಜೆಯ ಗುಣಮಟ್ಟದ ಸಿನಿಮಾ, ಸರಣಿ, ಸಾಕ್ಷಾಚಿತ್ರಗಳನ್ನು ನೀಡುತ್ತಿರುವಾಗ ಪ್ರೇಕ್ಷಕರು ಅಂತಹದ್ದೇ ಒಂದು ಗುಣಮಟ್ಟದ ಸಿನಿಮಾಗಳನ್ನು ನಿರೀಕ್ಷಿಸುತ್ತಾರೆ. ಒಂದು ವೇಳೆ ಚಿತ್ರಮಂದಿರದಲ್ಲೇ ಕುಳಿತು ನೋಡುವಂತಹ ಚಿತ್ರಗಳನ್ನು ಮಾತ್ರವೇ ಚಿತ್ರಮಂದಿರಕ್ಕೆ ತೆರಳಿ ನೋಡುತ್ತಾರೆ. ಇಲ್ಲದೇ ಹೋದಲ್ಲಿ ಅದೇ ಚಿತ್ರವನ್ನು ತಮ್ಮ ಟಿ.ವಿ, ಮೊಬೈಲ್ ನಲ್ಲೇ ವೀಕ್ಷಿಸಲು ಓಟಿಟಿ ತಲುಪುವವರೆಗೂ ಕಾಯುತ್ತಾರೆ. ಉದಾ: ಲಪಾಟ ಲೇಡೀಸ್(2024), ತುಂಬಾಡ್(2018), ಮಸಾನ್ (2015), ಮಾ ನಗರಂ(2017) ಇಂತಹ ಅನೇಕ ಚಿತ್ರಗಳು ಚಿತ್ರಮಂದಿರಗಳಲ್ಲಿ ಯಶನ್ನು ಗಳಿಸದೇ ಇದ್ದರೂ ಓಟಿಟಿ ವೇದಿಕೆಯಲ್ಲಿ ಹೆಚ್ಚು ವೀಕ್ಷಿಸಿದ ಚಿತ್ರಗಳಾಗಿವೆ.
ಸ್ಮಾರ್ಟ್ ಟಿ. ವಿ ಮತ್ತು ಓಟಿಟಿ ವೇದಿಕೆ
ಇತ್ತೀಚಿನ ಟೆಲಿವಿಷನ್ಗಳು ಗುಣಮಟ್ಟದ ದೊಡ್ಡ ಪರದೆಯ LED, QLED, OLED ಯಂತಹ UHDಯನ್ನು 4k ರೆಸಲ್ಯೂಷನ್ ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು ಇವುಗಳು ಡಿಜಿಟಲ್ ಪ್ಲಾಟ್ ಫಾರಂ ಗಳಿಗೆ ಅನುಗುಣವಾಗಿ ವಿನ್ಯಾಸಮಾಡಲಾಗಿದೆ ಇವುಗಳು ಮನೆಯಲ್ಲಿಯೇ ಕುಳಿತು ಸಿನಿಮಾ, ಸರಣಿಗಳನ್ನು ಚಿತ್ರಮಂದಿರದ ಅನುಭವ ಪಡೆಯುವಂತೆ ರೂಪಿಸಲಾಗಿದೆ.

ಸ್ಮಾರ್ಟ್ ಟಿ. ವಿ ಮತ್ತು ಓಟಿಟಿ ವೇದಿಕೆಯಿಂದಾಗುವ ಲಾಭ-ನಷ್ಟಗಳನ್ನು ಗಮನಿಸಿ.
- ಮನೆಯಲ್ಲಿಯೇ ಕುಳಿತು ತಮ್ಮಿಷ್ಟದ ಸಿನಿಮಾ/ಸರಣಿಯನ್ನು ಸ್ವಾತಂತ್ರವಾಗಿ ವೀಕ್ಷಿಸಬಹುದು
- ಮನರಂಜನೆ ಜೊತೆಗೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬಹುದು.
- ಯಾವುದೇ ಹಂತದಲ್ಲಿ ನಿಲ್ಲಿಸಿ;ಪುನಃ ವೀಕ್ಷಿಸಬಹುದಾಗಿದೆ.
- ಇಷ್ಟವಿಲ್ಲದ ಅಥವಾ ಬೇಸರವೆನಿಸುವ, ಅತ್ಯಂತ ಹಿಂಸಾತ್ಮಕ ದೃಶ್ಯಗಳನ್ನು ಫಾರ್ವಾರ್ಡ್ ಮಾಡುವ ಸೌಲಭ್ಯ ಸಹಕಾರಿಯಾಗಿದೆ.
- ಕಡಿಮೆ ಮೊತ್ತಕ್ಕೆ ಹೆಚ್ಚಿನ ಮನರಂಜನೆ ಮತ್ತು ಮನೆಯಲ್ಲಿ ಮಾಡಿದ ತಿನಿಸುಗಳನ್ನು ತಿನ್ನುತ್ತ ಹೆಚ್ಚಿನ ತೃಪ್ತಿ ಪಡೆಯಬಹುದಾಗಿದೆ.
- ಸುತ್ತಲಿನ ವಾತಾವರಣ ಮತ್ತು ಗಲಾಟೆಯಿಂದ ತೊಡಗಿಸಿಕೊಳ್ಳುವುದು ಕಷ್ಟವೆನಿಸುತ್ತದೆ.
ಚಿತ್ರಮಂದಿರ
ನೀವೇ ಯೋಚಿಸಿ ನೋಡಿ ಗರಿಷ್ಟ ಒಂದು ವರ್ಷದಲ್ಲಿ ಎಷ್ಟು ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡಿದ್ದೀರಿ? ಬಹುಶಃ ಬೆರಳೆಣಿಕೆಯಷ್ಟು ಮಾತ್ರ. ಮುಖ್ಯವಾಗಿ ನಿಮ್ಮನ್ನು ಚಿತ್ರಮಂದಿರಗಳಿಗೆ ಆಹ್ವಾನಿಸಿದ ಸಿನಿಮಾಗಳೆಷ್ಟು? ಸರತಿ ಸಾಲಿನಲ್ಲಿ ಅಲ್ಲದಿದ್ದರೂ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಿ ಚಿತ್ರಮಂದಿರವನ್ನು ಪ್ರವೇಶಿಸಿ ಸಿನಿಮಾ ನೋಡುವುದು ಇಂದಿನ ದಿನಗಳಲ್ಲಿ ಅತ್ಯಂತ ದೊಡ್ಡ ನಿರ್ಣಾಯಕ ಸಂಗತಿಯಾಗಿ ಪರಿಣಮಿಸಿದೆ.
ಏಕೆಂದರೆ ಒಂದುವೇಳೆ ಸಿನಿಮಾ ಚನ್ನಾಗಿದ್ದಲ್ಲಿ ಆ ದಿನ ಮತ್ತು ಸಮಯ ಒಳ್ಳೆಯದಕ್ಕೇ ವ್ಯರ್ಥಮಾಡಲಾಗಿದೆ ಎಂದೆನಿಸುತ್ತದೆ. ಒಂದು ವೇಳೆ ಸಿನಿಮಾ ಚನ್ನಾಗಿಲ್ಲದೇ ಹೋದಲ್ಲಿ ಇಡೀ ದಿನ ಆ ಸಮಯ, ಹಣ ಮತ್ತು ನಿರ್ಮಾತೃಗಳಿಗೆ ಹಿತವಚನ ಬಯಸುತ್ತ ಕಾಲ ಕಳೆಯುವಂತಾಗುತ್ತದೆ.

ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಯ ಲಾಭ-ನಷ್ಟಗಳನ್ನು ಗಮನಿಸಿ.
- ದೊಡ್ಡ ಪರದೆ ವೀಕ್ಷಣೆಯ ಅನುಭವವನ್ನು ಹೆಚ್ಚು ಉತ್ಸಾಹಭರಿತರನ್ನಾಗಿ ಮಾಡುತ್ತದೆ.
- ನಿಶ್ಯಬ್ಧ ಮತ್ತು ಕತ್ತಲೆಯ ವಾತಾವರಣ ಕಥೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತದೆ.
- ಸರೌಂಡ್ DTS,ATMOS ಧ್ವನಿ ವರ್ಧಕಗಳು ದೃಶ್ಯಗಳನ್ನು ಇನ್ನಷ್ಟು ವೈಭವೀಕರಿಸುತ್ತದೆ (ಹೆಚ್ಚಾದಲ್ಲಿ ತಲೆನೋವಿಗೆ ಕಾರಣವಾಗುತ್ತದೆ)
- ದೃಶ್ಯ ಸೌಂದರ್ಯವನ್ನು ವಿಶಾಲವಾಗಿ ಆಸ್ವಾದಿಸುವಂತೆ ಮಾಡುತ್ತದೆ.
- ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಯು ವಿಶೇಷ ಸಂದರ್ಭವೆನಿಸುತ್ತದೆ.
- ದುಬಾರಿ ಟಿಕೆಟ್ ದರ, ಪಾರ್ಕಿಂಗ್ ಚಾರ್ಜ್ , ಮತ್ತು ಸ್ನ್ಯಾಕ್ಸ್.
- ಯಾವುದೇ ಅಡೆ-ತಡೆ ಇಲ್ಲದೇ ಹೋದರೂ, ಆಸಕ್ತಿ ಇಲ್ಲದೇ ಇರುವ ದೃಶ್ಯಗಳನ್ನು ನೋಡಲೇ ಬೇಕಾದ ಅನಿವಾರ್ಯತೆ ಹೆಚ್ಚಿರುತ್ತದೆ (ಹಿಂಸೆ, ಹೊಡೆದಾಟ, ವಯಸ್ಕ ದೃಶ್ಯಗಳು).
ಕಥೆ ಮತ್ತು ಗುಣಮಟ್ಟ
ಕಥೆ, ಶೈಲಿ ಮತ್ತು ಪ್ರಕಾರಗಳನ್ನು ಹೇಳುವ ಒಂದು ಕರಕುಶಲತೆ ನಿರ್ಮಾತೃಗಳಿಗಿರಬೇಕು ಇದು ಓರ್ವ ಪ್ರೇಕ್ಷಕನನ್ನು ಮೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ, ಯಾವುದೇ ಪ್ರೇಕ್ಷಕ ಮೊದಲು ಕಥೆಗೆ ಪ್ರಾಶಸ್ತ್ಯವನ್ನು ನೀಡುತ್ತಾನೆ ಆ ನಂತರ ಅದರ ನಿರ್ಮಾಣ (ಮೇಕಿಂಗ್) ಗುಣಮಟ್ಟವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾನೆ.
ಕಥೆ ದುರ್ಬಲವಾಗಿದ್ದರೆ ನಿರ್ಮಾಣವು IMAX ಕ್ಯಾಮೆರಾ ಉಪಯೋಗಿಸಿ, ಹಾಲೀವುಡ್ ಸ್ಟೂಡಿಯೋ ಬಳಸಿ ಚಿತ್ರೀಕರಿಸಿದರೂ ಅದು ವ್ಯರ್ಥವಾಗುತ್ತದೆ ಅರಿಸ್ಟಾಟಲ್ ಹೇಳುವಂತೆ “ಕಥೆ ಕೆಟ್ಟದ್ದಾಗಿದ್ದಲ್ಲಿ ಅದರ ಫಲಿತಾಂಶವೂ ಕೆಟ್ಟದ್ದಾಗಿರುತ್ತದೆ”
ನೀವೇ ಯೋಚಿಸಿ ನೋಡಿ ಯಾವುದೋ ಭಾಷೆಯ ಚಿತ್ರ ಉತ್ತಮವಾಗಿದೆ ಎಂದರೆ ಅದು ಕಥೆಯಿಂದ ಹೊರೆತು ಇನ್ನಾವುದರಿಂದಲೂ ಅಲ್ಲ ಅದರ ಪಾತ್ರಗಳು ಸ್ಟಾರ್ ನಟರೇ ನಿರ್ವಹಿಸಿದ್ದರೂ ಕಥೆಯಲ್ಲಿ ನಾವೀನ್ಯತೆ ಇಲ್ಲದೇ ಹೋದಲ್ಲಿ ಅಲ್ಲಿ ಯಾವ ಪ್ರೇಕ್ಷಕರೂ ಗಮನ ಹರಿಸುವುದಿಲ್ಲ.
ಕಥೆಯ ಗುಣಮಟ್ಟ ಕಳಪೆಯಾಗಿಸುವ ಕೆಲವು ಅಂಶಗಳು
- ಕಥೆಯಲ್ಲಿ ನಾವೀನ್ಯತೆ ಕೊರತೆ. ಸಿದ್ದ ಸೂತ್ರಗಳನ್ನು ಪದೇ ಪದೇ ಬಳಸುವುದು.
- ಪ್ರಕಾರ, ಶೈಲಿಗಳಲ್ಲಿ ಯಾವುದೇ ಹೊಸತನವಿಲ್ಲ, ಪ್ರಯೋಗಗಳಿಲ್ಲ.
- ಗುಣಮಟ್ಟದ ಸಂಭಾಷಣೆ ಕೊರತೆ.
- ಕಥೆ ಹೊಸತೆನಿಸಿದರೂ ಕಳಪೆ ನಿರ್ಮಾಣ ಅಥವಾ ದ್ವಂದ್ವ ಸಾರಾಂಶ.
- ಯಾವುದೋ ಭಾಷೆಯಲ್ಲಿ ಈಗಾಗಲೇ ಪ್ರಸಿದ್ದಿಹೊಂದಿದ ದೃಶ್ಯಗಳನ್ನು/ಕಥೆಯನ್ನು ನಕಲು ಮಾಡುವುದು.
ತಮ್ಮ ದೈನಂದಿನ ಯಾಂತ್ರಿಕ ಜೀವನವನ್ನು ಬಿಡುವು ಮಾಡಿಕೊಂಡು ಸ್ನೇಹಿತರೂಳಗೂಡಿ ಅಥವಾ ಕುಟುಂಬದೊಂದಿಗೆ ತಮ್ಮ ಸಮಯವನ್ನು ಒಂದೊಳ್ಳೆ ಪ್ರವಾಸ, ವಿಹಾರದಲ್ಲಿ ಕಳೆಯಲು ಸಿದ್ದರಿರುತ್ತಾರೆ ಇದರಲ್ಲಿ ಅವಿನಾಭಾವವಾಗಿದ್ದ ಸಿನಿಮಾ ಮನರಂಜೆಯು ಈಗ ಒಂದು ಆಯ್ಕೆಯಾಗಿ ಬೇರ್ಪಟ್ಟಿದೆ.
ಚಿತ್ರಮಂದಿರದಲ್ಲಿ ಪ್ರೇಕ್ಷಕ ಮಹಾಪ್ರಭುವಿಗೆ ಉತ್ಸಾಹಭರಿತ, ಕುತೂಹಲಕಾರಿಯಾದ ಕಥೆಗಳಿಂದ ರಂಜಿಸದೇ ಹೋದಲ್ಲಿ ಅವರ ಸಂತೋಷದ ಕ್ಷಣಗಳ ವ್ಯರ್ಥವಾಗಿಸಿದ್ದೇ ಆದಲ್ಲಿ ಮತ್ತೇ ಆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಮರು ಸಂಪರ್ಕಿಸಲು ಮತ್ತು ಮುಂದಿನ ಪೀಳಿಗೆಯನ್ನು ಚಿತ್ರಮಂದಿರಗಳಿಗೆ ತರುವುದು ದುಸ್ಸಾಹಸವಾಗಿ ಪರಿಣಮಿಸುತ್ತದೆ.
For the latest updates and comprehensive writing guides, follow us on Instagram, Facebook, and Telegram.






[…] […]