HomeAestheticsHow Psychological Fear Was Created in 'Psycho'

How Psychological Fear Was Created in ‘Psycho’

- Advertisement -spot_img

ಸಿನಿಮಾ ಇತಿಹಾಸದಲ್ಲಿ ಕೆಲವೇ ಚಿತ್ರಗಳು ನಿರ್ದಿಷ್ಟ ಕಾಲ್ಪನಿಕ ಯುಗವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತವೆ. ಅವು ಮನರಂಜನೆಯ ಮಟ್ಟಕ್ಕೆ ಸೀಮಿತವಾಗದೆ, ಸಮಾಜದೊಳಗೆ ಅಡಗಿರುವ ಭಯ, ಮಾನಸಿಕ ಅಸ್ವಸ್ಥತೆ ಮತ್ತು ಮಾನವ ಸಂಬಂಧಗಳ ಕತ್ತಲೆ ಮುಖಕ್ಕೆ ಕನ್ನಡಿಯಾಗಿಸುತ್ತದೆ. 1960ರಲ್ಲಿ ಬಿಡುಗಡೆಯಾದ ‘Psycho’ ಅಂತಹ ಅಪರೂಪದ ಚಿತ್ರಗಳಲ್ಲಿ ಒಂದಾಗಿದೆ. ಆಲ್ಫ್ರೆಡ್ ಹಿಚ್ಕಾಕ್ ನಿರ್ದೇಶನದ ಈ ಚಿತ್ರ ತನ್ನ ಬಿಡುಗಡೆಯ ಸಮಯದಲ್ಲೇ ಪ್ರೇಕ್ಷಕರ ಮನಸ್ಸಿನಲ್ಲಿ ಅತೀವ ಕಂಪನ ಮೂಡಿಸಿತು. ಕಥೆಯ ನಿರೀಕ್ಷಿತ ಹರಿವನ್ನು ಮುರಿದು, ಮನೋವೈಚಾರಿಕ ಭಯವನ್ನು ಕೇಂದ್ರವನ್ನಾಗಿಸಿಕೊಂಡ ಈ ಸಿನಿಮಾ ಹಾರಾರ್ ಚಿತ್ರಗಳ ವ್ಯಾಖ್ಯಾನವನ್ನೇ ಹೊಸ ದಿಕ್ಕಿಗೆ ತಳ್ಳಿತು. ಈ ಲೇಖನದಲ್ಲಿ ‘Psycho’ ಚಿತ್ರದ ಸೌಂದರ್ಯ ವಿಮರ್ಶೆಯನ್ನು ಪ್ರಸ್ತುತ ಪಡಿಸಲಾಗಿದೆ.

ಕಥೆ ಮತ್ತು ರಚನೆ

‘Psycho’ ಚಿತ್ರದ ಕಥೆ ಮೊದಲಿಗೆ ತುಂಬಾ ಸರಳ ಮತ್ತು ಸಾಮಾನ್ಯವಾಗಿದೆ ಎಂತಲೂ ಕಾಣಿಸುತ್ತದೆ. ಕಥೆಯ ಕೇಂದ್ರದಲ್ಲಿ Marion Crane ಎಂಬ ಮಹಿಳೆ ತನ್ನ ವೈಯಕ್ತಿಕ ಜೀವನದಲ್ಲಿ ಸಿಲುಕಿರುವ ಸಮಸ್ಯೆಗಳು ಮತ್ತು ನಿರಾಶೆಯಿಂದಾಗಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಾಳೆ. ಆ ನಿರ್ಧಾರ ಹಣವನ್ನು ಕದ್ದುಕೊಂಡು ಹೊಸ ಜೀವನ ಆರಂಭಿಸಬೇಕೆಂಬ ಆಶಯದಲ್ಲಿ ಆಕೆ ಊರನ್ನು ಬಿಟ್ಟು ಹೊರಡುತ್ತಾಳೆ. ಈ ಹಂತದಲ್ಲಿ ಚಿತ್ರವು crime drama ಅಥವಾ escape story ಅನ್ನುವಂತೇ ಸಾಗುತ್ತದೆ. ಪ್ರೇಕ್ಷಕರು ಕೂಡ ಕಥೆ ಇದೇ ದಿಕ್ಕಿನಲ್ಲಿ ಮುಂದುವರಿಯುತ್ತದೆ ಎಂದು ನಿರೀಕ್ಷಿಸುತ್ತಾರೆ.

ಆದರೆ Marionನ ಈ ಪ್ರಯಾಣವೇ ಚಿತ್ರವನ್ನು ಸಂಪೂರ್ಣವಾಗಿ ಬೇರೆ ದಿಕ್ಕಿಗೆ ತಳ್ಳುತ್ತದೆ. ದಾರಿಮಧ್ಯೆ ಆಕೆ ತಂಗುವ ಒಂದು ಹೋಟೆಲ್ ಕಥೆಯ turning point ಆಗುತ್ತದೆ. ಇಲ್ಲಿಂದ ಸಿನಿಮಾ ನಿಧಾನವಾಗಿ psychological territoryಗೆ ಪ್ರವೇಶಿಸುತ್ತದೆ. ಮೊದಲ ಭಾಗದಲ್ಲಿ suspense ಅನ್ನು build ಮಾಡುವ ರೀತಿಯೇ ವಿಭಿನ್ನವಾಗಿದೆ – police suspicion, road journey, inner fear, guilt – ಇವೆಲ್ಲವು ಪ್ರೇಕ್ಷಕರನ್ನು ಸ್ತುಪ್ತ ಪ್ರಜ್ಞೆಯಲ್ಲಿ ತಲ್ಲೀನತೆ ಹೆಚ್ಚಿಸುತ್ತದೆ.

ಚಿತ್ರದ ರಚನೆಯ ವಿಶೇಷತೆ ಏನೆಂದರೆ, ಮೊದಲಾರ್ಧದಲ್ಲಿ ಪ್ರೇಕ್ಷಕರನ್ನು ಒಂದು ನಾಯಕಿ ಪಾತ್ರದೊಂದಿಗೆ emotionally connect ಮಾಡಿಸಿ, ಆ ಸಂಪರ್ಕವನ್ನೇ ಕಥಾನಕವಾಗಿ ಮುರಿದುಬಿಡುತ್ತದೆ. ಈ narrative shock ಆ ಕಾಲದ ಸಿನೆಮಾ ಪ್ರಪಂಚಕ್ಕೆ ಬಹಳ ಹೊಸದು. ಸಾಮಾನ್ಯವಾಗಿ protagonist ಸುತ್ತಲೇ ಕಥೆ ಸಾಗಬೇಕು ಎಂಬ ರೂಢಿಯನ್ನು ಹಿಚ್ಕಾಕ್ ಇಲ್ಲೇ ಮುರಿದು ಬಿಡುತ್ತಾರೆ.

ಚಿತ್ರದ ಎರಡನೇ ಭಾಗದಲ್ಲಿ ಕಥೆಯ focus ಸಂಪೂರ್ಣವಾಗಿ Norman Bates ಮತ್ತು ಅವನ ವಿಚಿತ್ರ ಮನಸ್ಥಿತಿಯ ಮೇಲೆ ಕೇಂದ್ರೀಕೃತವಾಗುತ್ತದೆ. ಇಲ್ಲಿ suspense physical dangerಗಿಂತ psychological fear ಆಗಿ ಬದಲಾಗುತ್ತದೆ. “ಏನಾಗಬಹುದು?” ಅನ್ನುವ ಪ್ರಶ್ನೆಯ ಬದಲು “ಈ ವ್ಯಕ್ತಿ ಯಾರು?” “ಅವನ ಮನಸ್ಸಿನೊಳಗೆ ಏನು ನಡೆಯುತ್ತಿದೆ?” ಅನ್ನುವ curiosity ಪ್ರೇಕ್ಷಕರನ್ನು ಹಿಡಿದುಕೊಳ್ಳುತ್ತದೆ.

ಒಟ್ಟಿನಲ್ಲಿ ‘Psycho’ ಕಥಾ ರಚನೆ ಎರಡು ವಿಭಿನ್ನ phases ಹೊಂದಿದೆ. ಮೊದಲ ಭಾಗದಲ್ಲಿ crime ಮತ್ತು escape drama, ಎರಡನೇ ಭಾಗದಲ್ಲಿ psychological horror ಮತ್ತು character study. ಈ ಎರಡು ಭಾಗಗಳು tone ಮತ್ತು rhythm ನಲ್ಲಿ ಭಿನ್ನವಾಗಿದ್ದರೂ, ಒಟ್ಟಿಗೆ ಸೇರಿ ಒಂದು unsettling cinematic experience ಅನ್ನು ಸೃಷ್ಟಿಸುತ್ತವೆ.

ಮೂಲ ಮತ್ತು ಪ್ರೇರಣೆ

‘Psycho’ ಚಿತ್ರದ ಕಥೆಗೆ ಮೂಲ ಪ್ರೇರಣೆಯಾದದ್ದು ಲೇಖಕ Robert Bloch ಬರೆದ ಅದೇ ಹೆಸರಿನ ಕಾದಂಬರಿ. ಈ ಕಾದಂಬರಿ ಸಂಪೂರ್ಣವಾಗಿ cinematic styleನಲ್ಲಿ ಬರೆಯಲ್ಪಟ್ಟದ್ದಾಗಿರಲಿಲ್ಲ; ಆದರೆ ಅದರೊಳಗಿದ್ದ psychological tension ಮತ್ತು disturbed mind concept ಹಿಚ್ಕಾಕ್‌ನ್ನು ಆಕರ್ಷಿಸಿತು. ಕಾದಂಬರಿಯನ್ನು ಸಿನಿಮಾಗೆ ರೂಪಾಂತರಿಸುವಾಗ ಹಿಚ್ಕಾಕ್ ಅವರು ಕಥೆಯ core ideaವನ್ನು ಮಾತ್ರವೇ ತೆಗೆದುಕೊಂಡರು. ಇದು ಮಾನವ ಮನಸ್ಸಿನೊಳಗಿನ ಅಸಹಜ ಭಯ ಮತ್ತು split personality-ಇವನ್ನೇ ಮುಖ್ಯವಾಗಿ ಪರಿಗಣಿಸಿದರು.

Robert Blochನ ಕಥೆಯಲ್ಲಿ Norman Bates ಪಾತ್ರ ಸ್ವಲ್ಪ ಬೇರೆ ರೀತಿಯಲ್ಲಿ ಚಿತ್ರಿತವಾಗಿದ್ದರೂ, ಸಿನಿಮಾದಲ್ಲಿ ಆ ಪಾತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಮತ್ತು realistic ಆಗಿ ರೂಪಿಸಲಾಗಿದೆ. ಕಾದಂಬರಿಯಲ್ಲಿ ಇರುವ violence ಮತ್ತು horror elements ಗಳನ್ನು ಹಿಚ್ಕಾಕ್ ರವರು psychological impact ಆಗಿ ಬದಲಾಯಿಸಿದರು.

ಈ ಕಾದಂಬರಿಯ ಹಿಂದೆ ಮತ್ತೊಂದು ಗಂಭೀರ ಹಿನ್ನೆಲೆಯೂ ಇದೆ. Robert Blochಗೆ ಪ್ರೇರಣೆ ನೀಡಿದ ನೈಜ ಘಟನೆಗಳಲ್ಲಿ ಪ್ರಮುಖವಾದುದು Ed Gein ಎಂಬ ಅಮೆರಿಕದ ಅಪರಾಧಿಯ ಪ್ರಕರಣ. Ed Gein outwardly ತುಂಬಾ ಶಾಂತ ಸ್ವಭಾವದ ಮತ್ತು harmless ವ್ಯಕ್ತಿಯಂತೆ ಕಾಣುತ್ತಿದ್ದ. ಆದರೆ ಅವನ ಜೀವನದ ಒಳಗಿರುವ ನಿಜಾಂಶ ತುಂಬಾ ಅಸ್ತವ್ಯಸ್ತತೆ ಕೂಡಿತ್ತು. ಅವನ ತಾಯಿ ಮೇಲಿನ ಅತಿಯಾದ emotional dependence, social isolation ಮತ್ತು warped psychology-ಇವೆಲ್ಲವೂ ನಂತರ ಭೀಕರ ಅಪರಾಧಗಳಾಗಿ ಹೊರಬಂದವು.

Ed Gein ಪ್ರಕರಣವು 1950ರ ದಶಕದ ಅಮೆರಿಕನ್ ಸಮಾಜವನ್ನು ಬೆಚ್ಚಿಬೀಳಿಸಿತ್ತು. “ಸಾಮಾನ್ಯವಾಗಿ ಕಾಣಿಸುವ ವ್ಯಕ್ತಿಯೊಳಗೆ ಇಷ್ಟೊಂದು ಭೀಕರತೆ ಅಡಗಿರಬಹುದೇ?” ಎಂಬ ಪ್ರಶ್ನೆ ಆ ಕಾಲದಲ್ಲಿ ಜನ ಸಾಮಾನ್ಯರ ಮನಸ್ಸನ್ನು ಕಾಡಿತ್ತು. ಇದೇ fear ಮತ್ತು uncertainty ‘Psycho’ ಚಿತ್ರದ ಬೆನ್ನೆಲುಬು ಆಗಿದೆ.

ಪಾತ್ರಚಿತ್ರಣ ಮತ್ತು ಅಭಿನಯ

Psycho’ ಚಿತ್ರದ ಆತ್ಮವೇ Norman Bates ಪಾತ್ರ. ಈ ಪಾತ್ರದ ವಿಶೇಷತೆ ಏನೆಂದರೆ ಅವನು first lookನಲ್ಲಿ ಅಪಾಯಕಾರಿ ವ್ಯಕ್ತಿ ಅನ್ನಿಸುವುದೇ ಇಲ್ಲ. ಅವನು ಮೃದುವಾಗಿ ಮಾತನಾಡುವ, ನಾಚಿಕೆ ಸ್ವಭಾವದ, ಸ್ವಲ್ಪ ವಿಚಿತ್ರವಾದ ವ್ಯಕ್ತಿಯಂತೆ ಕಾಣುತ್ತಾನೆ. ಅವನ ಮಾತಿನಲ್ಲಿ ಒಂದು innocence ಇದೆ, body languageನಲ್ಲಿ hesitation ಇದೆ. ಆದರೆ ಇದೇ apparent normalcy ಚಿತ್ರದ ದೊಡ್ಡ strength. ನಾರ್ಮನ್ ಬೇಟ್ಸ್ ಒಳಗಡೆ ನಡೆಯುತ್ತಿರುವ ಮಾನಸಿಕ ಸಂಘರ್ಷ ಮತ್ತು ನಿಗ್ರಹಿಸಿದ ಭಾವನೆಗಳು ಹಂತಹಂತವಾಗಿ ಹೊರಬರುತ್ತಾ ಹೋಗುತ್ತವೆ. ಈ ಆಂತರಿಕ ಸಂಕೀರ್ಣತೆ ‘Psycho’ವನ್ನು ಹಿಂದಿನ conventional horror filmsಗಳಿಂದ ಸಂಪೂರ್ಣವಾಗಿ ಬೇರ್ಪಡಿಸುತ್ತದೆ.

ಈ ಪಾತ್ರಕ್ಕೆ ಜೀವ ತುಂಬಿದವರು Anthony Perkins. Perkins ಅವರ ಅಭಿನಯವು subtle gestures, nervous smiles, eye movement, pause-filled dialogues ಮೂಲಕ ನಾರ್ಮನ್‍ನ disturbed mind ಅನ್ನು portray ಮಾಡುತ್ತಾರೆ. ಕೆಲ ಸೀನ್ಸ್‌ಗಳಲ್ಲಿ Norman sympathetic ಆಗಿ ಕಾಣಿಸುತ್ತಾನೆ; ಪ್ರೇಕ್ಷಕನಿಗೆ ಅವನ ಮೇಲೆ ದಯೆ ಕೂಡ ಬರುತ್ತದೆ. ಆದರೆ ಅದೇ ಸಮಯದಲ್ಲಿ ಅವನ ಬಗ್ಗೆ unexplained discomfort ಕೂಡ ಉಂಟಾಗುತ್ತದೆ. ಈ contradiction create ಮಾಡುವಲ್ಲಿ Perkins ಅವರ acting masterclass ಅನ್ನಬಹುದು.

Norman Bates ಪಾತ್ರದ ಮತ್ತೊಂದು ಪ್ರಮುಖ layer ಎಂದರೆ “mother fixation”. ಈ emotional dependency ಅನ್ನು Perkins ತುಂಬಾ ನಿಯಂತ್ರಿತ ವಿಧಾನದಲ್ಲಿ ತೋರಿಸುತ್ತಾರೆ. ತಾಯಿ ಬಗ್ಗೆ ಮಾತನಾಡುವಾಗ ಅವನ tone change ಆಗುತ್ತದೆ, facial expression tense ಆಗುತ್ತದೆ. ಇಲ್ಲಿ psychological imbalance subtle ಆಗಿ seep ಆಗುತ್ತದೆ. ಇದೇ performanceನ ದೊಡ್ಡ achievement.

ಚಿತ್ರದ ಮೊದಲ ಭಾಗವನ್ನು emotionally ಹಿಡಿದಿಡುವ ಪಾತ್ರ Marion Crane. ಈ ಪಾತ್ರವನ್ನು ನಟಿಸಿದವರು Janet Leigh. Janet Leigh ಅವರ ಪಾತ್ರ ತುಲನಾತ್ಮಕವಾಗಿ ಭಾರಿ ಪರಿಣಾಮ ಬೀರುತ್ತದೆ. Marion Crane ಒಂದು ದೋಷಪೂರಿತವಾದರೂ ಅದಕ್ಕೆ ಸರಿಹೊಂದುವ ಪಾತ್ರ, ಆಕೆ ಸಾಮಾನ್ಯ ಮನುಷ್ಯಳಾಗಿ ಕಾಣಿಸುತ್ತಾಳೆ. ಆಕೆಯ Guilt, ಭಯ, ಭರವಸೆ-ಎಲ್ಲ ಭಾವನೆಗಳು Janet Leigh ಅವರ ಅಭಿನಯದಲ್ಲಿ ಸ್ವಾಭಾವಿಕವಾಗಿ ಹರಿಯುತ್ತವೆ.

Psycho poster features Hitchcock and janet leigh
Psycho | Janet leigh ಯವರಿಗೆ ಸನ್ನಿವೇಶವೊಂದಕ್ಕೆ ಹಿಚ್ಕಾಕ್ ರವರು ನಿರ್ದೇಶನ ನೀಡುತ್ತಿರುವುದು

Janet Leigh ಅವರ screen presence ಪ್ರೇಕ್ಷಕರಲ್ಲಿ strong emotional investment create ಮಾಡುತ್ತದೆ. ಮೊದಲ ಅರ್ಧಗಂಟೆಯಲ್ಲಿ ಪ್ರೇಕ್ಷಕರು ಆಕೆಯ journeyಗೆ ಹೊಂದಿಕೊಳ್ಳುತ್ತಾರೆ. ಹೀಗಾಗಿ ಕಥೆಯಲ್ಲಿ ಆಗುವ sudden turn audienceಗೆ ಆಘಾತವನ್ನುಂಟು ಮಾಡುತ್ತದೆ. ಇದು screenplay twist ಆಗಿದ್ದರೂ, ಪೂರ್ಣ ಪರಿಣಾಮ ಬೀರುವುದು Janet Leigh ಅವರ ನಂಬಲರ್ಹ ಅಭಿನಯ ಕಾರಣದಿಂದ. ಆಕೆಯ ಅಭಿನಯ ಪ್ರೇಕ್ಷಕರ ನಿರೀಕ್ಷೆಗಳನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುವಂತೆ  ಮಾಡುತ್ತದೆ-ಇದುವೇ ‘Psycho’ storytelling brilliance.

ಇತರ ಪೋಷಕ ಪಾತ್ರಗಳು-ಪೊಲೀಸ್ ಅಧಿಕಾರಿ ಮರಿಯನ್ನ ಸಹೋದರಿ, ತನಿಖಾಧಿಕಾರಿ-ಇವರು ಕಥೆಯನ್ನು ಮುಂದಕ್ಕೆ ತಳ್ಳುವ ನಿರೂಪಣಾ ಸಾಧನಗಳಾಗಿ ಕೆಲಸ ಮಾಡುತ್ತಾರೆ. ಅವರು ಬಹಿರಂಗವಾಗಿ ನಾಟಕೀಯವಾಗಿ ಪ್ರಾಬಲ್ಯ ಸಾಧಿಸುತ್ತಾರೆ; Norman Batesನ character studyಗೆ ಸಮಯ ಕೊಡುತ್ತಾರೆ. ಇದು ಉದ್ದೇಶಪೂರ್ವಕ ವಿನ್ಯಾಸ ಎಂದು ಹೇಳಬಹುದು.

ನಿರ್ದೇಶಕ Alfred Hitchcock ಅವರ ಸಿನಿ ಜೀವನ, ಚಲನಚಿತ್ರ ನಿರ್ಮಾಣ ಶೈಲಿ ಕುರಿತಾದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಗೀತ ಮತ್ತು ಧ್ವನಿ

Psycho ಚಿತ್ರದಲ್ಲಿ ಸಂಗೀತ ಕೇವಲ background element ಆಗಿ ಮಾತ್ರವಲ್ಲದೇ ಕಥೆಯೊಂದಿಗೆ ನಡೆಯುವ ಮತ್ತೊಂದು ಪಾತ್ರದಂತೆ ಕೆಲಸ ಮಾಡುತ್ತದೆ. ಈ ಚಿತ್ರದ ಭಯ, ಆತಂಕ ಮತ್ತು ಮಾನಸಿಕ ಒತ್ತಡವನ್ನು ಪ್ರೇಕ್ಷಕರ ಮನಸ್ಸಿನೊಳಗೆ ನೇರವಾಗಿ ನುಗ್ಗಿಸುವ ಪ್ರಮುಖ ಶಕ್ತಿಯಂತೆ ಕಾರ್ಯ ನಿರ್ವಹಿಸುತ್ತದೆ. ಈ ಸ್ಕೋರ್ ಅನ್ನು ರಚಿಸಿದವರು Bernard Herrmann ಮತ್ತು ಅವರ ಸಂಗೀತ ವಿನ್ಯಾಸ ಈ ಚಿತ್ರವನ್ನು cinematic historyಯಲ್ಲಿ ವಿಭಿನ್ನ ಸ್ಥಾನಕ್ಕೆ ತೆಗೆದುಕೊಂಡು ಹೋಗಿದೆ.

Herrmann ಇಲ್ಲಿ grand orchestral music ಅಥವಾ emotional melodyಗಳನ್ನು ಬಳಸುವ ಬದಲಾಗಿ, string instruments ಆಧಾರಿತ ಕಠಿಣ ಮತ್ತು ತೀಕ್ಷ್ಣ ಧ್ವನಿಗಳನ್ನು ಬಳಸುತ್ತಾರೆ. ಈ ಸಂಗೀತದಲ್ಲಿ ನಿರಂತರವಾಗಿ ಒತ್ತಡವನ್ನು ಸೃಷ್ಟಿಸುವಂತೆ, ಕೆಲವು ಸೀನ್‌ಗಳಲ್ಲಿ ಸಂಗೀತ ತುಂಬಾ ಸೂಕ್ಷ್ಮವಾಗಿ ಮತ್ತು silenceನಲ್ಲಿಯೂ ಕೂಡ ಭಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ silence ಮತ್ತು sudden sound bursts ಪ್ರೇಕ್ಷಕರ nervous systemಗೆ ನೇರವಾಗಿ ಪರಿಣಾಮ ಬೀರುತ್ತವೆ.

ಚಿತ್ರದ ಪ್ರಸಿದ್ಧ ಸನ್ನಿವೇಶ shower sceneನಲ್ಲಿ ಬಳಸಿದ high-pitched violin soundsಗಳು panic, shock ಮತ್ತು uncontrollable fear ಅನ್ನು ಧ್ವನಿ ರೂಪದಲ್ಲಿ ಹೊರಹಾಕುತ್ತವೆ. ಇಲ್ಲಿ ಸಂಗೀತವು ದೃಶ್ಯ ಕ್ರಿಯೆಗಿಂತ ಹೆಚ್ಚು ಶಕ್ತಿಶಾಲಿಯಾಗಿ ಕೆಲಸ ಮಾಡುತ್ತದೆ. ಕಣ್ಣು ನೋಡಿದರೂ, ಕಿವಿಗೆ ಬರುವ ಆ ಶಬ್ದವು ಮನಸ್ಸಿನಲ್ಲಿ ಭೀತಿಯ ಚಿತ್ರವನ್ನು ಕಟ್ಟುತ್ತದೆ. ಇದೇ ಕಾರಣಕ್ಕೆ ಈ ಸಿನಿಮಾ ಇತಿಹಾಸದಲ್ಲಿ ಮರೆಯಲಾಗದ ದೃಶ್ಯವಾಗಿದೆ.

ಇನ್ನೊಂದು ಮುಖ್ಯ ಅಂಶ ಎಂದರೆ sound design. Footsteps, door sounds, rain, silence-ಇವೆಲ್ಲವೂ ಉತ್ಪ್ರೇಕ್ಷಿತವಾಗಿ ಬಳಕೆಯಾಗಿವೆ. ಸಾಮಾನ್ಯವಾಗಿ ಗಮನಿಸದ ಧ್ವನಿಗಳು ಇಲ್ಲಿ threat signals ಆಗಿ ಬದಲಾಗುತ್ತವೆ. ಈ sound layering ಪ್ರೇಕ್ಷಕರ ಗಮನವನ್ನು ನಿರಂತರವಾಗಿ ಎಚ್ಚರವಾಗಿ ಇಡುತ್ತದೆ.

ತಂತ್ರಜ್ಞಾನ ಮತ್ತು ದೃಶ್ಯ ಸಂಯೋಜನೆ

‘Psycho’ ಚಿತ್ರದಲ್ಲಿ ಬಳಸಿರುವ black-and-white visuals ಕಥೆಯ ಮನೋವೈಚಾರಿಕ ತೀವ್ರತೆಯನ್ನು ಹೆಚ್ಚಿಸಲು ತೆಗೆದುಕೊಂಡ ಒಳ್ಳೆಯ ನಿರ್ಧಾರ. ದೃಶ್ಯ ರೇಖೆಗಳು (lines), ಬೆಳಕು–ನೆರಳು (light & shadow) ಮತ್ತು ಫ್ರೇಮಿಂಗ್ ಇನ್ನಷ್ಟು sharp ಆಗಿ ಕಾಣುತ್ತವೆ. ಪ್ರತಿ ಶಾಟ್‌ನಲ್ಲಿ contrast ಸ್ಪಷ್ಟವಾಗಿದ್ದು, ಪಾತ್ರಗಳ ಮನಸ್ಸಿನೊಳಗಿನ ಗೊಂದಲವನ್ನು ದೃಶ್ಯ ರೂಪದಲ್ಲಿ ಹೇಳುತ್ತದೆ.

ಹಿಚ್ಕಾಕ್ ಕ್ಯಾಮೆರಾವನ್ನು ಪ್ರೇಕ್ಷಕರ ಕಣ್ಣಿನಂತೆ ಬಳಸುತ್ತಾರೆ. ಕೆಲವು ದೃಶ್ಯಗಳಲ್ಲಿ ನಾವು ಪಾತ್ರಗಳನ್ನು ದೂರದಿಂದ ನೋಡುವವರಂತೆ ಅನುಭವಿಸುತ್ತೇವೆ; ಇನ್ನೂ ಕೆಲ ಕಡೆಗಳಲ್ಲಿ ನಾವು ಅವರ very personal space ಒಳಗೆ ನುಗ್ಗಿದಂತೆ feel ಆಗುತ್ತದೆ. ಈ shift in camera perspective ಪ್ರೇಕ್ಷಕರ ಮನಸ್ಸಿನಲ್ಲಿ insecurity ಮತ್ತು discomfort ಹುಟ್ಟಿಸುತ್ತದೆ.

ಪ್ರಸಿದ್ಧ ಹೋಟೆಲ್ scenesಗಳಲ್ಲಿ camera movement ತುಂಬಾ ನಿಯಂತ್ರಿತವಾಗಿದೆ. Wide shots ಮೂಲಕ loneliness ತೋರಿಸಲಾಗುತ್ತದೆ; close-up shots ಮೂಲಕ fear ಮತ್ತು tension ಹೆಚ್ಚಿಸಲಾಗುತ್ತದೆ. Editing ಕೂಡ precisely timed cutsಗಳನ್ನು ಬಳಸಲಾಗಿದೆ. ಒಂದು ದೃಶ್ಯದಿಂದ ಮತ್ತೊಂದಕ್ಕೆ ಹೋಗುವಾಗ ಪ್ರೇಕ್ಷಕರ ಮನಸ್ಸಿಗೆ “ಏನೋ ತಪ್ಪಾಗುತ್ತಿದೆ” ಅನ್ನುವ ಭಾವನೆ ಬರುತ್ತದೆ. Shower sceneನಲ್ಲಿ ಬಳಸಿದ rapid cuts violenceನ ವಿವರ ತೋರಿಸದೆ, ಕಲ್ಪನೆಯ ಮೂಲಕ ಭಯವನ್ನು ಸೃಷ್ಟಿಸುತ್ತದೆ. ಇದು visual horrorಗಿಂತ psychological horror ಹೆಚ್ಚು effective ಅನ್ನೋದಕ್ಕೆ ಉತ್ತಮ ಉದಾಹರಣೆ.

‘ಮದರ್’ ಥೀಮ್

‘Psycho’ ಚಿತ್ರದ deepest layer ಎಂದರೆ ‘mother’ theme. ಇಲ್ಲಿ ತಾಯಿ ಒಂದು ಜೀವಂತ ಪಾತ್ರವಾಗಿ, ಒಂದು psychological presence ಆಗಿ ಕಾಣಿಸುತ್ತಾಳೆ. Norman Batesನ ಜೀವನ ಮತ್ತು ಅವನ ನಿರ್ಧಾರಗಳ ಮೇಲೆ ತಾಯಿ ಎಂಬ ಕಲ್ಪನೆ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಅವನ ಮಾತುಗಳಲ್ಲಿ, ಅವನ ಭಯದಲ್ಲಿ, ಅವನ guiltನಲ್ಲಿ-ಎಲ್ಲೆಲ್ಲೂ ತಾಯಿ ಇದ್ದಾಳೆ.

ಹಿಚ್ಕಾಕ್ ಇಲ್ಲಿ ತಾಯಿಯ ರೂಪವನ್ನು ಒಂದು ಸಂಕೇತವಾಗಿ ಬಳಸುತ್ತಾರೆ. ಈ ತಾಯಿ–ಮಗನ ಸಂಬಂಧ ಭಾವನಾತ್ಮಕ ಸೆರೆವಾಸವನ್ನು ರೂಪಿಸುತ್ತದೆ. ಅದರ ಪರಿಣಾಮವಾಗಿ Norman ತನ್ನ ತಾಯಿಯಿಂದ ಹೊರಬರಲು ಅಸಾಧ್ಯವಾದ ಸ್ಥಿತಿಯಲ್ಲಿ ಸಿಲುಕುತ್ತಾನೆ. ಅವನ ಗುರುತು, ನೈತಿಕತೆ ಮತ್ತು ಆಸೆಗಳು ಎಲ್ಲವೂ ಆ ಸಂಬಂಧದ ಪ್ರಭಾವದಲ್ಲೇ ರೂಪುಗೊಳ್ಳುತ್ತವೆ.

ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ಪರಿಣಾಮ

‘Psycho’ ಚಿತ್ರವು ಬಿಡುಗಡೆಯಾದಾಗ ಪ್ರೇಕ್ಷಕರ ಪ್ರತಿಕ್ರಿಯೆ ಒಂದೇ ತರಹ ಇರಲಿಲ್ಲ. ಕೆಲವರಿಗೆ ಇದು shocking ಮತ್ತು disturbing experience ಆಗಿತ್ತು. ಇನ್ನು ಕೆಲವರಿಗೆ ಇದು cinema languageನಲ್ಲೇ ಹೊಸ ಪ್ರಯೋಗವಾಗಿ ಕಾಣಿಸಿತು. ಆ ಕಾಲದಲ್ಲಿ audience theatreಗೆ late entry ಕೊಡಬಾರದು ಎಂದು ಹಿಚ್ಕಾಕ್ ಒತ್ತಾಯ ಮಾಡಿದ್ದು ಕೂಡ ಕುತೂಹಲ ಮತ್ತು ಉದ್ವೇಗ ಸೃಷ್ಟಿ ಮಾಡಿತು.

ಕೆಲ ಸಂಸ್ಕೃತಿಗಳಲ್ಲಿ ಚಿತ್ರದ violence ಮತ್ತು psychological content ಬಗ್ಗೆ ವಿರೋಧವೂ ವ್ಯಕ್ತವಾಯಿತು. ಆದರೆ ಸಮಯ ಕಳೆದಂತೆ ‘Psycho’ಯ ಮೌಲ್ಯ ಸ್ಪಷ್ಟವಾಯಿತು. ಇದು horror genreಗೆ ಹೊಸ ದಿಕ್ಕು ಕೊಟ್ಟಿತು.

Suspense build ಮಾಡುವ ವಿಧಾನ, narrative twist, ಧ್ವನಿ ಮತ್ತು ಮೌನದ ಬಳಕೆ-ಇವೆಲ್ಲವೂ ಮುಂದಿನ ಅನೇಕ ಚಿತ್ರಗಳಿಗೆ ಮಾದರಿಯಾದವು. ಸ್ಲ್ಯಾಷರ್ ಚಿತ್ರಗಳು, ಮನೋವೈಜ್ಞಾನಿಕ ಥ್ರಿಲ್ಲರ್‌ಗಳು ಮತ್ತು ಸರಣಿ ಅಪರಾಧ ಕಥೆಗಳು ಎಲ್ಲವೂ ‘Psycho’ ಚಿತ್ರದ ಪ್ರಭಾವವನ್ನು ಹೊಂದಿದವು.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here

You cannot copy content of this page