HomeAestheticsWhy Pulp Fiction Has No Straight Story – Yet Feels Powerful

Why Pulp Fiction Has No Straight Story – Yet Feels Powerful

- Advertisement -spot_img

Quentin Tarantino ಅವರ Pulp Fiction ಒಂದು ಸಾಮಾನ್ಯ ಕ್ರೈಮ್ ಸಿನಿಮಾ ಆಗಿ ಮಾತ್ರವೇ ಉಳಿಯುವುದಿಲ್ಲ ಸಿನಿಮಾ ಭಾಷೆಯ ನಿಯಮಗಳನ್ನು ಮುರಿದ ಪ್ರಾಯೋಗಿಕ ಯಶಸ್ವೀ ಚಿತ್ರವಾಗಿದೆ. ಕಥನ, ಸಂಭಾಷಣೆಯ ಮೂಲಕ ಅರ್ಥ ಮತ್ತು ಒತ್ತಡವನ್ನು ಸೃಷ್ಟಿಸಿ ವಿಶಿಷ್ಟವಾದ ಶೈಲಿಯಿಂದ ಸಿನಿಮಾ ಪ್ರಪಂಚಕ್ಕೆ ಹೊಸ ಅರ್ಥ ಹುಡುಕಿದ ಕೃತಿ.
ಈ ಲೇಖನದಲ್ಲಿ Pulp Fiction ಚಿತ್ರದ aesthetics ದೃಶ್ಯ, ಸಂಗೀತ, ಅಭಿನಯ, ಕಥನ ಮತ್ತು ಅಂತರಾರ್ಥವನ್ನು ಸಂಕ್ಷಿಪ್ತವಾಗಿ ಮತ್ತು ಆಳವಾಗಿ ವಿಶ್ಲೇಷಿಸುತ್ತದೆ.

Pulp Fiction ಅರ್ಥವೇನು?

Pulp Fiction ಎಂಬ ಶೀರ್ಷಿಕೆ ಮೇಲ್ನೋಟಕ್ಕೆ ಸರಳವಾಗಿ ಕಾಣಿಸಿದರೂ, ಅದರೊಳಗೆ ಚಿತ್ರದ ಸಂಪೂರ್ಣ ಸೌಂದರ್ಯಶಾಸ್ತ್ರ ಅಡಗಿದೆ. ಇಲ್ಲಿ “Pulp” ಎನ್ನುವ ಪದವನ್ನು ಟಾರಂಟಿನೋ ಎರಡು ವಿಭಿನ್ನ , ಪರಸ್ಪರ ಸಂಬಂಧಿತ ಅರ್ಥಗಳಲ್ಲಿ ಬಳಸುತ್ತಾನೆ.

ಮೊದಲ ಅರ್ಥವು 20ನೇ ಶತಮಾನದ ಆರಂಭದಿಂದ ಮಧ್ಯಭಾಗದವರೆಗೆ ಅಮೆರಿಕದಲ್ಲಿ ಕಡಿಮೆ ಬೆಲೆಯ pulp magazines ಅಪಾರ ಜನಪ್ರಿಯವಾಗಿದ್ದವು. ಈ ಮ್ಯಾಗಜಿನ್‌ಗಳಲ್ಲಿ ಕ್ರೈಮ್ ಗೆ ಸಂಬಂಧಿಸಿದಂತಹ ಪತ್ತೇದಾರಿ ಕಥೆಗಳು, ನೈತಿಕ ಅಸ್ಪಷ್ಟ ಪಾತ್ರಗಳು, ಅತೀವ ಸಂಭಾಷಣೆ ಮತ್ತು ಅತಿರೇಕದ ಸಂದರ್ಭಗಳು ಸಾಮಾನ್ಯವಾಗಿದ್ದವು. ಅವು “ಉನ್ನತ ಸಾಹಿತ್ಯ” ವೆಂದು ಪರಿಗಣಿಸಲ್ಪಡದಿದ್ದರೂ, ಜನಸಾಮಾನ್ಯರ ಕಲ್ಪನೆ ಮತ್ತು ಆಸಕ್ತಿಯನ್ನು ಹಿಡಿದಿಟ್ಟುಕೊಂಡಿದ್ದವು. Pulp Fiction ತನ್ನ ಕಥಾ ಜಗತ್ತನ್ನು ಇದೇ ರೀತಿಯಾಗಿ ವಿಸ್ತರಿಸಿಕೊಳ್ಳುತ್ತದೆ ಉದಾ: Gangsters, crime, extreme decisions and the unexpected events.

ಎರಡನೇ ಅರ್ಥದಲ್ಲಿ, fiction ಅನ್ನು pulp ಮಾಡುವುದು ಎಂದರೆ, ಒಂದು ಕಥೆಯನ್ನು ಸರಳವಾಗಿ ಹೇಳುವ ಬದಲಾಗಿ, ವಿಭಿನ್ನ ಕಥಾ ವಸ್ತುಗಳನ್ನು ಬೇರೆ ಬೇರೆ ಪಾತ್ರಗಳ ಜೀವನ ಆಧರಿಸುತ್ತ ವಿಭಿನ್ನ ಶೈಲಿಗಳು (crime, black comedy, thriller, moral drama), ಮತ್ತು ವಿವಿಧ ಕಾಲಘಟ್ಟದ ಸಂಸ್ಕೃತಿ ಸಂಕೇತಗಳ ಮಿಶ್ರಣವನ್ನು ಒಂದು ಚಲನಚಿತ್ರದ ರೂಪಕ್ಕೆ ತರಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಥೆ ಸಾಂಪ್ರದಾಯಿಕ ಕ್ರಮವನ್ನು ಕಳೆದುಕೊಳ್ಳುತ್ತದೆ, ಆದರೆ ಅದರ ಅರ್ಥ ಮತ್ತು ಪ್ರಭಾವ ಹೆಚ್ಚಾಗುತ್ತದೆ. ಇದು ಉದ್ದೇಶಪೂರ್ವಕವಾಗಿ ಗೊಂದಲಮಯ ವಾದರೂ ಕಲಾತ್ಮಕ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ.

ಇದಕ್ಕಿಂತಲೂ ಮಹತ್ವದ ಅಂಶವೇನೆಂದರೆ, Pulp Fiction ಕಥೆಯನ್ನು ಮಾತ್ರವಲ್ಲದೇ, ಸಮಯವನ್ನೂ ಸಹ ಮಿಶ್ರಣ ಮಾಡುತ್ತದೆ. ಚಿತ್ರದ ಆರಂಭ ಮತ್ತು ಅಂತ್ಯ ಒಂದೇ ಸ್ಥಳದಲ್ಲಿ ನಡೆಯುವುದು ಕೇವಲ ಸ್ಮಾರ್ಟ್ narrative trick ಅಲ್ಲ. ಅದು ಸಮಯ ವೃತ್ತಾಕಾರದ (circular) ಅನುಭವ ಎನ್ನುವ ಕಲ್ಪನೆಯನ್ನು ಸೂಚಿಸುತ್ತದೆ. ಗಡಿಯಾರಗಳು ಒಂದೇ ಸಮಯವನ್ನು ತೋರಿಸುವುದು, ಹಳೆಯ ವಸ್ತುಗಳು ಮತ್ತು ಹೊಸ ತಂತ್ರಜ್ಞಾನ ಒಂದೇ ಫ್ರೇಮಿನಲ್ಲಿ ಕಾಣಿಸುವುದು, ವಿಭಿನ್ನ ಕಾಲಘಟ್ಟಗಳ ಸಂಸ್ಕೃತಿ ಒಟ್ಟಿಗೆ ಇರುವ ಅನುಭವ – ಇವೆಲ್ಲವೂ ಕಾಲವನ್ನು ನೇರ ರೇಖೆಯಂತೆ ಕಾಣದೆ, ಪದರಗಳೊಂದಿಗೆ ಮಿಶ್ರಣಗೊಳಿಸಬಹುದಾದ ಅಂಶವಾಗಿ ಚಿತ್ರಿಸುತ್ತದೆ.

ಅರ್ಥಾತ್, Pulp Fictionನಲ್ಲಿ ಸಮಯ ಮುಂದಕ್ಕೆ ಮಾತ್ರ ಸಾಗುವುದಿಲ್ಲ. ಅದು ಹಿಂದಕ್ಕೆ ಹೋಗುತ್ತದೆ, ಅಡ್ಡವಾಗಿ, ಕೆಲವೊಮ್ಮೆ ಒಂದೇ ಹಂತದಲ್ಲಿ ಸ್ಥಗಿತಗೊಳ್ಳುತ್ತದೆ. ಈ ಕಾರಣಕ್ಕೆ ಕಥೆಯ ಅರ್ಥ ಯಾವುದು ಮೊದಲು?, ಯಾವುದು ನಂತರ? ಮತ್ತು ಯಾವ ಅರ್ಥ ಪಡೆಯುತ್ತದೆ? ಎಂಬುದರಲ್ಲಿದೆ.

Non-Linear Narrative

Pulp Fiction ಚಿತ್ರದ ಪ್ರಮುಖ ಲಕ್ಷಣವೆಂದರೆ ಅದರ non-linear narrative structure. ಅಂದರೆ, ಕಥೆಯ ಘಟನೆಗಳು ನೈಜ ಕಾಲಕ್ರಮದಲ್ಲಿ ಮುಂದುವರೆಯುವುದಿಲ್ಲ. ಒಂದು ಘಟನೆ ಮುಗಿಯುವ ಮೊದಲು ಮತ್ತೊಂದು ಘಟನೆಗೆ ಜಿಗಿಯುತ್ತದೆ; ನಂತರ ಅದೇ ಘಟನೆಯ ಹಿಂದಿನ ಅಥವಾ ಮುಂದಿನ ಕ್ಷಣಗಳನ್ನು ಬೇರೆ ಅಧ್ಯಾಯದಲ್ಲಿ ತೋರಿಸಲಾಗುತ್ತದೆ. ಆದರೆ ಈ ವಿಧಾನವನ್ನು ಟಾರಂಟಿನೋ ಗೊಂದಲ ಸೃಷ್ಟಿಸಲು ಬಳಸುವುದಿಲ್ಲ. ಇದರ ಉದ್ದೇಶ ಪ್ರೇಕ್ಷಕನ ಭಾವನಾತ್ಮಕ ಅನುಭವವನ್ನು ನಿಯಂತ್ರಿಸುವುದು ಮತ್ತು ಕಥೆಯ ಅರ್ಥವನ್ನು ಹಂತಹಂತವಾಗಿ ಆಳಗೊಳಿಸುವುದಾಗಿದೆ.

ಚಿತ್ರವನ್ನು ಸ್ಪಷ್ಟವಾಗಿ ಆರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗಕ್ಕೂ ತನ್ನದೇ ಆದ ಧ್ವನಿ, ವೇಗ ಮತ್ತು ನೈತಿಕ ತಲ್ಲಣವನ್ನು ಒಳಗೊಂಡಿದೆ.

ಡೈನರ್ ಪ್ರೊಲೋಗ್

ಚಿತ್ರದ ಆರಂಭದಲ್ಲಿ ಪ್ರೇಕ್ಷಕನು ಯಾವುದೇ ಪೂರ್ವಭಾವಿ ವಿವರಣೆ ಇಲ್ಲದೆ ನೇರವಾಗಿ ಒಂದು ಉದ್ವಿಗ್ನ ಸ್ಥಿತಿಗೆ ತಳ್ಳಲ್ಪಡುತ್ತಾನೆ. ಸಾಮಾನ್ಯ ದಿನಚರಿಯಂತೆ ಆರಂಭವಾಗುವ ಸನ್ನಿವೇಶ ಕ್ಷಣಾರ್ಧದಲ್ಲಿ ಅಪಾಯಕರ ವಾತಾವರಣಕ್ಕೆ ತಿರುಗುತ್ತದೆ. ಇದು ಚಿತ್ರದ tonal promise – ಮುಂದೆ ಏನು ಬೇಕಾದರೂ ಸಂಭವಿಸಬಹುದು ಎನ್ನುವ ಸೂಚನೆ.

ವಿನ್ಸೆಂಟ್ ಮತ್ತು ಜುಲ್ಸ್ ಹಿಟ್

ಈ ಭಾಗದಲ್ಲಿ ವೃತ್ತಿಪರ ಅಪರಾಧಿಗಳ ದಿನನಿತ್ಯದ “ಕೆಲಸ” ವನ್ನು ತೋರಿಸಲಾಗುತ್ತದೆ. ಸಾಮಾನ್ಯ ಮಾತುಕತೆ, ಹಾಸ್ಯ ಮತ್ತು ಆನಂತರ ಉಂಟಾಗುವ ಹಿಂಸೆ ಒಂದು ಸನ್ನಿವೇಶದಲ್ಲಿ ಒಟ್ಟು ಮಾಡುತ್ತವೆ. ಪ್ರೇಕ್ಷಕನಿಗೆ ಈ ಪಾತ್ರಗಳು ಅಪಾಯಕಾರಿ ಎಂಬ ಅರಿವು ಇಲ್ಲಿಯೇ ಮೂಡುತ್ತದೆ.

Vincent Vega and Marsellus Wallace’s Wife

ಈ ಅಧ್ಯಾಯವು ಸಂಪೂರ್ಣವಾಗಿ ಬೇರೆ ವೇಗದಲ್ಲಿ ಸಾಗುತ್ತದೆ. ಇಲ್ಲಿ ಕ್ರೈಮ್‌ಗಿಂತಲೂ ಮಾನಸಿಕ ಒತ್ತಡ, ಸಾಮಾಜಿಕ ಶಿಷ್ಟಾಚಾರ ಮತ್ತು ತಪ್ಪಾದ ನಿರ್ಧಾರಗಳ ಭಯ ಮುಖ್ಯವಾಗುತ್ತದೆ. ಇದು ಒಂದು ರೀತಿಯಲ್ಲಿ ಸ್ವತಂತ್ರವಾಗಿ ಕಿರುಚಿತ್ರದಂತೆ ಕಾರ್ಯನಿರ್ವಹಿಸುತ್ತಿದ್ದು, ಚಿತ್ರದ ಒಟ್ಟು ರಚನೆಗೆ ವೈವಿಧ್ಯತೆ ನೀಡುತ್ತದೆ.

The Gold Watch

ಈ ಭಾಗದಲ್ಲಿ ಕಥೆ ಹಿಂದಕ್ಕೆ ಜಿಗಿದು, ಹೊಸ ನಾಯಕನ ದೃಷ್ಟಿಕೋನವನ್ನು ಪರಿಚಯಿಸುತ್ತದೆ., ಕುಟುಂಬ ಪರಂಪರೆ ಮತ್ತು ವೈಯಕ್ತಿಕ ಗೌರವ, ನೀತಿ ಇಲ್ಲಿ ಕೇಂದ್ರ ವಿಷಯಗಳಾಗುತ್ತವೆ. ಈ ಅಧ್ಯಾಯವು ಚಿತ್ರದ ನೈತಿಕ ಆಯಾಮವನ್ನು ಗಾಢಗೊಳಿಸುತ್ತದೆ.

The Bonnie Situation

ಈ ವಿಭಾಗದಲ್ಲಿ ತೀವ್ರ ಹಿಂಸೆಯ ನಂತರದ ಪರಿಣಾಮಗಳನ್ನು ಹಾಸ್ಯಮಯವಾಗಿ ಚಿತ್ರಿಸಲಾಗುತ್ತದೆ. ಸಮಸ್ಯೆಯನ್ನು “ಸರಿಪಡಿಸುವ” ಪ್ರಕ್ರಿಯೆ, ಪಾತ್ರಗಳ ನಡುವಿನ ಸಂಬಂಧಗಳು ಮತ್ತು ಭಾಷೆಯ ಮೂಲಕ ಉದ್ಭವಿಸುವ ಒತ್ತಡ ಇಲ್ಲಿ ಮುಖ್ಯ. ಇದು ಕಥೆಯನ್ನು ಮತ್ತೆ ಪ್ರಾರಂಭದ ಕಡೆಗೆ ತರುತ್ತದೆ.

ಡೈನರ್ ಎಪಿಲೋಗ್

ಚಿತ್ರದ ಅಂತ್ಯ ಮತ್ತೆ ಆರಂಭದ ಸ್ಥಳಕ್ಕೇ ಮರಳುತ್ತದೆ. ಆದರೆ ಈಗ ಆರಂಭದಲ್ಲಿ ಸರಳವಾಗಿ ಕಂಡ ಸನ್ನಿವೇಶಕ್ಕೆ, ಈಗ ಸಂಪೂರ್ಣ ಹೊಸ ಅರ್ಥ ಸೇರ್ಪಡೆಯಾಗಿರುತ್ತದೆ. ಇಲ್ಲಿ ಜುಲ್ಸ್‌ನ ಆಂತರಿಕ ಪರಿವರ್ತನೆ ಪೂರ್ಣಗೊಳ್ಳುತ್ತದೆ.

ಈ ಆರು ವಿಭಾಗಗಳು ಕಾಲಕ್ರಮದಲ್ಲಿ ಜೋಡಿಸಲ್ಪಟ್ಟಿಲ್ಲ, ಆದರೆ ಭಾವನಾತ್ಮಕ ಮತ್ತು ಥೀಮ್ಯಾಟಿಕ್ ಕ್ರಮದಲ್ಲಿ ಜೋಡಿಸಲ್ಪಟ್ಟಿವೆ. ಅಂದರೆ, ಒಂದು ಅಧ್ಯಾಯದಲ್ಲಿ ಉಂಟಾಗುವ ಕಲ್ಪನೆ ಅಥವಾ ಸಂಭಾಷಣೆ, ಮುಂದಿನ ಅಧ್ಯಾಯದಲ್ಲಿ ಹೊಸ ಅರ್ಥ ಪಡೆಯುತ್ತದೆ. ಪ್ರೇಕ್ಷಕನು ಕಥೆಯನ್ನು “ಜೋಡಿಸುವ” ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುತ್ತದೆ.

ಈ ಸಂರಚನೆಯ ಅತ್ಯಂತ ಪ್ರಮುಖ ಪರಿಣಾಮವೆಂದರೆ ವಿಮೋಚನೆ (redemption) ಎಂಬ ವಿಷಯದ ನಿರ್ವಹಣೆ. ಜುಲ್ಸ್‌ನ ವಿಮೋಚನೆ ಕಥೆಯ ಮಧ್ಯಭಾಗದಲ್ಲಿ ನಡೆಯುತ್ತದಾದರೂ, ಅದನ್ನು ಚಿತ್ರದ ಅಂತ್ಯದಲ್ಲಿ ತೋರಿಸುವ ಮೂಲಕ ಟಾರಂಟಿನೋ ಅದಕ್ಕೆ ಭಾವನಾತ್ಮಕ ಮಹತ್ವ ನೀಡುತ್ತಾನೆ. ಕಥೆ ಕಾಲಕ್ರಮದಲ್ಲಿ ಮುಗಿಯದಿದ್ದರೂ, ಅರ್ಥಾತ್ಮಕವಾಗಿ ಮುಗಿಯುತ್ತದೆ.

ಸಂಭಾಷಣೆ

Pulp Fictionನಲ್ಲಿ ಹಿಂಸೆ ಎಂದರೆ ಕೇವಲ ಗುಂಡಿನ ಸದ್ದು, ರಕ್ತಪಾತ ಅಥವಾ ದೈಹಿಕ ಯಾತನೆ ಮಾತ್ರವಲ್ಲ. ವಾಸ್ತವವಾಗಿ ಈ ಚಿತ್ರದಲ್ಲಿ ನೇರ ಹಿಂಸೆ ಆಶ್ಚರ್ಯರೀತಿಯಲ್ಲಿ ಕಡಿಮೆ. ಆದರೆ ಅದರ ಬದಲು ಹಿಂಸೆಯ ಭಾವನೆ, ಹಿಂಸೆಯ ಸಾಧ್ಯತೆ ಮತ್ತು ಹಿಂಸೆಯ ಒತ್ತಡ ಸಂಭಾಷಣೆಯ ಮೂಲಕ ನಿರಂತರವಾಗಿ ಹರಿಯುತ್ತದೆ. ಟಾರಂಟಿನೋ ಇಲ್ಲಿ ಕ್ರಿಯೆಯಿಗಿಂತ ಮಾತಿನ ಮೂಲಕ ಭಯ ಮತ್ತು ತೀವ್ರತೆ ಸೃಷ್ಟಿಸುವ ವಿಧಾನವನ್ನು ಅತಿ ಜಾಗ್ರತೆಯಿಂದ ಬಳಸಿದ್ದಾರೆ.

ಈ ಚಿತ್ರದ ಪಾತ್ರಗಳು ಮಾತನಾಡುವ ರೀತಿಯೇ ಪ್ರೇಕ್ಷಕರಲ್ಲಿ ಆತಂಕ ಹುಟ್ಟಿಸುತ್ತದೆ. ಸಾಮಾನ್ಯ ವಿಷಯಗಳ ಬಗ್ಗೆ ನಡೆಯುವ ಮಾತುಕತೆ-ಬರ್ಗರ್, ಟಿವಿ ಶೋಗಳು, ಸಂಗೀತ-ಕ್ಷಣಾರ್ಧದಲ್ಲಿ ಜೀವ–ಮರಣದ ಸ್ಥಿತಿಗೆ ತಿರುಗುತ್ತದೆ. ಈ ತಿರುವು ಪ್ರೇಕ್ಷಕರನ್ನು ಸದಾ ಎಚ್ಚರ ಸ್ಥಿತಿಯಲ್ಲಿ ಇಡುತ್ತದೆ. ಏಕೆಂದರೆ ಇಲ್ಲಿ ಮಾತು ಯಾವಾಗ ಬೇಕಾದರೂ ಕ್ರಿಯೆಯಾಗಿ ಸ್ಫೋಟಗೊಳ್ಳಬಹುದು ಎಂಬ ಭಾವನೆ ನಿರಂತರವಾಗಿರುತ್ತದೆ.

ಪದಗಳ ಆಯ್ಕೆ ಕೂಡ ಅತ್ಯಂತ ಉದ್ದೇಶಪೂರ್ವಕವಾಗಿವೆ ಪಾತ್ರಗಳು “ಕೊ8ಲ್ಲುವುದು” ಎಂದು ನೇರವಾಗಿ ಹೇಳುವುದಿಲ್ಲ; ಬದಲಾಗಿ ಧರ್ಮ, ನೀತಿ, ಕರ್ತವ್ಯ ಎಂಬ ಭಾಷೆಯನ್ನು ಬಳಸುತ್ತವೆ. ಇದರ ಪರಿಣಾಮವಾಗಿ ಹಿಂಸೆ ಕೇವಲ ಅಪರಾಧವಾಗಿ ಕಾಣದೆ, ಒಂದು ರೀತಿಯ ನೈತಿಕವಾಗಿ ಸಮರ್ಥಿಸಿಕೊಳ್ಳಲ್ಪಟ್ಟ ಕ್ರಿಯೆಯಂತೆ ಪ್ರಸ್ತುತವಾಗುತ್ತದೆ. ಇದು ಪ್ರೇಕ್ಷಕರಿಗೆ Uncomfortable ಅನುಭವ ನೀಡುತ್ತದೆ, ಏಕೆಂದರೆ ತಪ್ಪು ಕೆಲಸಕ್ಕೆ ಸರಿಯಾದ ಪದಗಳು ಬಳಸಲ್ಪಡುತ್ತಿರುವಂತೆ ಭಾಸವಾಗುತ್ತದೆ.

ಇದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ಜುಲ್ಸ್ ಉಚ್ಚರಿಸುವ “Ezekiel 25:17” ಭಾಷಣ. ಮೇಲ್ನೋಟಕ್ಕೆ ಇದು ಧಾರ್ಮಿಕ ವಾಕ್ಯವಾಗಿದ್ದು, ದೇವರ ನ್ಯಾಯವನ್ನು ಪ್ರತಿನಿಧಿಸುವಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ ಅದು ನಿಜವಾದ ಬೈಬಲ್ ಉಲ್ಲೇಖವಲ್ಲ; ವಿವಿಧ ಧಾರ್ಮಿಕ ಸಾಲುಗಳನ್ನು ಮತ್ತು ಜುಲ್ಸ್‌ನ ಸ್ವಂತ ಪದಗಳನ್ನು ಸೇರಿಸಿ ರಚಿಸಲಾದ ಸಂಭಾಷಣೆ. ಈ ಭಾಷಣವನ್ನು ಜುಲ್ಸ್ ಹಿಂಸೆಗಿಂತ ಮುನ್ನ ಉಚ್ಚರಿಸುವುದು ಮಹತ್ವದ್ದಾಗಿದೆ. ಇದು ಅವನಿಗೆ ತಾನು ಮಾಡುವ ಕೊಲೆಗಳನ್ನು ಧಾರ್ಮಿಕ ಕರ್ತವ್ಯವೆಂದು ಭಾವಿಸುವ ಭ್ರಮೆ ನೀಡುತ್ತದೆ. ಮಾತಿನ ಮೂಲಕ ಅವನು ತನ್ನ ಕ್ರಿಯೆಗೆ ನೈತಿಕ ಮುಖವಾಡ ಹಾಕಿಕೊಳ್ಳುತ್ತಾನೆ.

ಚಿತ್ರದ ಆರಂಭದ ಭಾಗಗಳಲ್ಲಿ ಈ ಭಾಷಣ ಒಂದು Cold, mechanical ವಿಧಿವಿಧಾನದಂತೆ ಕೇಳಿಸುತ್ತದೆ. ಜುಲ್ಸ್‌ಗೆ ಅದರ ಅರ್ಥ ಮುಖ್ಯವಲ್ಲ; ಅದು ಕೇವಲ ಭಯ ಹುಟ್ಟಿಸುವ ಸಾಧನ. ಆದರೆ ನಂತರ, ಅದೇ ಸಂಭಾಷಣೆಯನ್ನು ಅವನು ಮತ್ತೆ ವಿವರಿಸುವಾಗ, ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ. ಈ ಬಾರಿ ಮಾತು ಭಯ ಹುಟ್ಟಿಸಲು ಅಲ್ಲ, self-examination ಗೆ ಬಳಸಲ್ಪಡುತ್ತದೆ. ಜುಲ್ಸ್ ತನ್ನದೇ ಪದಗಳನ್ನು ಪ್ರಶ್ನಿಸಲು ಆರಂಭಿಸುತ್ತಾನೆ.”ನಾನು ಯಾರು? ನಾನು ನ್ಯಾಯದ ಪ್ರತಿನಿಧಿಯೇ, ಅಥವಾ ಹಿಂಸೆಯ ಸಾಧನವೇ?” ಎಂಬ ಪ್ರಶ್ನೆಗಳು ಸಂಭಾಷಣೆಯಲ್ಲಿಯೇ ಹೊರಹೊಮ್ಮುತ್ತವೆ.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಜುಲ್ಸ್‌ನ ಆಂತರಿಕ ಪರಿವರ್ತನೆ ಯಾವುದೇ ದೊಡ್ಡ ಕ್ರಿಯೆಯಿಂದ ಅಲ್ಲ, ಮಾತಿನಿಂದಲೇ ಸಂಭವಿಸುತ್ತದೆ. ಅವನು ಗುಂಡು ಹಾರಿಸುವುದನ್ನು ನಿಲ್ಲಿಸುತ್ತಾನೆ; ಆದರೆ ಅದಕ್ಕಿಂತ ಮೊದಲು ತನ್ನ ಭಾಷೆಯನ್ನು ಮರುಅರ್ಥೈಸುತ್ತಾನೆ. ಈ ಕಾರಣಕ್ಕೆ Pulp Fictionನಲ್ಲಿ ಸಂಭಾಷಣೆ ಕೇವಲ ಕಥೆಯನ್ನು ಮುಂದೂಡುವ ಸಾಧನಮಾತ್ರವೇ ಆಗಿರದೇ, ಅದು ಪಾತ್ರಗಳ ಮನಸ್ಸಿನೊಳಗಿನ ಹಿಂಸೆಯನ್ನು ಬಹಿರಂಗಪಡಿಸುವ ಕನ್ನಡಿಯಾಗಿದೆ.

ದೃಶ್ಯ ಶೈಲಿ

Pulp Fictionನಲ್ಲಿ ಕ್ಯಾಮೆರಾ ಕೇವಲ ದೃಶ್ಯಗಳನ್ನು ಸೆರೆ ಹಿಡಿಯುವ ಸಾಧನವಾಗಿರುವುದಿಲ್ಲ. ಅದು ಕಥೆಯೊಳಗೆ ಸಕ್ರಿಯವಾಗಿ ಪ್ರತಿಕ್ರಿಯಿಸುವ, ಕೆಲವೊಮ್ಮೆ ಪಾತ್ರಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಒಂದು ನಿಶ್ಶಬ್ದ ಪಾತ್ರದಂತೆ ವರ್ತಿಸುತ್ತದೆ. ಟಾರಂಟಿನೋ ಪ್ರತಿ ದೃಶ್ಯಕ್ಕೆ ಒಂದೇ ರೀತಿಯ ಕ್ಯಾಮೆರಾ ಶೈಲಿಯನ್ನು ಬಳಸುವುದಿಲ್ಲ; ಬದಲಾಗಿ, ದೃಶ್ಯದ ಭಾವನಾತ್ಮಕ ಅಗತ್ಯಕ್ಕೆ ತಕ್ಕಂತೆ ಕ್ಯಾಮೆರಾ ತನ್ನ ವರ್ತನೆಯನ್ನು ಬದಲಿಸುತ್ತದೆ.

ದೀರ್ಘದ tracking shotsಗಳನ್ನು ಬಳಸುವಾಗ, ಪಾತ್ರಗಳ ನಡುವಿನ ಸಂಬಂಧ, ಅವರ ನಡುವಿನ ಸಹಜತೆ ಮತ್ತು ಒಟ್ಟಿಗೆ ಕೆಲಸ ಮಾಡುವ ರೀತಿ ಸ್ಪಷ್ಟವಾಗುತ್ತದೆ. ಉದಾಹರಣೆಗೆ, ವಿನ್ಸೆಂಟ್ ಮತ್ತು ಜುಲ್ಸ್ ಒಟ್ಟಿಗೆ ನಡೆಯುವ ದೃಶ್ಯಗಳಲ್ಲಿ ಕ್ಯಾಮೆರಾ ಅವರನ್ನು ನಿರಂತರವಾಗಿ ಅನುಸರಿಸುತ್ತದೆ. ಇದರಿಂದ ಅವರು ಒಂದು ತಂಡ, ಒಂದೇ ಮನಸ್ಥಿತಿಯಲ್ಲಿ ಇರುವವರು ಎಂಬ ಭಾವನೆ ಮೂಡುತ್ತದೆ.

ಇದಕ್ಕೆ ವಿರುದ್ಧವಾಗಿ, handheld camera ಬಳಕೆಯಾಗುವ ದೃಶ್ಯಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದಿಲ್ಲ. ಕ್ಯಾಮೆರಾದ ಸ್ವಲ್ಪ ಕಂಪನವೂ ಪ್ರೇಕ್ಷಕರಲ್ಲಿ ಅಶಾಂತಿ, ಆತಂಕ ಮತ್ತು ತುರ್ತು ಪರಿಸ್ಥಿತಿಯ ಭಾವನೆ ಹುಟ್ಟಿಸುತ್ತದೆ. ಮಿಯಾ ಜೀವಾಪಾಯದಲ್ಲಿರುವ ದೃಶ್ಯಗಳಲ್ಲಿ ಈ ಶೈಲಿ ಬಳಸಲ್ಪಡುವುದು, ಪರಿಸ್ಥಿತಿಯ ಅಸ್ಥಿರತೆಯನ್ನು ನೇರವಾಗಿ ಅನುಭವಿಸುವಂತೆ ಮಾಡುತ್ತದೆ.

Pulp Fiction
Pulp Fiction | Uma Thurman’s feet scene

ಬೆಳಕು ಮತ್ತು ನೆರಳಿನ ಬಳಕೆ ಕೂಡ ಅರ್ಥಪೂರ್ಣ. ಕೆಲವು ದೃಶ್ಯಗಳಲ್ಲಿ ಪಾತ್ರಗಳ ಮುಖ ಅರ್ಧ ಬೆಳಕಿನಲ್ಲಿ, ಅರ್ಧ ನೆರಳಿನಲ್ಲಿ ಕಾಣುತ್ತದೆ. ಇದು ಅವರು ಎದುರಿಸುತ್ತಿರುವ ನೈತಿಕ ಆಯ್ಕೆಗಳು-ಸರಿಯೇ ತಪ್ಪೇ ಎಂಬ ದ್ವಂದ್ವ ರೂಪದಲ್ಲಿ ವ್ಯಕ್ತವಾಗುತ್ತದೆ.

ಬುಚ್ ತನ್ನ ಅಮೂಲ್ಯ ವಾಚ್ ಮರೆತಿದ್ದಾನೆ ಎಂಬ ಅರಿವು ಮೂಡುವ ಕ್ಷಣದಲ್ಲಿನ ಕ್ಯಾಮೆರಾ ಚಲನೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಯಾವುದೇ ನಾಟಕೀಯ ಸಂಗೀತವಿಲ್ಲದೇ, ಯಾವುದೇ ಜೋರಾದ ಕಟ್ ಇಲ್ಲದೇ. ಕ್ಯಾಮೆರಾ ನಿಧಾನವಾಗಿ close-upಗೆ ಸರಿಯುತ್ತದೆ. ಈ ನಿಧಾನ ಚಲನೆಯೇ ಒಳಗಿನ ಒತ್ತಡವನ್ನು ಹೆಚ್ಚಿಸುತ್ತದೆ.

ಕಾಲಘಟ್ಟಗಳ ಮಿಶ್ರಣ

Pulp Fictionನಲ್ಲಿ ಕಾಲವನ್ನು ನೈಜ ಜಗತ್ತಿನಂತೆ ನಿರ್ದಿಷ್ಟ ವರ್ಷ ಅಥವಾ ದಶಕಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಇಲ್ಲಿ ಹಳೆಯದು ಮತ್ತು ಹೊಸದು ಒಂದೇ ಫ್ರೇಮಿನಲ್ಲಿ ಸಹಜವಾಗಿ ಒಟ್ಟುಗೂಡಿಸುತ್ತದೆ.

ಒಂದು ಕಡೆ 1950ರ ಶೈಲಿಯ ಡೈನರ್, ಇನ್ನೊಂದು ಕಡೆ ಆಧುನಿಕ ಕಾಲದ ಪಾತ್ರಗಳು. reel-to-reel tape recorder ಇದ್ದರೂ, contemporary ಸಂಭಾಷಣೆ. ಹಳೆಯ ಮಾದರಿಯ ಟಿವಿ ಸೆಟ್‌ನಲ್ಲಿ ಹೊಸ ಕಾರ್ಯಕ್ರಮಗಳು. 1940ರ ಶೈಲಿಯ ಟ್ಯಾಕ್ಸಿಯಲ್ಲಿ ಇಂದಿನ ಕಥಾನಾಯಕ ಪ್ರಯಾಣಿಸುತ್ತಾನೆ.

ಈ ಮಿಶ್ರಣ ಉದ್ದೇಶಪೂರ್ವಕವಾದ aesthetics ಆಯ್ಕೆ. ಇದರ ಪರಿಣಾಮವಾಗಿ ಕಥೆ ಯಾವ ಕಾಲದಲ್ಲಾದರೂ ನಡೆಯಬಹುದಾದಂತೆ ಭಾಸವಾಗುತ್ತದೆ. ಇದು “1990ರ ಕಥೆ” ಅಲ್ಲ, “ಒಂದು ಯುಗದ ಕಥೆ” ಕೂಡ ಅಲ್ಲ. ಇದು ಪೌರಾಣಿಕ ಕಾಲದಂತಿರುವ ಕ್ರೈಮ್ ಕಥೆ, ಯಾವಾಗ ಬೇಕಾದರೂ ಪುನರಾವರ್ತಿಸಬಹುದಾದ ಮಾನವೀಯ ಪರಿಸ್ಥಿತಿಗಳ ಕಥೆಎನ್ನುವಂತೆ ಬಿಂಬಿಸಲಾಗುತ್ತದೆ.

ಸಂಗೀತ

Pulp Fictionನಲ್ಲಿ ಸಂಪ್ರದಾಯಬದ್ಧ background score ಬಹಳ ಕಡಿಮೆ. ಬದಲಾಗಿ ಟಾರಂಟಿನೋ ಹಳೆಯ pop, surf rock, soul ಹಾಡುಗಳನ್ನು ಬಳಸುತ್ತಾನೆ. ಈ ಹಾಡುಗಳು ಕೇವಲ ಮನರಂಜನೆಯಾಗಿ ಉಳಿಯುವುದಿಲ್ಲ ಅವು ದೃಶ್ಯದ ಅಂತರಂಗವನ್ನು ಹೇಳುವ ಮೌನದ ಭಾಷೆಯಾಗಿ ಕಾರ್ಯ ನಿರ್ವಹಿಸುತ್ತದೆ.

Girl, You’ll Be a Woman Soon ಹಾಡು ಮಿಯಾ ಮತ್ತು ವಿನ್ಸೆಂಟ್ ನಡುವಿನ ಸಂಬಂಧದ ಒತ್ತಡವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹಾಡಿನ ಧ್ವನಿ ಮೃದುವಾಗಿ, ಭಾವನಾತ್ಮಕವಾಗಿ ದೃಶ್ಯದ ಒಳಗಿನ ಪರಿಸ್ಥಿತಿ ಅಪಾಯಕರ ಸ್ಥಿತಿಯ ವ್ಯತ್ಯಾಸದಿಂದ ಒಂದು ವಿಚಿತ್ರ Discomfort ಹುಟ್ಟುತ್ತದೆ. ಇದನ್ನೇ ಭಾವನಾತ್ಮಕ ವ್ಯಂಗ್ಯ (irony) ಎಂದು ಹೇಳಬಹುದು.

ಪಾತ್ರಗಳ aesthetics

Pulp Fictionನಲ್ಲಿ ನಾಯಕ-ಖಳನಾಯಕ ಎಂಬ ಸರಳ ವರ್ಗೀಕರಣ ಇಲ್ಲ. ಇಲ್ಲಿ ಇರುವವರು ಸಂಪೂರ್ಣ ಪವಿತ್ರರೂ ಅಲ್ಲ, ಸಂಪೂರ್ಣ ದುಷ್ಟರೂ ಅಲ್ಲ. ಅವರು ಮಾನವೀಯ ವಿರೋಧಾಭಾಸಗಳಿಂದ ತುಂಬಿರುವವರು.

ವಿನ್ಸೆಂಟ್ ಒಬ್ಬ ಹ$ತ್ಯೆಗಾರ. ಆದರೆ ಅವನು ಕಾರನ್ನು ಹಾನಿ ಮಾಡುವುದು ತಪ್ಪು ಎಂದು ಭಾವಿಸುತ್ತಾನೆ. ಬುಚ್ ಅಪರಾಧಿ, ಆದರೆ ಅವನು ತನ್ನ ಶತ್ರುವನ್ನೇ ಉಳಿಸುವ ಮಟ್ಟದ ನೈತಿಕ ಧೈರ್ಯ ತೋರಿಸುತ್ತಾನೆ. ಜುಲ್ಸ್ ಹಿಂಸೆಯ ಜಗತ್ತಿನಲ್ಲಿ ಬದುಕಿದ್ದರೂ, ಅದರಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ.

ಇವರು gray characters ಎಂದು ಕರೆಯಬಹುದು. ಅವರಲ್ಲಿರುವ ಈ ನೈತಿಕ ಅಸ್ಪಷ್ಟತೆಯೇ ಚಿತ್ರದ aesthetics. ಪ್ರೇಕ್ಷಕರು ಅವರನ್ನು ತೀರ್ಮಾನಿಸುವ ಬದಲು, ಅರ್ಥಮಾಡಿಕೊಳ್ಳಬೇಕಾದ ಸ್ಥಿತಿಗೆ ಬರುತ್ತಾರೆ.

ರಶೋಮೊನ್ ಚಿತ್ರದ ಸೌಂದರ್ಯ ವಿಶ್ಲೇಷಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Redemption

Pulp Fiction ಕೊನೆಯಲ್ಲಿ ಹೇಳುವ ಸಂದೇಶ ತುಂಬಾ ಆಳವಾಗಿದೆ: “ವಿಮೋಚನೆ ಸಾಧ್ಯ, ಆದರೆ ಅದು ಎಲ್ಲರಿಗೂ ಸ್ವಯಂಚಾಲಿತವಾಗಿ ದೊರೆಯುವುದಿಲ್ಲ” ಎನ್ನುವುದು.

ಜುಲ್ಸ್ ತನ್ನ ಜೀವನದ ದಿಕ್ಕನ್ನು ಬದಲಿಸಲು ಆಯ್ಕೆಮಾಡುತ್ತಾನೆ. ಬುಚ್ ತನ್ನ ಕಾರ್ಯದ ಮೂಲಕ ತಾನು ಒಳ್ಳೆಯ ಮನುಷ್ಯನಾಗಬಲ್ಲೆ ಎಂಬುದನ್ನು ಸಾಬೀತುಪಡಿಸುತ್ತಾನೆ. ವಿನ್ಸೆಂಟ್‌ಗೆ ಕೂಡ ಅವಕಾಶ ಸಿಗುತ್ತದೆ, ಆದರೆ ಅವನು ಅದನ್ನು ನಿರಾಕರಿಸುತ್ತಾನೆ-ಮತ್ತು ಪರಿಣಾಮ ಅನುಭವಿಸುತ್ತಾನೆ.

Briefcase

ಬ್ರಿಫ್‌ಕೇಸ್‌ನೊಳಗೆ ಏನಿದೆ ಎಂಬುದು ಪ್ರಶ್ನೆಯಲ್ಲ. ಅದನ್ನು ತೋರಿಸದೇ ಇರುವುದರಿಂದಲೇ aesthetics ಹೆಚ್ಚಿನ ಪರಿಣಾಮವನ್ನು ಸೃಸ್ಟಿಸುತ್ತದೆ.

ಅದರೊಳಗಿನ ಬೆಳಕು, ಪಾತ್ರಗಳ ಮುಖದಲ್ಲಿನ ಪ್ರತಿಕ್ರಿಯೆ, ಪ್ರೇಕ್ಷಕರಲ್ಲಿ ಹುಟ್ಟುವ ಕುತೂಹಲ-ಇವೆಲ್ಲವೂ ಸೇರಿ ಒಂದು ಅನುಭವವನ್ನು ಸೃಷ್ಟಿಸುತ್ತವೆ.

ಇದು ಅರ್ಥ ನೀಡುವ ಅಥವಾ ಕಲ್ಪನೆಗೆ ಅವಕಾಶ ನೀಡುವ ವಸ್ತು. Hitchock ವಿವರಿಸಿದ MacGuffin ತತ್ವದ ಪ್ರಕಾರ “ಒಂದು ವಸ್ತು, ರಹಸ್ಯ ಅಥವಾ ಗುರಿ – ಅದು ನಿರೂಪಣೆಯನ್ನು ಮುಂದುವರೆಸುತ್ತದೆ ಮತ್ತು ಪಾತ್ರಗಳನ್ನು ಪ್ರೇರೇಪಿಸುತ್ತದೆ, ಆದರೆ ಪ್ರೇಕ್ಷಕರಿಗೆ ಅಪ್ರಸ್ತುತವಾಗುತ್ತದೆ”. ಇದಕ್ಕೆ ಅತ್ಯುತ್ತಮ ಉದಾಹರಣೆ ಬ್ರಿಫ್‌ಕೇಸ್‌. ಕಥೆಗೆ ಅದು ಅಗತ್ಯ, ಆದರೆ ಅದರ ಅರ್ಥಕ್ಕಿಂತ ಅದರ ಪರಿಣಾಮ ಮುಖ್ಯ.

ಉಪಸಂಹಾರ

Pulp Fiction ಸಿನಿಮಾ ಭಾಷೆಯನ್ನು ಪುನರ್‌ವ್ಯಾಖ್ಯಾನಿಸಿದ ಕೃತಿ.

  • ಇಲ್ಲಿ ಕಥನಕ್ಕೆ ನಿಶ್ಚಿತ ನಿಯಮಗಳಿಲ್ಲ.
  • ಕಾಲ ಒಂದು ಆಟಿಕೆ.
  • ಸಂಭಾಷಣೆ ಕ್ರಿಯೆಗಿಂತ ಶಕ್ತಿಶಾಲಿ.
  • ಹಿಂಸೆ ಕಡಿಮೆ ಆದರೆ ಅದರ ಅರ್ಥ ಹೆಚ್ಚು.

ಇದು 1990ರ ದಶಕದ ಅತ್ಯಂತ ಪ್ರಭಾವಶಾಲಿ ಚಿತ್ರಗಳಲ್ಲಿ ಒಂದಷ್ಟೇ ಅಲ್ಲ. ಇದು ಆಧುನಿಕ ಸಿನಿಮಾಗಳ aestheticsಗೆ ಪಾಠಪುಸ್ತಕ. ಪುನಃ-ಪುನಃ ನೋಡಿದಾಗಲೂ ಹೊಸ ಅರ್ಥ ನೀಡುವ ಶಕ್ತಿ ಇದಕ್ಕಿದೆ.

Core Plot

ಒಂದೇ ನಗರದಲ್ಲಿ ಒಟ್ಟಿಗೆ ಜೀವಿಸುವ ಹಲವರ ಜೀವನದ ಸಮೂಹ ಚಿತ್ರಣ. ಇಲ್ಲಿ ನಾಯಕ–ಪ್ರತಿನಾಯಕ ಎಂಬ ಸಾಂಪ್ರದಾಯಿಕ ವ್ಯವಸ್ಥೆ ಇಲ್ಲ. ಕಥೆ ಒಂದು ಗುರಿಯತ್ತ ಸಾಗುವುದಿಲ್ಲ. ಬದಲಾಗಿ, ವಿಭಿನ್ನ ವ್ಯಕ್ತಿಗಳು ತಮ್ಮ ತಮ್ಮ ಆಯ್ಕೆಗಳು ಮತ್ತು ನಿರ್ಧಾರಗಳ ಮೂಲಕ ಒಂದೇ ನೈತಿಕ ವಲಯದಲ್ಲಿ ಸಿಲುಕಿಕೊಂಡಿರುವ ಸ್ಥಿತಿಯನ್ನು ಚಿತ್ರಿಸುತ್ತದೆ.

ಈ ಸಿನಿಮಾದಲ್ಲಿ ಗ್ಯಾಂಗ್ಸ್ಟರ್‌ಗಳು, ಬಾಕ್ಸರ್, ಅಪರಾಧ ಲೋಕದ ಮಧ್ಯವರ್ತಿಗಳು, ಸಾಮಾನ್ಯ ನಾಗರಿಕರು—ಎಲ್ಲರೂ ಒಂದೇ ಕಥಾ ಜಗತ್ತಿನಲ್ಲಿ ವಾಸ ಮಾಡುತ್ತಾರೆ. ಇವರ ಜೀವನಗಳು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಪರಸ್ಪರ ತಾಕುತ್ತವೆ.

ಇಲ್ಲಿ ಮುಖ್ಯವಾಗಿರುವುದು “ಏನು ನಡೆಯುತ್ತದೆ? ಯಾವ ಸಂದರ್ಭದಲ್ಲಿದೆ? ಅದನ್ನು ನಾವು ಯಾವ ಕ್ರಮದಲ್ಲಿ ನೋಡುತ್ತೇವೆ? ಎಂಬುದೇ ಮುಖ್ಯ.

ಒಂದೇ ಸಂಭಾಷಣೆ ಒಂದು ಭಾಗದಲ್ಲಿ ಹಾಸ್ಯವಾಗಿ ಕಾಣಬಹುದು. ಆದರೆ ಅದೇ ಮಾತು, ಬೇರೆ ಭಾಗದಲ್ಲಿ, ಹೊಸ ಹಿನ್ನೆಲೆಯೊಂದಿಗೆ ತೋರಿಸಿದಾಗ ಹಿಂ$ಸಾತ್ಮಕ ಅಥವಾ ಅಶಾಂತ ಅರ್ಥ ಪಡೆಯುತ್ತದೆ. ಇದರಿಂದ ಪ್ರೇಕ್ಷಕ ಕಥೆಯನ್ನು ಜಡವಾಗಿ ಸ್ವೀಕರಿಸುವುದರೊಂದಿಗೆ ಅವನು ಅದನ್ನು ಮರುಪರಿಶೀಲಿಸಬೇಕಾಗುತ್ತದೆ.

Audience Response

Pulp Fiction ಬಿಡುಗಡೆಯಾದಾಗ ಅದು ಸಾಮಾನ್ಯ ಪ್ರತಿಕ್ರಿಯೆ ಪಡೆದ ಸಿನಿಮಾ ಅಗಿರಲಿಲ್ಲ. ಪ್ರೇಕ್ಷಕರ ಪ್ರತಿಕ್ರಿಯೆ ವಿಭಿನ್ನ ಮತ್ತು ಚರ್ಚಾತ್ಮಕವಾಗಿತ್ತು. ಕೆಲವರಿಗೆ ಇದು ಅದ್ಭುತ ಕಲಾತ್ಮಕ ಅನುಭವವಾಗಿದ್ದರೆ, ಇನ್ನೂ ಕೆಲವರಿಗೆ ಇದು ಅತಿಯಾಗಿ ಮಾತನಾಡುವ, ನಿಯಮವಿಲ್ಲದ, ಅಸಹಜ ಸಂರಚನೆಯ ಚಿತ್ರವಾಗಿ ಕಂಡಿತು.

ಕೆಲವರು ಚಿತ್ರಮಂದಿರದಲ್ಲೇ ದಿಗ್ಘ್ರಾಂತವನ್ನು ಅನುಭವಿಸಿದರು—ಕಥೆಯ ಕ್ರಮ, ಸಂಭಾಷಣೆಯ ತೀವ್ರತೆ ಮತ್ತು ಅಸಾಂಪ್ರದಾಯಿಕ ನಿರ್ವಹಣೆ ಅವರಿಗೆ ಹೊಸ ಅನುಭವವಾಗಿತ್ತು.

ವಿಶೇಷವಾಗಿ ಯುವ ಪ್ರೇಕ್ಷಕರು ಈ ಚಿತ್ರದ ಸಂಭಾಷಣೆ, ಸಂಗೀತ ಆಯ್ಕೆ, ಪಾತ್ರಗಳ ನೈತಿಕ ಅಸ್ಪಷ್ಟತೆ ಮತ್ತು non-linear ಕಥನದಿಂದ ತೀವ್ರವಾಗಿ ಆಕರ್ಷಿತರಾದರು. ಈ ಸಿನಿಮಾ ನೋಡಿದ ನಂತರ “ಸಿನಿಮಾ ಎಂದರೆ ಹೀಗೆಯೇ ಇರಬೇಕು” ಎಂಬ ಸಾಂಪ್ರದಾಯಿಕ ಕಲ್ಪನೆ ಅನೇಕ ಪ್ರೇಕ್ಷಕರಲ್ಲಿ ಬದಲಾಗಿದೆ.

ಅನೇಕರು non-linear narrative ಅನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದು ಇದೇ ಚಿತ್ರದ ಮೂಲಕ. ಕಥೆ ನೇರವಾಗಿ ಸಾಗದೆ ಇದ್ದರೂ ಅರ್ಥಪೂರ್ಣವಾಗಿರಬಹುದು ಎಂಬುದನ್ನು Pulp Fiction ಸಾಬೀತುಪಡಿಸಿತು.

Budget ಮತ್ತು Profit

Pulp Fiction ಯಾವುದೇ ದೊಡ್ಡ ಸ್ಟುಡಿಯೋ extravaganza ಸಿನಿಮಾ ಅಲ್ಲ. ಇದರಲ್ಲಿ ಭಾರಿ ಸೆಟ್‌ಗಳು, ವಿಶೇಷ ದೃಶ್ಯಪ್ರಭಾವಗಳು ಅಥವಾ ದುಬಾರಿ ತಂತ್ರಜ್ಞಾನಗಳಿಲ್ಲ. ಇದು comparatively ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರ.

  • ಅಂದಾಜು ನಿರ್ಮಾಣ ವೆಚ್ಚ: ಸುಮಾರು 8 ಮಿಲಿಯನ್ ಡಾಲರ್
  • ಅಮೆರಿಕದ ಬಾಕ್ಸ್ ಆಫೀಸ್ ಗಳಿಕೆ: ಸುಮಾರು 108 ಮಿಲಿಯನ್ ಡಾಲರ್
  • ವಿಶ್ವವ್ಯಾಪಿ ಒಟ್ಟು ಗಳಿಕೆ: ಸುಮಾರು 213 ಮಿಲಿಯನ್ ಡಾಲರ್

ಈ ಸಂಖ್ಯೆಗಳು ಏನು ಹೇಳುತ್ತವೆ ಎಂದರೆ -ಸಿನಿಮಾ ಯಶಸ್ಸಿಗೆ ದೊಡ್ಡ ಬಜೆಟ್ ಮುಖ್ಯವಲ್ಲ.

ಕಥೆ, ದೃಷ್ಟಿಕೋನ ಮತ್ತು ಶೈಲಿ ಬಲವಾಗಿದ್ದರೆ, ಪ್ರೇಕ್ಷಕರು ತಾವೇ ಚಿತ್ರವನ್ನು ಅಪ್ಪಿಕೊಳ್ಳುತ್ತಾರೆ ಎನ್ನುವುದು.

Pulp Fiction independent-style filmmaking ಕೂಡ mainstream ಪ್ರೇಕ್ಷಕರಿಗೆ ತಲುಪಬಹುದು ಎಂಬ ನಂಬಿಕೆಯನ್ನು ಸಂಪೂರ್ಣ ಚಿತ್ರರಂಗಕ್ಕೆ ನೀಡಿತು. ಇದು ಅನೇಕ ಹೊಸ ನಿರ್ದೇಶಕರಿಗೆ ದಾರಿ ತೆರೆದ ಸಿನಿಮಾ.

Awards

Pulp Fiction ಕೇವಲ ಪ್ರೇಕ್ಷಕರನ್ನು ಮಾತ್ರ ಅಲ್ಲ, ವಿಮರ್ಶಕರನ್ನೂ ಆಳವಾಗಿ ಪ್ರಭಾವಿತಗೊಳಿಸಿದ ಚಿತ್ರ. ಇದು ಒಂದು cult phenomenon ಆಗಿ ಉಳಿಯುವುದರ ಜೊತೆಗೆ, ಅಧಿಕೃತ ಪ್ರಶಸ್ತಿಗಳಲ್ಲೂ ತನ್ನ ಸ್ಥಾನವನ್ನು ಸ್ಥಾಪಿಸಿತು.

ಪ್ರಮುಖ ಸಾಧನೆಗಳು:

  • Cannes Film Festival – Palme d’Or (ಜಗತ್ತಿನ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದು)
  • Academy Awards (Oscars)– 7 ನಾಮನಿರ್ದೇಶನಗಳು– Best Original Screenplay ಪ್ರಶಸ್ತಿ ಜಯ
  • Golden Globe, BAFTA ಮತ್ತು ಅನೇಕ ಅಂತರರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿಗಳು

ವಿಮರ್ಶಕರು ಈ ಚಿತ್ರವನ್ನು “1990ರ ದಶಕದ ಅತ್ಯಂತ ಪ್ರಭಾವಶಾಲಿ ಸಿನಿಮಾ”ಎಂದು ವರ್ಣಿಸಿದ್ದಾರೆ.

For the latest updates and comprehensive writing guides, follow us on Instagram, Facebook, and Telegram.

- Advertisement -spot_img
- Advertisement -spot_img
Stay Connected
44,085FansLike
65,000FollowersFollow
52,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here

You cannot copy content of this page