HomeScript to screenComing up with great story ideas - ಕಥೆಯ ಕಲ್ಪನೆಗಳನ್ನು ಬೆಳೆಸುವುದು ಹೇಗೆ?

Coming up with great story ideas – ಕಥೆಯ ಕಲ್ಪನೆಗಳನ್ನು ಬೆಳೆಸುವುದು ಹೇಗೆ?

- Advertisement -spot_img

ಉತ್ತಮ ಕಥಾ ಕಲ್ಪನೆಗಳನ್ನು (story ideas) ಹೇಗೆ ಬೆಳೆಸಿಕೊಳ್ಳಬೇಕು? ನಿಮ್ಮ ಕಥಾ ಕಲ್ಪನೆಗೆ ಮೂಲಗಳನ್ನು ಎಲ್ಲಿ ಶೋಧಿಸಬೇಕು ಅವುಗಳನ್ನು ಸಿನಿಮೀಯ ಕಥೆಯಾಗಿಸುವ ಹೆಬ್ಬಯಕೆಗೆ ಸಹಾಯವಾಗುವಂತೆ ಈ ಲೇಖನವನ್ನು ಸಿದ್ದಪಡಿಸಲಾಗಿದೆ.

ವಾಸ್ತವವಾಗಿ ಅನೇಕ ಕಥೆಗಳು ಪ್ರಸಿದ್ದಿಹೊಂದಿರುವುದು ಜನಮನ್ನಣೆ ಗಳಿಸಿರುವುದು ಅವುಗಳನ್ನು ಬರೆಯುವ ವಿಧಾನದಿಂದ, ಪ್ರತೀ ಕಲ್ಪನೆಯೂ ಇನ್ನಾವುದೋ ದೇಶ, ಭಾಷೆಯಲ್ಲಿ ಪುನರಾವರ್ತಿತವಾಗಿರಬಹುದು ನೀವು ಅದನ್ನು ಕಂಡುಕೊಳ್ಳದೇ ಇರಬಹುದು ಆದರೆ ನಮ್ಮ ನೆಲ, ಸಂಸ್ಕೃತಿ ಮತ್ತು ಸಮಕಾಲೀನತೆಗೆ ಅನುಗುಣವಾಗಿ ಸೃಜನಶೀಲ ಬರವಣಿಗೆಯಿಂದಷ್ಟೇ ಅದು ವಿಭಿನ್ನವಾಗಿ ಸಿನಿಮೀಯ ಕಥೆಯಾಗಿ ರೂಪ ಪಡೆದು ಪ್ರೇಕ್ಷಕರನ್ನು ಹಿಡಿದಿಡುತ್ತವೆ ಉದಾ: ತಿಥಿ ಚಿತ್ರದ ಕಥೆಯು ಹೆಚ್ಚು ನೈಜತೆ ಮತ್ತು ಪಾತ್ರ ರಚನೆ ಈ ನೆಲದ ಕಟ್ಟುಪಾಡುಗಳು ಮತ್ತು ಸಮಕಾಲೀನ ಸಂಬಂಧಗಳು ಆಸ್ತಿ ವಿಭಜನೆಯಂತಹ ಕಥಾವಸ್ತುವು ಅಂತಿಮ ಹಂತದವರೆಗೂ ಸರಿಯಾಗಿ ಪೋಣಿಸಿರುವುದರಿಂದ ಪ್ರೇಕ್ಷಕರನ್ನು ಹೆಚ್ಚು ತಲ್ಲೀನ ಗೊಳಿಸುವಲ್ಲಿ ಯಶಸ್ಸನ್ನು ಕಂಡಿದೆ

ಇದೇ ರೀತಿಯಾಗಿ ಮಲಯಾಳಂನ ಈ.ಮಾ.ಯೌ (Ee.Ma.Yau) ಎನ್ನುವ ಕಥೆಯೂ ಸಹ ಒಂದು ಸಾವು ಮತ್ತು ಅದರ ಸುತ್ತುವರಿಯುವ ಪಾತ್ರಗಳು, ತಿಳಿಹಾಸ್ಯ ಈ ಎಲ್ಲವನ್ನೂ ಅಲ್ಲಿನ ಸಂಸ್ಕೃತಿ, ಆಚಾರ ವಿಚಾರದಿಂದ ಭಿನ್ನಗೊಳಿಸಿ ಮೌಲ್ಯವನ್ನು ಹೆಚ್ಚಿಸುವ ಮೂಲಕ ನೈಜತೆಯನ್ನು ಸೃಸ್ಟಿಸುತ್ತದೆ.

ತಿಥಿ, ಈ.ಮಾ.ಯೌ (Ee.Ma.Yau), ತೆಲುಗಿನ ಬಳಗಂ ಈ ಮೂರೂ ಚಿತ್ರಗಳು ಸಾವಿನ ಸುತ್ತು ಸುತ್ತುವರೆಯುವ ಚಿತ್ರಗಳಾದರೂ ಅವುಗಳನ್ನು ಹೇಳುವ ರೀತಿ ಮತ್ತು ದೃಷ್ಟಿಕೋನ ಯಶಸ್ಸನ್ನು ಗಳಿಸಿಕೊಟ್ಟಿವೆ, ಇಂತಹ ಅದೆಷ್ಟೋ ಕಥೆಗಳು ನಮ್ಮ ನಡುವೆಯೇ ಇದ್ದರೂ ನಾವು ಅವುಗಳನ್ನು ಗಮನಿಸುವ ಆಲೋಚಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಷ್ಟೇ. ಈ ಲೇಖನವು ಅಂತಹ ಆಲೋಚನೆಗಳನ್ನು ಹೆಕ್ಕಿ ಕಥೆಯನ್ನಾಗಿಸುವ ನಿಮ್ಮಗುರಿಗೆ ಬೆಂಬಲ ನೀಡುತ್ತದೆ.

ಕಾಲ್ಪನಿಕ ಜಗತ್ತು

ಒಂದು ಕಾಲ್ಪನಿಕ ಜಗತ್ತು ಸರಿಯಾದ ಆವರಣವನ್ನು (premise) ಸೃಷ್ಟಿಸಬೇಕು ಅಲ್ಲಿನ ಪಾತ್ರಗಳು ಅದಕ್ಕೆ ಅನುಗುಣವಾಗಿ ವರ್ತಿಸಬೇಕು ಏಕೆಂದರೆ ಪ್ರೇಕ್ಷಕರು ಅದನ್ನು ಭಿನ್ನ ರೀತಿಯಲ್ಲಿ ವಿಭಿನ್ನ ಆಲೋಚನೆಗಳಿಂದ ಸ್ವೀಕರಿಸುತ್ತಾರೆ. ನಿಮ್ಮ ಕಥೆಯ ಉದ್ದೇಶವು ನಿರ್ಧಿಷ್ಟ ಮತ್ತು ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕು ಉತ್ತಮ ಕಲ್ಪನೆಯು ಉತ್ತಮ ಕಥೆಯನ್ನಾಗಿಸುತ್ತದೆ.

story ideas picture features a guy choosing a different types of imagined world

ಆರಂಭಿಕ ಹಂತಗಳು

  • ನಿಮ್ಮ ಕಥಾ ನಾಯಕ ಅಥವಾ ಕೇಂದ್ರ ಪಾತ್ರ ಯಾರು?
  • ಆ ಪಾತ್ರವು ನಿಮ್ಮ ಕಥೆಯಲ್ಲಿ ಯಾವುದನ್ನು ನಿರ್ಧಿಷ್ಟವಾಗಿ ಬಯಸುತ್ತಿದೆ. (ಉದಾ: ಪ್ರತೀಕಾರ, ವಿಜಯ, ಪ್ರೀತಿ/ಪ್ರೇಮ, ನಿರಪರಾಧಿ, ಯಶಸ್ವೀ ಉದ್ಯಮಿ)
  • ನಿಮ್ಮ ಕಥಾನಾಯಕ ಬಯಸಿದ್ದನ್ನು ಪಡೆಯುವುದಕ್ಕಾಗಿ ನಡೆಸುವ ಹೋರಾಟವೇನು? ಅಂತಿಮವಾಗಿ ಏನನ್ನು ಪಡೆಯುತ್ತಾನೆ? ಏನೆಲ್ಲಾ ಕಳೆದುಕೊಳ್ಳುತ್ತಾನೆ.

ಖಾಲಿ ಪುಟ

ನಿಮ್ಮ ಖಾಲಿ ಪುಟ ಅನಂತ ಆಲೋಚನೆ ಅಥವಾ ಕಥೆಕಟ್ಟುವ ಸಾಧ್ಯತೆಗಳನ್ನು ಒದಗಿಸಿಕೊಡುತ್ತದೆ, ನಿಮ್ಮ ಕಲ್ಪನೆಗೆ ಅಗಾಧ ಶಕ್ತಿಯಿದೆ  ಆರಂಭದಿಂದ ಅಂತ್ಯದವರೆಗೂ ನಿರ್ಧಿಷ್ಟ ಧ್ಯೇಯ ಗುರಿ ಹೊಂದದೇ ಹೋದಲ್ಲಿ ಅವುಗಳು ಎಲ್ಲಿಂದಲೋ ಎಲ್ಲಿಗೋ ತಲುಪಿ ಅಸ್ಪಷ್ಟವಾಗಿಬಿಡುತ್ತದೆ, ಕಾರಣ ನಾವು ಸ್ಪಷ್ಟ ಕಲ್ಪನೆಯನ್ನು ಒಮ್ಮೇಲೆ ಸೃಷ್ಟಿಸಲು ಆಗುವುದಿಲ್ಲ ಅದಕ್ಕಾಗಿಯೇ ಅಲಿಖಿತ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ

  • ನಿಮ್ಮ ಕಥಾವಸ್ತು ಯಾವುದು?
  • ಯಾವ ಪಾತ್ರವು ನಿಮ್ಮ ಕಥೆಯನ್ನು ಆಧರಿಸಿದೆ?
  • ನೀವು ಸೃಸ್ಟಿಸಿದ ಆವರಣ ಕಥೆಗೆ ಅನುಗುಣವಾಗಿದೆಯೇ?
  • ಯಾವ ದೃಷ್ಟಿಕೋನದಿಂದ ಕಥೆಯನ್ನು ನೋಡಬಯಸುತ್ತಿರುವಿರಿ?
  • ಯಾವ ಶೈಲಿಯು ನಿಮ್ಮ ಕಥೆಯನ್ನು ಅನುಸರಿಸಿದೆ?
  • ಅಂತಿಮವಾಗಿ ಯಾವ ವಿಷಯ ವಸ್ತುವನ್ನು ಹೇಳಲು ಹೊರಟಿ‍ದ್ದೀರಿ?

ಕೆಲವು ಬರಹಗಾರರು ಕಥೆಯನ್ನು ಅವಲಂಬಿಸಿ ಪಾತ್ರಗಳನ್ನು ಸೃಷ್ಟಿಸುತ್ತಾರೆ, ಕೆಲವರು ಪಾತ್ರಗಳನ್ನು ಸೃಷ್ಟಿಸಿ ಕಥೆಯನ್ನು ಹೆಣೆಯುತ್ತಾರೆ. ಆದರೆ ಇಲ್ಲಿ ಹೀಗೆಯೇ ಬರೆಯಬೇಕು ಎಂಬುವ ನಿಯಮವಿಲ್ಲ. ಭಿನ್ನ ಆಲೋಚನೆಯಿಂದ ಕಥೆ ಕಟ್ಟುವುದು ಮುಖ್ಯವಾಗುತ್ತದೆ ಉದಾ: ಒಂದು ಪಾತ್ರದ ಗುಣಲಕ್ಷಣಗಳನ್ನು ಬರೆದುಕೊಳ್ಳಿ ಆತನಿಗೆ ತದ್ವಿರುದ್ದವಾದ ಆವರಣವನ್ನು ಸೃಸ್ಟಿಸುವ ಮೂಲಕ ಗುರಿಯನ್ನು ಸಾಧಿಸುವ ಛಲ ಮತ್ತು ಸವಾಲುಗಳನ್ನು ಮುಂದಿಟ್ಟು ಆ ಪ್ರಪಂಚವನ್ನು ಕಟ್ಟಿಕೊಡಿ.

ಉದಾಹರಣೆಗೆ: ಒಬ್ಬ ನಿಷ್ಟಾವಂತ ಅಧಿಕಾರಿ/ ನಿಷ್ಟಾವಂತ ಪ್ರಜೆ/ ನಿಷ್ಟಾವಂತ ರಾಜಕಾರಣಿ/ ಆತನಿಗೆ ವಿರುದ್ದವಾಗಿ ನಿಂತಿರುವ ಅನಿಷ್ಟಾವಂತ ಆಡಳಿತ ವ್ಯವಸ್ಥೆ ಈ ಎಲ್ಲದರ ಮೂಲಕ ನಿಮ್ಮ ನಾಯಕ ಸಾಧಿಸ ಹೊರಡಬೇಕಾಗಿರುವುದು ಏನು? ಹೀಗೆ ನಿಮ್ಮ ಕಥಾವಸ್ತುವನ್ನು ಮೊದಲು ರಚಿಸಿಕೊಳ್ಳಿ.

ನೀವು ಆವರಣವನ್ನು ಮೊದಲು ರಚಿಸುತ್ತೀರ? ಹಾಗಿದ್ದರೆ. ನಿಮ್ಮ ಆವರಣವು ಯಾವ ಕಥಾ ಪ್ರಪಂಚವನ್ನು ಸೃಷ್ಟಿಸಿದೆ? ಉದಾ: ಗೌಪ್ಯ ಜಗತ್ತು/ ಭೂಗತ ಲೋಕ/ ಸಾವಿನ ಮನೆ/ ಮಧುವೆಯ ಮನೆ/ ಕೆ. ಜಿ. ಎಫ್ ನಂತೆ ಶೋಷಿತ ಕಾರ್ಮಿಕರ ಗಣಿ ಪ್ರದೇಶ ಹೀಗೆ ನಿಮ್ಮ ನಾಯಕ ಇಲ್ಲಿ ವಿಜಯೀಶಾಲಿಯಾಗಲು ಆತನಿಗಿರುವ ಗುರಿ, ಸವಾಲು ಏನು? ಈ ಮೂಲಕ ಒಂದು ಕಥಾವಸ್ತು ರಚಿಸಿ.

ಕಥೆಯ ಕಲ್ಪನೆಗಳನ್ನು ಬೆಳೆಸುವುದು ಹೇಗೆ? ಈ ಕುರಿತಾದ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಇಷ್ಟವಾದ ಕಥೆ

ನೀವು ಯಾವ ಕಥೆಯನ್ನು ಓದಲು/ನೋಡಲು ಬಯಸುತ್ತಿದ್ದೀರೋ ಆ ಕಥೆಯನ್ನು ನೀವೇ ಸೃಸ್ಟಿಸಿಕೊಳ್ಳಿ ಇದೊಂದು ವಿಶಿಷ್ಟ ವಿಭಿನ್ನ ಎನ್ನುವುದಕ್ಕಿಂತಲೂ ನಿಮಗೆ ಒಂದು ಸದಭಿರುಚಿ ಇರುತ್ತದೆ, ಇಂತಹದ್ದೇ ಕಥೆ ಇದ್ದರೆ ಎಷ್ಟು ಚೆನ್ನಾಗಿತ್ತು ಎನ್ನುವ ಬಯಕೆ ನಿಮ್ಮಲ್ಲಿ ಕಾಡಬಹುದು ಅಂತಹ ಕಥೆಯನ್ನು ಬರೆಯಲು ಆರಂಭಿಸಿ ಅದು ಪ್ರೇಮಾಂಕುರಕ್ಕೆ ಸಂಬಂಧಿಸಿದ್ದಾಗಿರಬಹುದು, ಸಾಹಸ, ಕ್ರೀಡೆ, ಮನೋವಿಜ್ಞಾನ, ವಿಜ್ಞಾನ, ಲೌಕಿಕ, ಅಲೌಕಿಕ, ರೋಮಾಂಚನಕಾರಿ ಹೀಗೆ ಯಾವುದೇ ಪ್ರಕಾರವಿರಲಿ ಮೊದಲು ಅದನ್ನು ನಿಮ್ಮ ಖಾಲಿ ಪುಟಗಳಲ್ಲಿ ದಾಖಲಿಸಿ ಅದರ ವಿಮರ್ಷೆ ಮುಂದಿನ ಹಂತ

ಮೊದಲಿಗೆ ಅಂತಹ ಕಥೆಯನ್ನೇಕೆ ಬರೆಯಬೇಕು ಎಂದುಕೊಂಡಿದ್ದೀರಿ? ಕಾರಣ ನೀವು ಸೃಸ್ಟಿಸಿರುವ ಜಗತ್ತು ನಿಮಗೆ ಹೊಸತೆನಿಸಿರಬಹುದು, ಅಲ್ಲಿನ ಪಾತ್ರವರ್ಗಗಳು ನಿಮ್ಮನ್ನು ಅತಿಯಾಗಿ ಕಾಡುತ್ತಿರಬಹುದು, ಅವೆಲ್ಲವೂ ಒಟ್ಟಾರೆಯಾಗಿ ನಿಮ್ಮನ್ನು ಕಥೆ ಬರೆಯುವಂತೆ ಪ್ರೇರೇಪಿಸುತ್ತವೆ, ಉತ್ಸಾಹ ಗೊಳಿಸುತ್ತವೆ, ಅಂತಹದ್ದೊಂದು ಕಥೆಯನ್ನು ನೀವೇ ಬರೆಯಬೇಕು ನಿಮ್ಮನ್ನು ಹೊರತುಪಡಿಸಿ ಇನ್ನಾರೂ ಆ ಕಥೆಯನ್ನು ಬರೆಯುವುದಿಲ್ಲ.

ಕಥೆಯನ್ನು ಮಾರ್ಪಾಡಿಸಿ

ಗ್ರಂಥಾಲಯದಲ್ಲಿ ಕುಳಿತು ಯಾವುದೋ ಒಂದು ಕಾದಂಬರಿಯನ್ನೋ ಸಣ್ಣ ಕಥೆಯನ್ನೋ ಅಥವಾ ಯಾವುದೋ ಸಿನಿಮಾದ ಸನ್ನಿವೇಶ ನಿಮ್ಮನ್ನು ಕಾಡಬಹುದಾದ ವಿಷಯವೊಂದಿರುತ್ತದೆ ಅಂತಹ ವಿಷಯವನ್ನು ಆಧರಿಸಿ ಕಥಾವಸ್ತುವನ್ನು ಸಿದ್ದಪಡಿಸಿಕೊಳ್ಳಿ ಉದಾ: ಮಣಿರತ್ನಂ ರವರ ತಮಿಳು ಚಿತ್ರ ‘ಮೌನರಾಗಂ’ ಮೂಲ ಕಥಾವಸ್ತುವನ್ನು ಆಧರಿಸಿದ ಕನ್ನಡದ ‘ಮಿಲನ’ ಚಿತ್ರವು ಸಾಕಷ್ಟು ಯಶಸ್ಸುಗಳಿಸಿತು. ಇದೇ ರೀತಿ ಕಥೆ ಈಗಿನ ಕಾಲಮಾನಕ್ಕೆ ತಕ್ಕಂತೆ ಏನೆಲ್ಲಾ ಮಾರ್ಪಾಡುಗಳನ್ನು ಮಾಡಬಹುದು ಏನೆಲ್ಲಾ ಬದಲಾವಣೆಗಳಿಂದ ಇನ್ನಷ್ಟು ಕೌತುಕತೆಯನ್ನು ಹುಟ್ಟಿಸಬಹುದು ಎಂದು ಯೋಚಿಸಿ ಬರೆದುಕೊಳ್ಳಿ ಆ ಕಥೆಯನ್ನು ಕಚ್ಚಾಪ್ರತಿಯಾಗಿ (Draft) ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವಮುನ್ನ ಹಕ್ಕುಚ್ಯುತಿ (Copyright) ಬಾರದಂತೆ ಪರಿಪೂರ್ಣವಾಗಿಸಿ.

ಸೃಜನಾತ್ಮಕ ಬರವಣಿಗೆ

ಸೃಜನಾತ್ಮಕ ಬರವಣಿಗೆ ನಿಮ್ಮ ಕಲ್ಪನೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಂಡು ಬರೆಯುವುದಾಗಿದೆ ಇದಕ್ಕೆ ನಿಯಮಾನುಸಾರ ಯಾವುದೂ ಇರುವುದಿಲ್ಲ ಬದಲಿಗೆ ನಿಮ್ಮ ಕಲ್ಪನಾತೀತ ಶಕ್ತಿಯಿಂದ ಉದ್ಭವಿಸಿದ ಕಥೆಯಾಗಿರುತ್ತದೆ ಅಷ್ಟೇ ಆದರೆ ನೀವು ವಿಷಯ ಕಲ್ಪನೆಗೆ ಅವಕಾಶ ಮಾಡಿಕೊಟ್ಟಲ್ಲಿ ಅದು ನಿರ್ಧಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕಥೆ ರಚಿಸುವ ಕುರಿತಾಗಿರುತ್ತದೆ ಉದಾ: ಪಟ್ಟಣ ಸೇರಿದ ಹಳ್ಳಿ ಯುವಕ ಬಿಲಿಯನೇರ್ ಕಂಪನಿಯ ಸಂಸ್ಥಾಪಕನಾಗುತ್ತಾನೆ. ಇಲ್ಲಿ ನಿಮಗೆ ವಿಷಯ ಆಧರಿಸಿದ ಕಲ್ಪನೆಗೆ ಅವಕಾಶವನ್ನು ನೀಡಲಾಗುತ್ತದೆ. ಈ ಮೂಲಕ ನಿಮ್ಮಲ್ಲಿರುವ ಸೃಜನಾತ್ಮಕ ಬರವಣಿಗೆಯಿಂದ ಕಥೆಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲು ಅವಕಾಶಗಳು ಸಿಗುತ್ತದೆ.

ಪದಬಂಧ

ನೀವು ದಿನಪತ್ರಿಕೆಗಳಲ್ಲಿ ಪದಬಂಧ ತುಂಬುವ ಹವ್ಯಾಸ ಉಳ್ಳವರಾಗಿದ್ದರೂ ಸರಿ ಆಗದೇ ಹೋದರೂ ಸರಿ ಪ್ರಯತ್ನಿಸಿ, ಯಾವುದೋ ಒಂದು ಪದ ಆ ಪದ ಸೃಷ್ಟಿಯಾಗಲೆಂದು ಕೊಡುವ ಸುಳಿವುಗಳು ನಿಮ್ಮಲ್ಲಿನ ಕಥಾ ಪ್ರಜ್ಞೆಯನ್ನು ಜಾಗ್ರತೆಗೊಳಿಸುವಂತೆ ಮಾಡಬಹುದು ಒಂದು ವಿಷಯ ವಸ್ತುವನ್ನು ಕೊಡಬಹುದು ಆ ಒಂದು ಪದ ನಿಮ್ಮ ಅದ್ಭುತ ಕಲ್ಪನೆಯನ್ನು ವಿಕಸಿಸಬಹುದು ಅದರ ಜಾಡು ಹಿಡಿದು ಕಥೆಯನ್ನಾಗಿಸುವ ಪ್ರಯತ್ನಮಾಡಿ.

ಸ್ಪೂರ್ತಿಯ ಸೆಲೆ

ನಿಮ್ಮ ಸುತ್ತಲಿನ ಜಗತ್ತು ಎಷ್ಟೋ ಕಥಾವಸ್ತುಗಳನ್ನು ಕಟ್ಟಿಕೊಟ್ಟು ಅವಕಾಶಗಳನ್ನು ನೀಡುತ್ತವೆ ಉದಾ: ನಮ್ಮ ನೆರೆ-ಹೊರೆ, ಬಂಧು-ಬಳಗ, ಸ್ನೇಹಿತರು ಹೀಗೆ ನಮ್ಮನ್ನು ಸುತ್ತುವರೆದ ಸಂಬಂಧಗಳು ಪರಿಚಿತರೊಂದಿಗೆ ಮುಕ್ತ ಮಾತುಕಥೆಯನ್ನು ಆರಂಭಿಸುವ ಮೂಲಕ ನಮಗೆ ಸಾಕಷ್ಟು ಆಲೋಚನೆಗಳು ಸಿಗುತ್ತವೆ. ಹೋಟೆಲ್ ಒಂದರ ಸಪ್ಲೇಯರ್ ನ ಪ್ರೇಮ ಪುರಾಣ, ದಿನ ಪತ್ರಿಕೆ ಹಾಕುವವನ ಅಗಾಧ ಜ್ಞಾನ, ಚಾಯ್ ವಾಲಾನ ಹಾಡುಗಾರಿಕೆ ಹೀಗೆ ಏನೆಲ್ಲಾ ನಿಮ್ಮ ದೃಷ್ಟಿಕೋನದಿಂದ ಸಾಧ್ಯವಾಗುತ್ತದೆಯೋ ಅವನ್ನೆಲ್ಲಾ ಸಂಗ್ರಹಿಸಿ ಕಥೆಕಟ್ಟಲು ಆರಂಭಿಸಿ.

ಬೇಸರದ ಸಂಗತಿ

ನೀವು ಏಕಾಂತತೆಯನ್ನು ಅನುಭವಿಸುತ್ತೀರಾ? ನಿಮಗೆ  ಯಾವುದೋ ಇಷ್ಟವಿಲ್ಲದ ಸಂಗತಿಯಿಂದ ಮನನೋಯಿಸಿಕೊಂಡಿದ್ದರೆ ಅದರ ಬಗ್ಗೆ ಕಾಳಜಿಯಿಂದ ಯೋಚಿಸಿನೋಡಿ ನಿಮ್ಮ ನಿರ್ಲಿಪ್ತ ಮನಸ್ಸನ್ನು ಘಾಸಿಯನ್ನುಂಟು ಮಾಡಿದ ವಿಷಯವಾದರೂ ಯಾವುದು? ಏಕೆ? ನೀವು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದೀರಿ? ಇದೆಲ್ಲವೂ ಒಮ್ಮೆ ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿ, ನಿಮ್ಮೊಳಗೊಬ್ಬ ಕಥಾನಾಯಕನಿದ್ದಾನೆ ಅವನಿಗೆ ಅದೇ ಸವಾಲುಗಳನ್ನು ಜಾಣ್ಮೆಯಿಂದ ಪರಿಹರಿಸಿ ಹೇಗೆ ಯಶಸ್ವಿಯಾಗುತ್ತಾನೆ ಹೀಗೆ ಹಲವು ಮಜಲುಗಳೊಂದಿಗೆ ಸಂಯೋಜಿಸಿ ಒಂದು ಕಥಾ ವಸ್ತುವನ್ನು ಸಿದ್ದಪಡಿಸಿ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

1 COMMENT

LEAVE A REPLY

Please enter your comment!
Please enter your name here

You cannot copy content of this page