HomeFuture of cinemaAudience behavior in mobile era. ಬದಲಾದ ಪ್ರೇಕ್ಷಕನ ಮನೋಭಾವ

Audience behavior in mobile era. ಬದಲಾದ ಪ್ರೇಕ್ಷಕನ ಮನೋಭಾವ

- Advertisement -spot_img

ಚಿತ್ರಮಂದಿರ ಈಗ ಮೊದಲಿನಂತೆ ಇಲ್ಲ ಎಲ್ಲವೂ ಬದಲಾಗಿದೆ ಕೂಲಂಕುಷವಾಗಿ ನಾವು ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎನ್ನುವುದು ನಮಗೆ ಅರಿವೇ ಇಲ್ಲದಂತಾಗಿದೆ.ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಕಾಲಿಡುವುದೇ ದೊಡ್ಡ ಸವಾಲು ಆಗಿರುವ ಇಂದಿನ ದಿನಗಳಲ್ಲಿ ಸಿನಿಮಾ ನೋಡುವ, ತೊಡಗಿಸುವ ಸಂಸ್ಕೃತಿ ಬದಲಾಗಿಬಿಟ್ಟಿದೆ. ಈ ಮಹತ್ತರ ಬದಲಾವಣೆಗೆ ಮುಖ್ಯ ಕಾರಣಗಳನ್ನು ಈ ಲೇಖನದ ಮೂಲಕ ಅವಲೋಕಿಸಲಾಗಿದೆ. | Audience behavior in mobile era.

ಬದಲಾದ ಸಂಸ್ಕೃತಿ

ವಾರಾಂತ್ಯಕ್ಕೆ ಸೀಮಿತವಾಗಿದ್ದ ಚಲನಚಿತ್ರಗಳು ಅಂಗೈ ಬಳಕೆಯ ಮೊಬೈಲ್ ಗೆ ವಿಸ್ತರಿಸಿಕೊಂಡಿದೆ ಸಾಮಾಜಿಕ ಮಾಧ್ಯಮ ಮತ್ತು ಸ್ಟ್ರೀಮಿಂಗ್ ಪ್ಲಾಟ್ ಫಾರಂಗಳು ಚಿತ್ರಮಂದಿರ-ಸಿನಿಮಾ ಭವಿಷ್ಯ/ಅವನತಿ ರೂಪಿಸುತ್ತಿದೆ.

ಅದೊಂದು ಕಾಲವಿತ್ತು ಟಿಕೆಟ್ ಖರೀದಿಸಿ ಚಿತ್ರಮಂದಿರದೊಳಗೆ ಕುಳಿತುಕೊಳ್ಳುತ್ತಿದ್ದಂತೆ ಕತ್ತಲು ಆವರಿಸಿಕೊಳ್ಳುತ್ತಿತ್ತು ಬೆಳ್ಳಿಪರದೆಯ ಮೇಲೆ ಚಲನಚಿತ್ರ ಆರಂಭವಾಗುತ್ತಿದ್ದಂತೆ ನಾವೊಂದು ಕಥಾ ಪ್ರಪಂಚದೊಳಗೆ ತಲ್ಲೀನರಾಗಲು ನಮ್ಮ ಮನಃ ಸ್ಥಿತಿಯು ಸಜ್ಜುಗೊಳ್ಳುತ್ತಿತ್ತು ಆದರೀಗ ಸಿನಿಮಾ ಶುರುವಾಗುತ್ತಿದ್ದಂತೆ ಅದನ್ನು ಸೆರೆ ಹಿಡಿಯಲು ತಮ್ಮ ಮೊಬೈಲ್ ಗಳನ್ನು ಎತ್ತಿ ಹಿಡಿಯುತ್ತಾರೆ, ಸೆರೆಹಿಡಿಯುತ್ತಾರೆ ಅದನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಹಾತೊರೆಯುತ್ತಾರೆ.

ಹೀರೋ ಇಂಟ್ರೊಡಕ್ಷನ್, ಒಂದೊಳ್ಳೆ ಫೈಟ್, ಡೈಲಾಗ್, ಚಿತ್ರದ ಮುಖ್ಯ ತಿರುವು ಪಡೆಯುವ ದೃಶ್ಯ ಇವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಡುತ್ತಾರೆ ಈ ಮೂಲಕ ಕಥೆಯು ಸೋರಿಕೆಯಾಗುತ್ತದೆ ಅಥವಾ ಅಂತಹ ದೊಡ್ಡ ಸನ್ನಿವೇಶಗಳನ್ನು ಈಗಾಗಲೇ ನೋಡಿರುವುದರಿಂದ ಅಷ್ಟೇನು ಮಹತ್ವದ್ದಲ್ಲ ಎನಿಸಿಬಿಡುತ್ತದೆ ಇದಕ್ಕೆಲ್ಲಾ ಕಾರಣ ನಾವುಗಳು ಮಾಡುವ ಒಂದು ಅಸಭ್ಯ ಕಾರಣದಿಂದ ಎಂದು ಮನವರಿಕೆಯಾಗುವುದು ಯಾವಾಗ?

ಪ್ರೇಕ್ಷಕರ ವೀಕ್ಷಣಾಪದ್ದತಿ

ಕೆಲವರು ಚಲನ ಚಿತ್ರದ ಮಧ್ಯೆಯೂ ಮೊಬೈಲ್ ವೀಕ್ಷಣೆಯಲ್ಲಿ ಮುಳುಗಿರುತ್ತಾರೆ ಇನ್ ಸ್ಟಾಗ್ರಾಮ್, ಫೇಸ್ ಬುಕ್, ರೀಲ್ಸ್ ನೋಡುತ್ತಾ ಕುಳಿತಿರುತ್ತಾರೆ ಈ ನಡವಳಿಕೆಯು ಉಳಿದ ಪ್ರೇಕ್ಷಕರಿಗೆ ಕಿರಿಕಿರಿಯನ್ನುಂಟು ಮಾಡುವುದಲ್ಲದೇ ಇತರರನ್ನೂ ಮೊಬೈಲ್ ನೋಡುವಂತೆ ಪ್ರೇರೇಪಿಸುತ್ತದೆ.

ಸಿನಿಮಾ ಸಮಾಜಕ್ಕೆ ಮುಖಾ-ಮುಖಿಯಾದಾಗಿಂದಲೂ ತಾಂತ್ರಿಕ ಆವಿಶ್ಕಾರಗಳು ಪ್ರೇಕ್ಷಕರ ಮೇಲೂ ನಿರ್ಮಾತೃಗಳ ಮೇಲೂ ಪರಿಣಾಮ ಬೀರುತ್ತಲೇ ಇದೆ, ತಾಂತ್ರಿಕ ಸಾಧ್ಯತೆಗಳನ್ನು ಅಭಿವೃದ್ಧಿಪಡಿಸುತ್ತ ವೀಕ್ಷಕರ ಸಿನಿರಸಿಕರ ವೀಕ್ಷಣಾ ಸಂಸ್ಕೃತಿಗಳೂ ಬದಲಾಗಿದೆ. ಇದರ ನಡುವೆ ಡಿಜಿಟಲ್ ಪ್ಲಾಟ್ ಪಾರ್ಮ್ ಮತ್ತು ಸ್ಮಾರ್ಟ್ ಫೋನ್ ಬಳಕೆಯು ಚಲನಚಿತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ.

ಮೊದಮೊದಲು ಸಾಮೂಹಿಕ ವೀಕ್ಷಣಾ ಅನುಭವವನ್ನು ಇಂದಿನ ತಾಂತ್ರಿಕ ಅಭಿವೃದ್ಧಿಗೆ ವಿಕಸಿಸಿಕೊಳ್ಳುತ್ತ ವೈಯುಕ್ತಿಕ ಮನರಂಜನೆಯಾಗಿ ಬದಲಿಸಿಕೊಂಡಿದೆ ಇದರಲ್ಲಿ ಸ್ಟ್ರೀಮಿಂಗ್ ವೇದಿಕೆಗಳೂ ಪ್ರೇಕ್ಷಕರ ವೀಕ್ಷಣಾಪದ್ದತಿಯನ್ನು ಬದಲಿಸಿದೆ.

ಮೊಬೈಲ್ ನಲ್ಲಿಯೇ ಸಿನಿಮಾ ಮನರಂಜನೆ, ಸಾಮಾಜಿಕ ಮಾಧ್ಯಮ ಅಂಗೈಯಲ್ಲೇ ಸಿಗುವಾಗ ಬಳಕೆದಾರರು ಬೇರೆ ಯಾವ ಚಟುವಟಿಕೆಗಳನ್ನೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಹಸಪಡುವಂತಾಗಿದೆ

ಈ ಮೊದಲೇ ಇದ್ದ ಸವಾಲುಗಳು

ಚಿತ್ರಮಂದಿರದ ಮೇಲೆ ಅತೀದೊಡ್ಡ ಸವಾಲುಗಳು ಎದುರಾಗಿರುವುದು ಇದು ಮೊದಲೇನಲ್ಲ, ಆರಂಭದಲ್ಲಿ ದೂರದರ್ಶನ ಕೊಂಚ ಹಿನ್ನಡೆಯನ್ನು ಸಾಧಿಸಿತು, ವಿ.ಸಿ.ಆರ್, ವಿ.ಸಿ.ಡಿ, ಡಿ.ವಿ.ಡಿ ಯಂತಹ ಸಾಧನಗಳು ತಮ್ಮಿಷ್ಟದ ಸಿನಿಮಾಗಳನ್ನು ಬೇಕಾದ ಸಮಯದಲ್ಲಿ ಕುಟುಂಬದೊಂದಿಗೆ ನೋಡುವ ಮೂಲಕ ಚಿತ್ರಮಂದಿರಗಳನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯಿತು, ಕಂಪ್ಯೂಟರ್, ಇಂಟರ್ ನೆಟ್, ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿ.ವಿ ಇವುಗಳೆಲ್ಲವೂ ಅತೀ ದೊಡ್ಡ ಹಿನ್ನಡೆಯನ್ನು ಮತ್ತು ಎಷ್ಟೋ ಚಿತ್ರಮಂದಿರಗಳ ಅವನತಿಗೆ ಕಾರಣವಾಗಿದೆ.

ಮಾಹಿತಿ ಮತ್ತು ತಂತ್ರಜ್ಞಾನಗಳೆರಡೂ ಅಂಗೈ ಬಳಕೆ ಸಾಧನದಲ್ಲಿ ಸಿಗುತ್ತಿರುವಾಗ ಯಾವ ಚಿತ್ರಮಂದಿರ ಪ್ರೇಕ್ಷನನ್ನು ತನ್ನೆಡೆಗೆ ಆಕರ್ಶಿಸಲಾದೀತು? ಹಳ್ಳಿಯಿಂದ ಪಟ್ಟಣಕ್ಕೆ ಬಂದು ಸಿನಿಮಾಗಳನ್ನು ನೋಡುತ್ತಿದ್ದ ಪ್ರೇಕ್ಷಕರು ಮನೆಯಲ್ಲಿಯೇ ಕುಳಿತು ಹೊಚ್ಚ ಹೊಸ ಮತ್ತು ಪ್ರಾಪಂಚಿಕ ಸಿನಿಮಾಗಳನ್ನು ವೀಕ್ಷಿಸುವಾಗ ಚಿತ್ರಮಂದಿರವು ಕುಂಟುತ್ತಾ ಸಾಗುವ ಸ್ಥಿತಿ ನಿರ್ಮಾಣವಾಗಿದೆ.

ಬದಲಾಗುತ್ತಿರುವ ಸಿನಿಮಾ ವೀಕ್ಷಣಾ ಸಂಸ್ಕೃತಿ. ಓದಲು ಇಲ್ಲಿ ಕ್ಲಿಕ್ ಮಾಡಿ.

ಯುವ ಪೀಳಿಗೆ

ಇಂದಿನ ಯುವ ಪೀಳಿಗೆ ಜೊತೆಯಲ್ಲಿ ಕುಳಿತು ಮಾತನಾಡುವುದೇ ಹೆಚ್ಚು ಸವಾಲಾಗಿದೆ ಎಲ್ಲಾ ಸ್ನೇಹಿತರು ಜೊತೆಗೂಡಿ ಕುಳಿತರೂ ಮೊಬೈಲ್ ನಲ್ಲಿ ಮುಳುಗಿರುತ್ತಾರೆ ತಂತ್ರಜ್ಞಾನವನ್ನು ಅಷ್ಟರಮಟ್ಟಿಗೆ ಆಪ್ತತೆಯಿಂದ ಅಪ್ಪಿಕೊಂಡಿದ್ದಾರೆ ಒಂದು ವೇಳೆ ಅದರಿಂದಾಚೆಗಿನ ಜೀವನ ದುಃಸ್ವಪ್ನದಂತೆ ನಿರ್ಮಾಣವಾಗಿಬಿಟ್ಟಿದೆ.

ಮೊಬೈಲ್ ಇಂದಿನ ಯುವ ಪೀಳಿಗೆಯನ್ನು ಸಾಮಾಜಿಕವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುವ ಮೂಲಕ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾರದಷ್ಟು ಬದಲಾಯಿಸಿದೆ ಸಾಂಪ್ರದಾಯಿಕ ಮನರಂಜನೆ ಮಾದರಿಗಳನ್ನು ಇಷ್ಟಪಡದೇ ತಮ್ಮದೇ ಆದ ಮೊಬೈಲ್ ಬಳಕೆಯನ್ನು ಮುಂದುವರಿಸುತ್ತಾ ಸಮಯ ಕಳೆಯುತ್ತಾರೆ.

ಆದ್ಯತೆಗಳು ಮತ್ತು ಪ್ರದರ್ಶನ

ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಜನರು ಹೆಚ್ಚಿನ ಸಮಯವನ್ನು ನೋಡುವಂತೆ ಮಾಡಿದೆ ಯಾವುದೇ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವ ತಾಳ್ಮೆ ನಶಿಸುತ್ತಿದೆ,

ವ್ಯವಹಾರ ಮತ್ತು ದೈನಂದಿನ ಜೀವನ ಎರಡರಲ್ಲೂ ಅತೀವವಾಗಿ ಮೊಬೈಲ್ ಬಳಸುವಿಕೆಯಿಂದ ಆರೋಗ್ಯದಲ್ಲಿಯೂ ಮತ್ತು ಶೈಕ್ಷಣಿಕವಾಗಿಯೂ ಹಿನ್ನಡೆಯನ್ನುಂಡು ಮಾಡಿದರೂ ಆಯಾಸ ಪಡದೇ ಅಗತ್ಯಕ್ಕಿಂತ ಹೆಚ್ಚಿನ ಮನರಂಜನೆ ಅಗ್ಗದ ರೀತಿಯಲ್ಲಿ ಸಿಗುವಾಗ ಚಿತ್ರಮಂದಿರದ ವೆಚ್ಚ ದುಬಾರಿ ಎಂತಲೂ ಮತ್ತು ಸಿನಿಮಾ ಬೇಸರದ ಮನೋಭಾವನೆಯನ್ನು ಸೃಷ್ಟಿಸಿದೆ.

ಕೋವಿಡ್-19ರ ಪರಿಣಾಮ

ಸಾಂಕ್ರಾಮಿಕ ರೋಗ ಹರಡುವಿಕೆ ಹಿನ್ನೆಲೆ ಪ್ರೇಕ್ಷಕರು ತಮ್ಮ ಮೊಬೈಲ್ (ಹೆಚ್ಚಿನದಾಗಿ) ನಿಂದಲೇ ಸಿನಿಮಾ ನೋಡುವ ಸಂಸ್ಕೃತಿಯನ್ನು ಬೆಳೆಸಿಕೊಂಡರು ದೀರ್ಘ ಕಾಲಿಕವಾಗಿ ಚಿತ್ರಮಂದಿರಗಳು ಬಂದ್ ಆಗಿದ್ದು ಪ್ರೇಕ್ಷಕರನ್ನು ಮೊಬೈಲ್ ಸಂಸ್ಕೃತಿಗೆ ಒಗ್ಗಿಕೊಳ್ಳುವಂತೆ ಮಾಡಿತು ನಂತರದಲ್ಲಿ ಚಿತ್ರಮಂದಿರಗಳು ತೆರೆದರೂ ಜನರು ಈಗಾಗಲೇ ನೆಚ್ಚಿನ ಸಿನಿಮಾಗಳನ್ನು ತಮ್ಮ ಅನುಕೂಲತೆಗೆ ತಕ್ಕಂತೆ ಮೊಬೈಲ್ ನಲ್ಲಿಯೇ ನೋಡಲು ಆಸಕ್ತಿ ಮುಂದುವರೆಸಿದರು.

ದೊಡ್ಡ ಮತ್ತು ಸ್ಪಷ್ಟ ಧ್ವನಿವರ್ಧಕ (DTS), ದೊಡ್ಡಪರದೆ ಇದು ಯಾವುದೇ ಪ್ರೇಕ್ಷಕನನ್ನು ಆಕರ್ಶಿಸಲಿಲ್ಲ ಬದಲಾಗಿ ಒಂದು ಈಯರ್ ಪೋನ್ ಮತ್ತು 6 ಇಂಚಿನ ಮೊಬೈಲ್ ಪರದೆ ಸಾಕೆನಿಸುವ ಹಂತಕ್ಕೆ ಪ್ರೇಕ್ಷಕನನ್ನು ತಂದು ನಿಲ್ಲಿಸಿದೆ.

ಚುಟುಕು ಮನರಂಜನೆ

ಮೊದಲು ಚುಟುಕು ಹಾಸ್ಯ ಕಥೆಗಳನ್ನು ಹೇಳುವ ಮೂಲಕ ನಗೆ ಗಡಲಲ್ಲಿ ತೇಲಿಸುತ್ತಿದ್ದ ಕಲಾವಿದರು ಇದ್ದರು ಒಂದೆರಡು ವಾಕ್ಯದಲ್ಲಿಯೇ ಹಾಸ್ಯ ಸೃಷ್ಟಿಸಿಬಿಡುತ್ತಿದ್ದರು ಈಗ ಇದೇ ಪದ್ದತಿ ಆಧುನಿಕವಾಗಿ ಬದಲಾಗಿದೆ 30 ಸೆಕೆಂಡಿನ ರೀಲ್ಸ್ ಮೂಲಕ ಒಟ್ಟಾರೆ ಹಾಸ್ಯವನ್ನು, ವಿಷಯವನ್ನು ಮೀಡಿಯಾಗಳ ಮೂಲಕ ಹರಿಯಬಿಡುತ್ತಿದ್ದಾರೆ ಈ ಮನೋರಂಜನೆ ವಿಶ್ವವ್ಯಾಪಿ ನಿರ್ಮಾತೃಗಳಿಗೂ ಅವಕಾಶವನ್ನು ಕಲ್ಪಿಸುವ ಮೂಲಕ ಜಗತ್ತಿನ ಪರಿಚಯದ ಜೊತೆ ಜೊತೆಗೆ ಮನರಂಜನೆ ನೀಡುತ್ತಿದೆ.

audience behavior in mobile era

ಎಷ್ಟು ನೋಡಿದರೂ ಕೊನೆಗೊಳ್ಳದ ಶಾರ್ಟ್ಸ್ ಮತ್ತು ರೀಲ್ಸ್ ಗಳ ಪದ್ದತಿಯನ್ನು ಇಂದಿನ ಯುವ ಮತ್ತು ಮಧ್ಯಮ ಪೀಳಿಗೆ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ ಯಾವುದೇ ಕಲೆಯನ್ನು ವಿಷಯವನ್ನು ಆ ಚಿಕ್ಕ ಸಮಯದೊಳಗೇ ಹೇಳುವುದರಿಂದ ವೀಕ್ಷಕರಿಗೆ ಹೊಸ ವಿಭಿನ್ನತೆಗಳ ಪರಿಚಯವಾಗುತ್ತಿದೆ ಇದು ಕಲಾಮಾಧ್ಯಮದ ಆಧುನಿಕತೆಯ ಪರಾಕಾಷ್ಟೆ ಎಂದರೆ ತಪ್ಪಿಲ್ಲ.

ಬದಲಾದ ಅಭ್ಯಾಸ

2017ರಲ್ಲಿ 450-465 ಮಿಲಿಯನ್ ಇಂಟರ್ ನೆಟ್ ಬಳಕೆದಾರರು ಈಗ ಸರಾಸರಿ 1ಬಿಲಿಯನ್ ತಲುಪಿದ್ದಾರೆ. ಪ್ರತೀ ದಿನ ಸರಾಸರಿ 3-4 ಗಂಟೆಗಳಕಾಲ ಅವಧಿಯನ್ನು ತಮ್ಮ ಮೊಬೈಲ್ ನಲ್ಲಿಯೇ ಕಳೆಯುತ್ತಿದ್ದಾರೆ. ಇದು ಪ್ರತಿದಿನ ಕೆಲಸದಲ್ಲಿ ತೊಡಗಿಸಿಕೊಂಡು ಕಳೆಯುವ ಸಮಯ ಇನ್ನು ಬಿಡುವಿನ ದಿನಗಳಲ್ಲಿ 5-7ಗಂಟೆಗಳ ಕಾಲ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಈ ಒಂದು ಸಮಯ ಮಾಹಿತಿ, ಮನರಂಜನೆ, ಈ ಕಾಮರ್ಸ್ ಒಳಗೊಂಡಿದ್ದು ತಮ್ಮ ದಿನಚರಿಯನ್ನು ಸಂಪೂರ್ಣವಾಗಿ ಮೊಬೈಲ್ ಗೆ ಸೀಮಿತಗೊಳಿಸಿದ್ದಾರೆ.

ಮನೆಯಲ್ಲಿಯೇ ಕುಳಿತು ಮನರಂಜನೆ ಆಸ್ವಾದಿಸುವ ಜನರಿಗೆ ಯಾವುದೇ ಒತ್ತಡಗಳನ್ನು ನೀಡದೇ ಸುಲಭವಾಗಿ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ಮೊಬೈಲ್ ನಲ್ಲಿಯೇ ವೀಕ್ಷಿಸುತ್ತಾರೆ. ಈ ಅಭ್ಯಾಸಗಳನ್ನು ಸ್ಟ್ರೀಮಿಂಗ್ ಪ್ಲಾಟ್ ಫಾರಂಗಳು ಜಾಗರೂಕತೆಯಿಂದ ಪ್ರಸ್ತುತ ಪಡಿಸುವ ಮೂಲಕ ತನ್ನ ಗ್ರಾಹಕರನ್ನು ಹಿಡಿತದಲ್ಲಿ ಹಿಡಿದುಕೊಂಡಿವೆ

ಪರದೆಗಳಿಗೆ ಸೀಮಿತವಾದ ಚಿತ್ರಗಳು

ಲಾರ್ಜರ್ ದ್ಯಾನ್ ಲೈಫ್ ಚಿತ್ರಗಳು ಮೊಬೈಲ್ ಗಳನ್ನು ಅವಲಂಬಿಸಿಲ್ಲ ಬದಲಾಗಿ ಚಿತ್ರದ ಗುಣಮಟ್ಟವನ್ನು ಪರೀಕ್ಷಿಸುತ್ತವೆ ಉದಾ: ಅವತಾರ್, ಬಾಹುಬಲಿ, ಕೆ. ಜಿ. ಎಫ್, ಕಾಂತಾರ ಚಾಪ್ಟರ್-1, ಈ ಎಲ್ಲಾ ಚಿತ್ರಗಳು ಉನ್ನತ /ಅತೀ ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡ ಚಿತ್ರಗಳು. ಇಂತಹ ಚಿತ್ರಗಳನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ಬಹು ಬೇಡಿಕೆಯಾಗಿ ನೋಡಬಯಸುತ್ತಾರೆ.

Audience behavior in mobile era

ಆದರೆ ವಾಸ್ತವದಲ್ಲಿ ಅಷ್ಟು ದೊಡ್ಡ ಮಟ್ಟದ ಚಿತ್ರಗಳನ್ನು ತಯಾರಿಸಲು ದೊಡ್ಡ ಗಾತ್ರದ ಬಜೆಟ್ ಅವಶ್ಯಕತೆ ಇರುತ್ತದೆ ಭಾರತದಲ್ಲಿ ಸರಾಸರಿ 12-15. ವರ್ಷದಲ್ಲಿ ತೆರೆಕಾಣುವಂತಹ ಇಂತಹ ಚಿತ್ರಗಳು ಕೆಲವೊಮ್ಮೆ ಹಾಕಿದ ಬಂಡವಾಳವೂ ಸರಿಯಾದ ಗಳಿಕೆ ಇಲ್ಲದೇ ಚಿತ್ರಮಂದಿರದಿಂದ ಮರೆಯಾಗಿವೆ.ಈ ಮೂಲಕ ನಿರ್ಮಾಪಕರು ಕಡಿಮೆ ಮೊತ್ತದ ಬಜೆಟ್ ಸಿನಿಮಾ, ಸ್ಟ್ರೀಮಿಂಗ್ ಪ್ಲಾಟ್ ಪಾರಂಗಳನ್ನು ಗುರಿಯಾಗಿಸಿ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾರೆ. ಇದು ಪುನಃ ಚಿತ್ರ ಮಂದಿರದ ಪ್ರೇಕ್ಷಕನನ್ನು ಮನೆಯಲ್ಲಿಯೇ ನೋಡುವಂತೆ ಮಾಡಲು ಪ್ರೇರೇಪಿಸಲಾಗುತ್ತದೆ.

ತಾತ್ಪರ್ಯ

ಒಟ್ಟಾರೆಯಾಗಿ ನೆಟ್ ವರ್ಕ್ ಗಳು ನೀಡುತ್ತಿರುವ ಅಗ್ಗದ ದರದ ಪ್ಯಾಕೇಜ್ ಗಳಿಂದ ಸಿನಿಮಾದ ನಿಜವಾದ ಅನುಭವವನ್ನು ಪ್ರೇಕ್ಷಕ ಸ್ವತಃ ವೈಯಕ್ತಿಕ ಮನರಂಜನೆಯನ್ನು ಪಡೆಯುವ ಮೂಲಕ ಕಳೆದು ಕೊಳ್ಳುತ್ತಿದ್ದಾರೆ.

ವಿಷಯ ಪೂರೈಕೆ ದಾರರು, ಈ ಕಾಮರ್ಸ್ ಮಾರುಕಟ್ಟೆ OTT ಯಂತಹ ಸ್ಟ್ರೀಮಿಂಗ್ ಪ್ಲಾಟ್ ಪಾರಂಗಳು ಬಳಕೆದಾರರನ್ನು ಸೆಳೆಯಲು ಏನೆಲ್ಲಾ ಕಸರತ್ತು ನಡೆಸುತ್ತಿವೆ ಆದರೆ ಚಿತ್ರಮಂದಿರಗಳು ಈ ಎಲ್ಲದರ ನಡುವೆ ಸಿಲುಕಿ ಮರೆಯಾಗುತ್ತಿದೆ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

1 COMMENT

LEAVE A REPLY

Please enter your comment!
Please enter your name here

You cannot copy content of this page